HOME » NEWS » Entertainment » KICHCHA SUDEEP POSTED AN UPDATE ON PHANTOM MOVIE IN HIS INSTAGRAM HERE IS THE DETAILS AE

Kichcha Sudeep: ಅಭಿಮಾನಿಗಳಿಗೆ ಫ್ಯಾಂಟಮ್​ ಸಿನಿಮಾ ಕುರಿತು ಸಿಹಿ ಸುದ್ದಿ​ ಕೊಟ್ಟ ಕಿಚ್ಚ ಸುದೀಪ್​..!

Update On Phantom: ಅನೂಪ್​ ಭಂಡಾರಿ ನಿರ್ದೇಶನದ ಫ್ಯಾಂಟಮ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸುದೀಪ್​ ಅವರ ಫಸ್ಟ್​ಲುಕ್​ ಹಾಗೂ ವಿಡಿಯೋಗಳು ರಿಲೀಸ್​ ಆಗಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ಕೂತೂಹಲವನ್ನು ಹೆಚ್ಚಿಸಿದೆ.

Anitha E | news18-kannada
Updated:November 12, 2020, 3:41 PM IST
Kichcha Sudeep: ಅಭಿಮಾನಿಗಳಿಗೆ ಫ್ಯಾಂಟಮ್​ ಸಿನಿಮಾ ಕುರಿತು ಸಿಹಿ ಸುದ್ದಿ​ ಕೊಟ್ಟ ಕಿಚ್ಚ ಸುದೀಪ್​..!
ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಂದರ ಹಿಂದೆ ಒಂದರಂತೆ ಎಲ್ಲವೂ ರಿಲೀಸ್​ಗೆ ಸಿದ್ಧವಾಗುತ್ತಿವೆ. ಅದರಲ್ಲೂ ಅವರ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್​. ಲಾಕ್​ಡೌನ್​ನಿಂದಾಗಿ ಈ ಚಿತ್ರದ ಚಿತ್ರೀರಕಣ ನಿಂತಿತ್ತು. ಒಮ್ಮೆ ಹೈದರಾಬಾದಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸುದೀಪ್​ ತಮ್ಮ ಚಿತ್ರತಂಡದೊಂದಿಗೆ ಹೈದರಾಬಾದಿಗೆ ಹಾರಿದ್ದರು. ಜೊತೆಗೆ ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಸ್ಯಾಂಡಲ್​ವುಡ್​ ತಂತ್ರಜ್ಙರು, ಲೈಟ್​ಬಾಯ್​, ಸ್ಪಾಟ್​ಬಾಯ್​ ಹೀಗೆ ಚಿತ್ರೀಕರಣಕ್ಕೆ ಅಗತ್ಯ ಸಿಬ್ಬಂದಿಗಳನ್ನೂ ಇಲ್ಲಿಂದಲೇ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆರವಾಗಿದ್ದರು. ನಂತರ ಚಿತ್ರದ ಚಿತ್ರೀಕರಣ ಕುರಿತಂತೆ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ ಅಪ್ಡೇಟ್​ ಕೊಡುತ್ತಿದ್ದರು. ಜೊತೆಗೆ  ಸಿನಿಮಾ ಚಿತ್ರೀಕರಣ ನಡೆಯುವಾಗಲೇ  ಚಿತ್ರಗಳಲ್ಲಿನ ಪ್ರಮುಖ ಪಾತ್ರಗಳನ್ನು ಪರಿಚಯಿಸಲು ಚಿತ್ರತಂಡ ವಿಶೇಷವಾಗಿ ಇಂಟ್ರೊ ವಿಡಿಯೋಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿತು. 

ಅನೂಪ್​ ಭಂಡಾರಿ ನಿರ್ದೇಶನದ ಫ್ಯಾಂಟಮ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸುದೀಪ್​ ಅವರ ಫಸ್ಟ್​ಲುಕ್​ ಹಾಗೂ ವಿಡಿಯೋಗಳು ರಿಲೀಸ್​ ಆಗಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ಕೂತೂಹಲವನ್ನು ಹೆಚ್ಚಿಸಿದೆ.












View this post on Instagram





Neetha Ashok as AparnaBallal Aka Panna #TheWorldofPhantom PhantomWelcomesNeetha NeethaAshokAsPanna


A post shared by KicchaSudeepa (@kichchasudeepa) on






ಇನ್ನು, ಈಗಷ್ಟೆ ಕಿಚ್ಚ ಸುದೀಪ್​ ಫ್ಯಾಂಟಮ್​ ಸಿನಿಮಾ ಕುರಿತಾಗಿ ಒಂದು ಹೊಸ ಅಪ್ಡೇಟ್​ ಕೊಟ್ಟಿದ್ದಾರೆ. ಸಿನಿಮಾದ ಶೂಟಿಂಗ್​ ಇನ್ನೇನು ಮುಗಿಯುವ ಹಂತಕ್ಕೆ ಬಂದಿದ್ದು, ಈ ಬಗ್ಗೆಯೇ ಸುದೀಪ್​ ಪೋಸ್ಟ್​ ಮಾಡಿದ್ದಾರೆ.




ಫ್ಯಾಂಟಮ್​ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿದೆ. ಹೈದರಾಬಾದಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದಿರುವ ಕಿಚ್ಚ, ಹೊಸ ಪೋಟೋವೊಂದನ್ನೂ ಹಂಚಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಜೊತೆ ನಿರೂಪ್​ ಭಂಡಾರಿ, ನೀತಾ ಅಶೋಕ್​ ಸಹ ನಟಿಸುತ್ತಿದ್ದಾರೆ.
Published by: Anitha E
First published: November 12, 2020, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories