ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ (Pailwaan-2 Movie Viral News) ಪೈಲ್ವಾನ್ ಸಿನಿಮಾದ ಪೈಲ್ವಾನ್-2 ಬರುತ್ತಾ ? ಪೈಲ್ವಾನ್ ಸಿನಿಮಾ ಬಂದಾಗಲೇ ಈ ಒಂದು ಕುತೂಹಲ ಇತ್ತು. ಅದಕ್ಕೆ ಆ ಸಮಯದಲ್ಲಿ ಉತ್ತರ ಕೂಡ ಬಂದಿತ್ತು. ಹೌದು, ಪ್ಲಾನ್ ಇದೆ ಅನ್ನೋ (Pailwaan-2 Latest News) ವಿಷಯ ಕೂಡ ವೈರಲ್ ಆಗಿತ್ತು. ತುಂಬಾ ದಿನಗಳ ಬಳಿಕ ಪೈಲ್ವಾನ್-2 ಸಿನಿಮಾದ ಸುದ್ದಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಡೈರೆಕ್ಟರ್ ಕೃಷ್ಣ ಈ ಬಗ್ಗೆ ಏನೂ ರಿಯಾಕ್ಟ್ ಮಾಡಿಲ್ಲ. ಆದರೆ ಸುದ್ದಿ ಅಷ್ಟೇ (Pailwaan-2 Cinema News) ಇಂಟ್ಟಸ್ಟಿಂಗ್ ಆಗಿದೆ. ಈ ವಿಚಾರದ (Pailwaan-2 Updates) ಒಂದಷ್ಟು ವೈರಲ್ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಒಮ್ಮೆ ಓದಿ.
ಪೈಲ್ವಾನ್-2 ಸಿನಿಮಾ ವೈರಲ್ ಸುದ್ದಿ ಹಿಂಗಿದೆ ನೋಡಿ
ಪೈಲ್ವಾನ್ ಸಿನಿಮಾ ಕಿಚ್ಚನ ಸಿನಿ ಲೈಫ್‌ನ ಮಹತ್ವದ ಸಿನಿಮಾನೇ ಆಗಿದೆ. ಈ ಚಿತ್ರಕ್ಕಾಗಿ ಶುರು ಮಾಡಿದ್ದ ವರ್ಕೌಟ್ ಅಭ್ಯಾಸ ಈಗಲೂ ಮುಂದುವರೆದಿದೆ. ಪೈಲ್ವಾನ್ ರೀತಿ ಕಾಣಿಸಿಕೊಳ್ಳಲು ಕಿಚ್ಚ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಿಮ್‌ನಲ್ಲೂ ಬೆವರಿಳಿಸಿದ್ದಾರೆ.
ಅಷ್ಟೆಲ್ಲ ಶ್ರಮದ ಫಲ ಸಣ್ಣದ ದೇಹದ ಕಿಚ್ಚ ಸುದೀಪ್, ಕಟ್ಟು ಮಸ್ತಾದ ಪೈಲ್ವಾನ್ ರೀತಿ ಕಾಣಿಸಿಕೊಂಡ್ರು. ಅಭಿಮಾನಿಗಳಲ್ಲಿ, ಸಿನಿ ಪ್ರೇಮಿಗಳಲ್ಲಿ ಹೊಸ ಥ್ರಿಲ್ ಮೂಡಿಸಿದ್ದರು.
ಕನ್ನಡಿಗರ "ದಿಲ್"ನಲ್ಲಿ ಜಾಗ ಮಾಡಿಕೊಂಡ ಪೈಲ್ವಾನ್
ಸಿನಿಮಾದ ಕ್ಲೈಮ್ಯಾಕ್ಸ್ ಮೂಲಕ ಎಲ್ಲರೂ ಸೀಟ್ ತುತ್ತ ತುದಿಗೆ ಬಂದು ಕುಳಿತುಕೊಳ್ಳುವಂತೇನೆ ಮಾಡಿದ್ದರು. ಆ ಒಂದು ಸಂತೋಷ, ಆ ಒಂದು ಖುಷಿಗೆ ಈ ನಾಲ್ಕು ವರ್ಷಗಳೇ ಆಗಿವೆ.
ಆದರೆ ಇದೇ ಖುಷಿ ಮತ್ತೆ ಸಿಗುತ್ತಾ ಅನ್ನೋ ಅಭಿಮಾನಿಗಳಿಗೆ ಈಗೊಂದು ಸುದ್ದಿ ತುಂಬಾ ಖುಷಿಕೊಡ್ತಿದೆ. ಪೈಲ್ವಾನ್-2 ಸಿನಿಮಾ ಬರುತ್ತದೆ. ದೀಪಾವಳಿ ಹಬ್ಬಕ್ಕೆ ಚಿತ್ರಕ್ಕೆ ಮುಹೂರ್ತ ಅನ್ನೋ ಈ ನ್ಯೂಸ್ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.
ಪೈಲ್ವಾನ್-2 ಬಗ್ಗೆ ಡೈರೆಕ್ಟರ್ ಕೃಷ್ಣ ಏನಂತಾರೆ ?
ಹೌದು, ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ಸುದ್ದಿ ಸದ್ದು ಮಾಡುತ್ತಿದೆ. ಪೈಲ್ವಾನ್-2 ಚಿತ್ರಕ್ಕೆ ಕಿಚ್ಚ ಸುದೀಪ್ ಈಗಾಗಲೇ ಓಕೆ ಅಂದಿದ್ದಾರೆ ಅನ್ನೋದು ಕೂಡ ಈ ಸುದ್ದಿಯ ಪ್ರಮುಖ ತಿರುಳಾಗಿದೆ.
ಇದರ ಬೆನ್ನಲ್ಲಿಯೇ ಡೈರೆಕ್ಟರ್ ಕೃಷ್ಣ ಅವರ ಹೇಳಿಕೆನೂ ಗಮನ ಸೆಳೆದಿದೆ. ದೀಪಾವಳಿ ಹಬ್ಬಕ್ಕೆ ಚಿತ್ರಕ್ಕೆ ಮುಹೂರ್ತ ಅನ್ನೋದೇ ಆ ಮಾತಾಗಿದೆ.
ಪೈಲ್ವಾನ್-2 ಸಿನಿಮಾ ತಯಾರಿ ಶುರು ಆಯಿತೇ ?
ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ಕೃಷ್ಣ ಇನ್ನೂ ಏನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ಈ ಒಂದು ಪ್ಲಾನ್ ಅವರ ಮನದಲ್ಲಿ ಇದ್ದೇ ಇದೆ. ಪೈಲ್ವಾನ್ ನಂತಹ ಒಂದ್ ಒಳ್ಳೆ ಸಿನಿಮಾ ಕೊಟ್ಟ ಖುಷಿ ಅವರಲ್ಲಿ ಇದ್ದೇ ಇದೆ. ಆದರೆ, ಇದು ಅಷ್ಟು ಬೇಗ ಒಂದು ಸಿನಿಮಾ ಆಗಿ ರೂಪಗೊಳ್ಳಲು ಟೈಮ್ ತೆಗೆದುಕೊಳ್ಳುತ್ತದೆ.
ಅಷ್ಟೂ ಡೈರೆಕ್ಟರ್ ಕೃಷ್ಣ ಅವರು ಈಗಾಗಲೇ ಒಂದು ಪ್ರೋಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಪ್ರೋಜೆಕ್ಟ್‌ಗೆ "ಕಾಳಿ" ಅನ್ನೋ ಟೈಟಲ್ ಕೂಡ ಇದೆ. ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ನಾಯಕಿ ಆಗಿಯೇ ಆಯ್ಕೆ ಆಗಿದ್ದಾರೆ.
ಕಾಳಿ ಸಿನಿಮಾ ಮುಗಿದ್ಮೇಲೆ ಪೈಲ್ವಾನ್-2 ಶುರು ಆಗುತ್ತಾ ?
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಈ ಚಿತ್ರದ ನಾಯಕ ಅನ್ನೋದು ಕೂಡ ಗೊತ್ತೇ ಇದೆ. ಇನ್ನೇನು ಅಭಿ-ಅವಿವಾ ಮದುವೆ ಆದ್ಮೇಲೆ ಸಿನಿಮಾ ಶುರು ಮಾಡೋ ಹಾಗೆ ಕಾಣಿಸುತ್ತದೆ. ಹಾಗಾಗಿಯೇ ಈ ಸಿನಿಮಾದ ಹೆಚ್ಚಿನ ಮಾಹಿತಿ ಇನ್ನೂ ಹಂಚಿಕೊಂಡಿಲ್ಲ.
ಇದನ್ನೂ ಓದಿ: Sara Ali Khan: ಅಮ್ಮನಿಗೆ ಬೈದಿದ್ದೇಕೆ ಸಾರಾ? ಕಾರಣ ಗೊತ್ತಾದ್ರೆ ನೀವೂ ಈ ನಟಿಯನ್ನು ಮೆಚ್ಚುತ್ತೀರಿ
ಕಾಳಿ ಸಿನಿಮಾದ ಮುಹೂರ್ತ ಕೂಡ ಈಗಾಗಲೇ ಆಗಿದೆ. ಅಂದಿನಿಂದ ಸಿನಿಮಾದ ಇತರ ತಯಾರಿ ನಡೆಯುತ್ತಿದೆ. ಆದರೆ ಪೈಲ್ವಾನ್-2 ಕುರಿತು ಕೃಷ್ಣ ಎಲ್ಲೂ ಈಗಲೇ ಮಾತನಾಡಿದಂತಿಲ್ಲ. ಕಾಳಿ ಮುಗಿದ್ಮೆಲೆ ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಬಹುದು ಅನಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ