ನಟ ಹಾಗೂ ಗಾಯಕ ರವಿಶಂಕರ್ ಗೌಡ ಎಷ್ಟು ಚೆನ್ನಾಗಿ ಹಾಡು ಹಾಡುತ್ತಾರೆ ಅಂತ ತಿಳಿದಿದೆ. ಆಗಾಗ ಅವರು ಮನೆಯಲ್ಲಿ ತಮ್ಮಿಷ್ಟದ ನಟರ ಹಾಡುಗಳನ್ನು ಹಾಡುತ್ತಿರುತ್ತಾರೆ. ಅದರಲ್ಲೂ ಕೊರೋನಾ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇರುವ ರವಿಶಂಕರ್ ಹಲವಾರು ಹಾಡಿನ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ.
ಮಡದಿ ಜೊತೆ ಸೇರಿ ಈ ಹಿಂದೆ ಸಾಕಷ್ಟು ಹಾಡುಗಳನ್ನು ಹಾಡಿದ್ದು, ಅದರ ವಿಡಿಯೋಗಳನ್ನೂ ರವಿಶಂಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎರಡು ತಿಂಗಳ ಗಿಂದೆ ಅಣ್ಣಾವ್ರ ಸಿನಿಮಾದ ಹಾಡನ್ನು ಹಾಡಿ, ಅದರ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ಆಗಾಗ ಫೇಸ್ಬುಕ್ನಲ್ಲಿ ಲೈವ್ ಬಂದು ಹಾಡುಗಳನ್ನು ಹಾಡುವ ರವಿಶಂಕರ್ ಹಾಗೂ ಅವರ ಮಡದಿ ಸಂಗೀತಾ, ಲಾಕ್ಡೌನ್ನಲ್ಲಿ ನೆಟ್ಟಿಗರನ್ನು ತಮ್ಮದೇ ಆದ ರೀತಿಯಲ್ಲಿ ರಂಜಿಸುತ್ತಿದ್ದಾರೆ. ನಿನ್ನೆ ಮತ್ತೆ ರವಿಶಂಕರ್, ವಿಷ್ಣುವರ್ಧನ್ ಅವರ ನೆನಪಿನಲ್ಲಿ 'ಮಾಮರವೆಲ್ಲೋ ಕೋಗಿಲೆ ಎಲ್ಲೋ...' ಹಾಡನ್ನು ಹಾಡಿದ್ದಾರೆ.
ತುಂಬಾ ದಿನವಾಗಿತ್ತು ಹಾಡಿ....
ನಿಮಗಾಗಿ ಹಾಗೂ
ವಿಷ್ಣು ದಾದನ ನೆನಪಿಗಾಗಿ...
ಕರುನಾಡಿನ ಪ್ರತಿಯೊಬ್ಬರ ಮನಸ್ಸಿನಲ್ಲಿರುವ
ಈ ಗೀತೆ ಮರೆಯಲಾಗದ ಮಧುರ ಗೀತೆ.
Please use headphone 🙏🙏🙏😊@KicchaSudeep @Official_Ganesh @raghuram9777 @SanthoshAnand15 @ pic.twitter.com/GXbx32cvVu
— Ravishankar Gowda (@RavishankarGow5) July 3, 2020
Fabulous attempt my friend @RavishankarGow5 .. you sing really well.
🤗🤗👏🏼 https://t.co/KakHcwaoII
— Kichcha Sudeepa (@KicchaSudeep) July 3, 2020
Urvashi Rautela: ಕಿರುತೆರೆ ನಟನೊಂದಿಗೆ ಸಪ್ತಪದಿ ತುಳಿದ್ರಾ ಐರಾವತ ಬೆಡಗಿ ಊರ್ವಶಿ ರೌಟೆಲ..!
ಇದನ್ನೂ ಓದಿ: Rachita Ram: ಸೆಲ್ಫಿ ತೆಗೆಸಿಕೊಂಡ ಅಭಿಮಾನಿಗೆ ಇನ್ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡುವಂತೆ ಮನವಿ ಮಾಡಿದ ರಚಿತಾ ರಾಮ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ