ರಾಬರ್ಟ್​ ತೆಲುಗು ಸಿನಿಮಾ ರಿಲೀಸ್​: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಹೇಳಿದ್ದು ಹೀಗೆ..!

ನಾನು ಇನ್ನೊಂದು ಸಿನಿಮಾ ಹ್ಯಾಂಡಲ್ ಮಾಡುವಷ್ಟು ದೊಡ್ಡ ಕಲಾವಿದ ಅಲ್ಲ. ನಾನು ನನ್ನ ಸಿನಿಮಾ ಕಾಪಾಡಿಕೊಳ್ಳುತ್ತೇನೆ. ಅವರ ಸಿನಿಮಾ ಅವರು ಕಾಪಾಡಿಕೊಳ್ಳುವ ತಾಕತ್ತು ದೇವರು ಎಲ್ಲರಿಗೂ ಕೊಟ್ಟಿದ್ದಾನೆ. ನಾನೇನು ಹೇಳಲಿ ಅದರ ಬಗ್ಗೆ ಎಂದು ಅಲ್ಲಿಗೆ ಮಾತು ಮುಗಿಸಿದರು.

ದರ್ಶನ್​ ಹಾಗೂ ಸುದೀಪ್​

ದರ್ಶನ್​ ಹಾಗೂ ಸುದೀಪ್​

  • Share this:
ಕಿಚ್ಚ ಸುದೀಪ್​ ಸಿನಿ ಜರ್ನಿಗೆ  25 ವರ್ಷ ತುಂಬಿದ್ದು, ದುಬೈನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ಳಲು ಜೋರಾದ ಸಿದ್ಧತೆ ನಡೆದಿದೆ. ಸುದೀಪ್​ ಸಿನಿರಂಗಕ್ಕೆ ಕಾಲಿಟ್ಟು ಇಂದಿಗೆ ಬರೋಬ್ಬರಿ 25 ವರ್ಷ. ನಾಳೆ 26ನೇ ವರ್ಷದ ಮೊದಲ ದಿನವಾಗಿದ್ದು, ಅದನ್ನು ಸಂಭ್ರಮದಿಂದ ಆಚರಿಸಲು ಈಗಾಗಲೇ ವೇದಿಕೆ ಸಿದ್ಧವಾಗಿದೆ. ಫ್ಯಾಂಟಮ್​ ಸಿನಿಮಾದ ಹೆಸರನ್ನು ವಿಕ್ರಾಂತ್​ ರೋಣ ಎಂದು ಬದಲಿಸಿರುವ ಸುದೀಪ್​ ಪ್ರಚಾರ ಕಾರ್ಯದಲ್ಲಿ ವ್ಯಸ್ತವಾಗಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಕಟೌಟ್ ಅನ್ನು ಬುರ್ಜ್ ಖಲೀಫಾದ ಮೇಲೆ ಅನಾವರಣ ಮಾಡಲಾಗುವುದು ಎಂದು ಈ ಹಿಂದೆಯೇ ತಿಳಿಸಲಾಗಿತ್ತು. ಅದರಂತೆ ನಾಳೆ ದುಬೈನಲ್ಲಿರುವ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ 2 ಸಾವಿರ ಅಡಿ ಎತ್ತರದ ಕಟೌಟ್ ಅನಾವರಣಗೊಳ್ಳಲಿದೆ. ಜೊತೆಗೆ ಬುರ್ಜ್ ಖಲೀಫಾದ ಮೇಲೆ ವಿಕ್ರಾಂತ್ ರೋಣ ಚಿತ್ರದ 180 ಸೆಕೆಂಡುಗಳ ಟೀಸರ್ ಸಹ ಪ್ರದರ್ಶನಗೊಳ್ಳಲಿದೆ. ಅದಕ್ಕಾಗಿಯೇ ಮೂರು ದಿನಗಳ ಹಿಂದೆಯೇ ಸುದೀಪ್ ಮತ್ತು ತಂಡದವರು ದುಬೈ ತಲುಪಿದ್ದಾರೆ. 

ಇಂದು ಬೆಳ್ಳಿ ಹಬ್ಬದ ಬಗ್ಗೆ ಮಾಹಿತಿ ನೀಡಲು ದುಬೈನಿಂದಲೇ ಡಿಜಿಟಲ್ ಪತ್ರಿಕಾಗೋಷ್ಠಿ ನಡೆಸಿದ ಸುದೀಪ್​, ಬುರ್ಜ್ ಖಲೀಫಾವನ್ನೇ ಏತಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಸ್ಪಷ್ಟನೆ ನೀಡಿದರು. ಬುರ್ಜ್ ಖಲೀಫಾ ಮೇಲೆ ಬೆಳ್ಳಿ ಹಬ್ಬ ಆಚರಣೆ ಆಗ್ತಿರೋದು ಕೂಡ ಒಂದು ವಿಶೇಷ ಅನುಭವ. ಅದರಲ್ಲೂ ವಿಕ್ರಾಂತ್​ ರೋಣ ಹಲವು ಭಾಷೆಗಳಲ್ಲಿ ರಿಲೀಸ್​ ಆಗ್ತಿದೆ. ನಂಬಿಕೆ ಇಟ್ಟು ಸಿನಿಮಾ ಮಡಿದ್ದೇವೆ. ವಿದೇಶದ ಕಟ್ಟಡದ ಮೇಲೆ ಕಟೌಟ್​ ನಿಲ್ಲೋದು ನಿಜಕ್ಕೂ ವಿಶೇಷ ಎಂದರು.

kiccha sudeep phantom Kannada Movie is now vikranth rona title Renamed
ವಿಕ್ರಾಂತ್​ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್​


ಸಿನಿ ಇಂಡಸ್ಟ್ರಿಯಲ್ಲಿ  20- 25 ವರ್ಷ ದಾಟುತ್ತೇನೆ ಅಂತ ನಂಬಿಕೆ ಇರಲಿಲ್ಲ. ಆಗ ಹಿರಿಯರು ಕಟ್ಟಿಕೊಂಡು ಬಂದಿರೋ ಇಂಡಸ್ಟ್ರಿ ನಮ್ಮದು. ಇವತ್ತೂ ಎಲ್ಲವನ್ನೂ ಕಲಿಯುತ್ತಾ ಇದ್ದೇವೆ. ಹೊಸಬರಿಂದಲೂ ತುಂಬಾ ಕಲಿಯೋದಿದೆ. ಇನ್ನು ಹುಚ್ಚ ಸಿನಿಮಾ ರಿಲೀಸ್​ ಆದಾಗ ಅಭಿಮಾನಿಗಳು ತೋರಿಸಿದ ಪ್ರೀತಿ ಹಾಗೂ ನೀಡಿದ ಬೆಂಬಲ ಮರೆಯಲಾಗುವುದಿಲ್ಲ. ಎಷ್ಟೇ ಬುರ್ಜ ಖಲೀಫಾ ಕೊಟ್ಟರು ಆ ದಿನ ಅಭಿಮಾನಿಗಳು ನನ್ನನ್ನು ಎತ್ತಿಕೊಂಡು ಕಾರಿನ ಮೇಲೆ ಕೂರಿಸಿದ ಕ್ಷಣವನ್ನು ಮರೆಯಲಾಗುವುದಿಲ್ಲ ಎಂದು ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ರಾಬರ್ಟ್ ತೆಲುಗು ಸಿನಿಮಾ ಸಮಸ್ಯೆ ಬಗ್ಗೆ ಸುದೀಪ್ ಮಾತು

ನಾನು ಇನ್ನೊಂದು ಸಿನಿಮಾ ಹ್ಯಾಂಡಲ್ ಮಾಡುವಷ್ಟು ದೊಡ್ಡ ಕಲಾವಿದ ಅಲ್ಲ.
ನಾನು ನನ್ನ ಸಿನಿಮಾ ಕಾಪಾಡಿಕೊಳ್ಳುತ್ತೇನೆ. ಅವರ ಸಿನಿಮಾ ಅವರು ಕಾಪಾಡಿಕೊಳ್ಳುವ ತಾಕತ್ತು ದೇವರು ಎಲ್ಲರಿಗೂ ಕೊಟ್ಟಿದ್ದಾನೆ. ನಾನೇನು ಹೇಳಲಿ ಅದರ ಬಗ್ಗೆ ಎಂದು ಅಲ್ಲಿಗೆ ಮಾತು ಮುಗಿಸಿದರು.ಉಪೇಂದ್ರ ಜೊತೆ ಕಬ್ಜ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಕಿಚ್ಚ,  ನಿರ್ದೇಶಕ ಆರ್ ಚಂದ್ರು ಮಗು ತರ. ಸಿನಿಮಾದ ಕ್ಲಿಪಿಂಗ್ಸ್ ನೋಡಿದೆ. ಕಬ್ಜ ಸಿನಿಮಾದಲ್ಲಿ ಒಳ್ಳೆ ಪಾತ್ರ ಇದೆ. ಅದಕ್ಕೆ ಒಪ್ಪಿಕೊಂಡಿದ್ದೇನೆ ಎಂದರು. ಕಬ್ಜ ಸಿನಿಮಾದಲ್ಲಿ ಪೊಲೀಸ್ ಅಧಿಕಾರ ಭಾರ್ಗವ್​ ಭಕ್ಷಿಯ ಪಾತ್ರದಲ್ಲಿ ಸುದೀಪ್​ ಲುಕ್​ ಸಖತ್ತಾಗಿದೆ.
Published by:Anitha E
First published: