Pailwan Boxing Poster: ಬಿಡುಗಡೆಯಾಯಿತು ಐದು ಭಾಷೆಗಳಲ್ಲಿ ಪೈಲ್ವಾನನ ಬಾಕ್ಸಿಂಗ್​ ಪೋಸ್ಟರ್​

ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್​ ಕಡೆಗೂ ರಸಗವಳವನ್ನ ಬಡಿಸಿದ್ದಾರೆ. ಹೌದು, ನಿನ್ನೆಯಷ್ಟೆ ಕಿಚ್ಚ ತಮ್ಮ ಟ್ವಿಟರ್​ನಲ್ಲಿ ಪ್ರಕಟಿಸಿದಂತೆ ಇಂದು ಪೈಲ್ವಾನ್​ ಚಿತ್ರದ ಬಾಕ್ಸಿಂಗ್​ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

news18
Updated:June 4, 2019, 4:53 PM IST
Pailwan Boxing Poster: ಬಿಡುಗಡೆಯಾಯಿತು ಐದು ಭಾಷೆಗಳಲ್ಲಿ ಪೈಲ್ವಾನನ ಬಾಕ್ಸಿಂಗ್​ ಪೋಸ್ಟರ್​
ಪೈಲ್ವಾನ್​ ಬಾಕ್ಸಿಂಗ್​ ಪೋಸ್ಟರ್​
  • News18
  • Last Updated: June 4, 2019, 4:53 PM IST
  • Share this:
- ಅನಿತಾ ಈ, 

ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ 'ಪೈಲ್ವಾನ್​' ಸಿನಿಮಾದ ಬಾಕ್ಸಿಂಗ್​ ಪೋಸ್ಟರ್​ ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಪೋಸ್ಟರ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಬಾಕ್ಸಿಂಗ್ ಪೋಸ್ಟರ್ ಅನ್ನು ಕನ್ನಡದಲ್ಲಿ ಕಿಚ್ಚ ಸುದೀಪ್​, ತೆಲುಗಿನಲ್ಲಿ ಚಿರಂಜೀವಿ, ತಮಿಳಿನಲ್ಲಿ ವಿಜಯ್​ ಸೇತುಪತಿ, ಹಿಂದಿಯಲ್ಲಿ ಸನೀಲ್​ ಶೆಟ್ಟಿ ಹಾಗೂ ಮಲಯಾಳದಲ್ಲಿ ಮೋಹನ್​ಲಾಲ್​ ಬಿಡುಗಡೆ ಮಾಡಿದ್ದಾರೆ.

'ಪೈಲ್ವಾನ್'​


 Happy to launch the Boxing poster of my new film Pehlwaan! Such a great experience working with a team that’s so brilliant & committed! @KicchaSudeep, your dedication clearly shows!@krisshdop @iswapnakrishna @AkankshaSingh4 #sushantsingh @Kabirduhansingh #sarathlohitadhwa pic.twitter.com/Ck39QFBVUy 

ಕಿಚ್ಚ ಸುದೀಪ್​ ಬಾಕ್ಸಿಂಗ್​ ರಿಂಗ್​ನಲ್ಲಿ ಬಾಕ್ಸರ್​ ಪಾತ್ರದಲ್ಲಿ ಸಖತ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಗೆ ಬಾಕ್ಸಿಂಗ್​ ಗ್ಲೌಸ್​ ತೊಟ್ಟು ಕಣ್ಣಿಗೆ ಪೆಟ್ಟು ಮಾಡಿಕೊಂಡ ಪೈಲ್ವಾನ್​ ಬಾಕ್ಸಿಂಗ್​ ಪೋಸ್ಟರ್​ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.

ಇದನ್ನೂ ಓದಿ: ಪ್ರಿಯಾಂಕಾ ದೇಶದ ಪ್ರಧಾನಿಯಾದರೆ, ಗಂಡ ನಿಕ್​ ಅಮೆರಿಕದ ಅಧ್ಯಕ್ಷರಾಗ್ತಾರಾ..?

ಕಿಚ್ಚ ಸುದೀಪ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾವನ್ನು ಕೃಷ್ಣ ಅವರು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗಾಗಿ ಸುದೀಪ್​ ತೂಕವನ್ನೂ ಇಳಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಸಿನಿಮಾ ತೆರೆ ಕಾಣಲಿದ್ದು, ಐದೂ ಭಾಷೆಗಳಲ್ಲಿ 'ಪೈಲ್ವಾನ' ಅಬ್ಬರಿಸಲಿದ್ದಾನೆ.

Photos: ಹಾಟ್​ ಲುಕ್​ನಲ್ಲಿ 'ಮಹರ್ಷಿ' ಯಶಸ್ಸಿನ ಅಲೆಯಲ್ಲಿರುವ ಪೂಜಾ ಹೆಗ್ಡೆ
First published: June 4, 2019, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading