Pailwaan: ಸಲ್ಮಾನ್​​ಗಾಗಿ ಮುಂಬೈನಲ್ಲಿ ನಡೆಯಲಿದೆ ಪೈಲ್ವಾನ್​ ಸಿನಿಮಾದ ವಿಶೇಷ ಪ್ರದರ್ಶನ

Kichcha Sudeep: ಒಬ್ಬರು ಬಾಲಿವುಡ್​ ಅನ್ನು ಆಳಿದರೆ, ಮತ್ತೊಬ್ಬರು ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ. ಇಂತಹ ದಿಗ್ಗಜರು ಈ ಸಿನಿಮಾದಿಂದಾಗಿ ಒಟ್ಟಿಗೆ ತುಂಬಾ ಸಮಯ ಕಳೆಯುತ್ತಿದ್ದಾರೆ. ಕಳೆದ ವಾರ ಸಹ ಸುದೀಪ್,​ ಸಲ್ಲು ಜತೆ ಮುಂಬೈನಲ್ಲಿ ದಬಂಗ್​ 3 ಸಿನಿಮಾದ ಚಿತ್ರೀಕರಣದಲ್ಲಿದ್ದರು. ಈಗ ಸಿನಿಮಾದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದಾರೆ.

Anitha E | news18-kannada
Updated:September 11, 2019, 2:07 PM IST
Pailwaan: ಸಲ್ಮಾನ್​​ಗಾಗಿ ಮುಂಬೈನಲ್ಲಿ ನಡೆಯಲಿದೆ ಪೈಲ್ವಾನ್​ ಸಿನಿಮಾದ ವಿಶೇಷ ಪ್ರದರ್ಶನ
ಪೈಲ್ವಾನ್​ ಸುದೀಪ್​ ಹಾಗೂ ಸುಲ್ತಾನ್​ ಸಲ್ಮಾನ್​
Anitha E | news18-kannada
Updated: September 11, 2019, 2:07 PM IST
ಕಿಚ್ಚ ಸುದೀಪ್​ ಹಾಗೂ ಸಲ್ಮಾನ್​ ಅವರ ನಡುವಿನ ಸ್ನೇಹ ದಿನ ಕಳೆದಂತೆ ಮತ್ತಷ್ಟು ಗಾಢವಾಗುತ್ತಿದೆ. ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ನಿಂದ ಆದ ಪರಿಚಯ ದಿನ ಕಳೆದಂತೆ ಸ್ನೇಹದಲ್ಲಿ ಬದಲಾಗಿದ್ದು ಗೊತ್ತೇ ಇದೆ. ಇನ್ನು ಸದ್ಯ ಕಿಚ್ಚ 'ದಬಂಗ್​ 3' ಸಿನಿಮಾದಲ್ಲಿ ಸಲ್ಲು ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇವರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ.

ಇತ್ತೀಚೆಗಷ್ಟೆ ಕಿಚ್ಚ ಸುದೀಪ್​ ತಮ್ಮ ಹೆಂಡತಿ ಪ್ರಿಯಾ ಹಾಗೂ ಮಗಳನ್ನು ಸಲ್ಮಾನ್​ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸಲ್ಲುರನ್ನು ಭೇಟಿಯಾಗಿದ್ದ ಪ್ರಿಯಾ ಹಾಗೂ ಸಾನ್ವಿ ಅವರೊಂದಿಗೆ ತೆಗೆಸಿಕೊಂಡಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು.

Kichcha Sudeep, his wife Priya and daughter Sanvi met Salman Khan
ಸಲ್ಮಾನ್​ರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್​ ಹಾಗೂ ಕುಟುಂಬ


ಒಬ್ಬರು ಬಾಲಿವುಡ್​ ಅನ್ನು ಆಳಿದರೆ, ಮತ್ತೊಬ್ಬರು ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ. ಇಂತಹ ದಿಗ್ಗಜರು ಈ ಸಿನಿಮಾದಿಂದಾಗಿ ಒಟ್ಟಿಗೆ ತುಂಬಾ ಸಮಯ ಕಳೆಯುತ್ತಿದ್ದಾರೆ. ಕಳೆದ ವಾರ ಸಹ ಸುದೀಪ್,​ ಸಲ್ಲು ಜತೆ ಮುಂಬೈನಲ್ಲಿ 'ದಬಂಗ್​ 3' ಸಿನಿಮಾದ ಚಿತ್ರೀಕರಣದಲ್ಲಿದ್ದರು.

ಇದನ್ನೂ ಓದಿ: 'ಪೈಲ್ವಾನ್'​ ಚಿತ್ರಕ್ಕಾಗಿ ಕಿಚ್ಚ ಸುದೀಪ್​ ಜಿಮ್​ನಲ್ಲಿ ಬೆವರಿಳಿಸಿದ ವಿಡಿಯೋ ಇಲ್ಲಿದೆ..!

ಆಗಲೇ ಸಲ್ಲು 'ಪೈಲ್ವಾನ್​'  ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದ್ದಾರಂತೆ. ಅದಕ್ಕೆ ಸುದೀಪ್​ ಈಗ ಮುಂಬೈನಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಿದ್ದಾರಂತೆ. ಅದೂ ಕೂಡ ಕೇವಲ ಸಲ್ಮಾನ್​ ಖಾನ್​ಗಾಗಿ ಮಾತ್ರ.

ನಾಳೆ 'ಪೈಲ್ವಾನ್​' ಬಿಡುಗಡೆಯಾದ ನಂತರ ಈ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನುವ ಸುದ್ದಿ ಈಗ ಬಾಲಿವುಡ್​ನಲ್ಲಿ ಗುಲ್ಲಾಗಿದೆ. ಕೃಷ್ಣ ನಿರ್ದೇಶನದ 'ಪೈಲ್ವಾನ್​' ಇನ್ನೇನು ನಾಳೆ ಬೆಳಗಿನ ಜಾವದಿಂದಲೇ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.
Loading...

Evelyn Sharma: ವೈರಲ್​ ಆಯ್ತು 'ಸಾಹೋ' ಬ್ಯೂಟಿಯ ಬಿಕಿನಿ ಫೋಟೋಗಳು

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...