Pailwaan Movie: ಪೈಲ್ವಾನ್​ನ ಗುರು ಸರ್ಕಾರ್​: ಸುನೀಲ್​ ಶೆಟ್ಟಿಯ ರಗಡ್​ ಲುಕ್​ ಈಗ ಔಟ್

ಸುನೀಲ್​ ಶೆಟ್ಟಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಕಿಚ್ಚನ ಗುರುವಾಗಿ ಅಂದರೆ, ಪೈಲ್ವಾನನ ಗುರುವಾಗಿ ಸುನೀಲ್​ ಸರ್ಕಾರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಅವರ ರಗಡ್​ ಲುಕ್​ಗೆ ಸದ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅದರಂತೆ ಸ್ಮಗ್ಲಿಂಗ್ ಕಥೆಯಾಧಾರಿತ ಈ ಸಿನಿಮಾದಲ್ಲಿ ಬಾಲಿವುಡ್​ನಿಂದ ಸುನೀಲ್ ಶೆಟ್ಟಿ ಬರುವುದು ಪಕ್ಕಾ ಅನ್ನುತ್ತಿದೆ ಟಾಲಿವುಡ್ ಮೂಲಗಳು. ಹಾಗೆಯೇ ಅಲ್ಲು ಅರ್ಜುನ್-ರಶ್ಮಿಕಾ ನಡುವಣ ಪ್ರೇಮಾಂಕುರದ ಸನ್ನಿವೇಶದ ಬೆನ್ನಲ್ಲೇ ಪೈಲ್ವಾನ್ ಸರ್ಕಾರ್ ಅವರ ಎಂಟ್ರಿಯಾಗಲಿದೆಯಂತೆ.

ಅದರಂತೆ ಸ್ಮಗ್ಲಿಂಗ್ ಕಥೆಯಾಧಾರಿತ ಈ ಸಿನಿಮಾದಲ್ಲಿ ಬಾಲಿವುಡ್​ನಿಂದ ಸುನೀಲ್ ಶೆಟ್ಟಿ ಬರುವುದು ಪಕ್ಕಾ ಅನ್ನುತ್ತಿದೆ ಟಾಲಿವುಡ್ ಮೂಲಗಳು. ಹಾಗೆಯೇ ಅಲ್ಲು ಅರ್ಜುನ್-ರಶ್ಮಿಕಾ ನಡುವಣ ಪ್ರೇಮಾಂಕುರದ ಸನ್ನಿವೇಶದ ಬೆನ್ನಲ್ಲೇ ಪೈಲ್ವಾನ್ ಸರ್ಕಾರ್ ಅವರ ಎಂಟ್ರಿಯಾಗಲಿದೆಯಂತೆ.

  • News18
  • Last Updated :
  • Share this:
ಕನ್ನಡದ ಮಲ್ಟಿಸ್ಟಾರರ್​ ಹಾಗೂ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಪೈಲ್ವಾನ್​'. ಈ ಸಿನಿಮಾ ಕೇವಲ ಪೋಸ್ಟರ್​, ಟೀಸರ್​ಗಳಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಸದ್ಯ ಕಿಚ್ಚ ಸುದೀಪ್​ ನಟ ಸುನೀಲ್​ ಶೆಟ್ಟಿ ಅವರ ಫಸ್ಟ್​ಲುಕ್​ ಅನ್ನು ಬಿಡುಗಡೆ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಅಭಿನಯಿಸುತ್ತಿರುವ ವಿಷಯ ಹೊಸದೇನಲ್ಲ. ಆದರೆ ಸುನೀಲ್​ ಶೆಟ್ಟಿ ಅವರದ್ದು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಿರೀಕ್ಷಿಸಿ ಜಗ್ಗೇಶ್​ರ ಆತ್ಮಕತೆ: 'ನವರಸ ನಾಯಕನ ನಾಲ್ಕು ಹೆಜ್ಜೆ'ಯಾಗಿ ಜಗ್ಗಣ್ಣನ ಜೀವನದ ಕತೆ..!​

ಸುನೀಲ್​ ಶೆಟ್ಟಿ ಅವರ ಲುಕ್​ ಹೇಗಿದೆ ಎನ್ನುವುದಕ್ಕೆ ಇಲ್ಲಿದೆ ಪುಟ್ಟ ಸ್ಯಾಂಪಲ್​....



 

ಸುನೀಲ್​ ಶೆಟ್ಟಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಕಿಚ್ಚನ ಗುರುವಾಗಿ ಅಂದರೆ, ಪೈಲ್ವಾನನ ಗುರುವಾಗಿ ಸುನೀಲ್​ ಸರ್ಕಾರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಸುನೀಲ್​ ಶೆಟ್ಟಿ ಸಹ ತಮ್ಮ ಚೊಚ್ಚಲ ಕನ್ನಡ ಸಿನಿಮಾದ ಪೋಸ್ಟರ್​ ಅನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.



ಸುನೀಲ್​ ಶೆಟ್ಟಿ ತಮ್ಮ ಪೋಸ್ಟರ್​ ಶೇರ್​ ಮಾಡುವುದರೊಂದಿಗೆ ಮುಂದೆ ಕನ್ನಡ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ಅಭಿನಯಿಸುವುದಾಗಿಯೂ ತಿಳಿಸಿದ್ದಾರೆ. ಇನ್ನು ಕೃಷ್ಣ ನಿರ್ದೇಶನದ ಈ ಸಿನಿಮಾ ಮುಂದಿನ ತಿಂಗಳು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ತೆರೆ ಕಾಣಲಿದೆ.

Cannes 2019: ಬಾಲಿವುಡ್​ ಸ್ಟೈಲ್​ ಐಕಾನ್​ ಸೋನಮ್​ ಕಾನ್ಸ್​ನಲ್ಲಿ ಮಿಂಚಿದ್ದು ಹೀಗೆ..!

First published: