Kichcha Sudeep: ಫೇಸ್​ಬುಕ್​ಗೆ ಎಂಟ್ರಿಕೊಟ್ಟ ಕಿಚ್ಚ: ಐ ಆ್ಯಮ್​ ಕೆ ಎಂದ ಸುದೀಪ್​..!

Kichcha Sudeeps Facebook Account: ಈಗ ಕೆಲವೇ ಗಂಟೆಗಳ ಹಿಂದೆಯಷ್ಟೆ ಸುದೀಪ್​ ಫೇಸ್​ಬುಕ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನು ಖುದ್ದು ಸುದೀಪ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದು, ಫೇಸ್​ಬುಕ್​ ಖಾತೆಯ ಲಿಂಕ್​ ಅನ್ನೂ ಹಂಚಿಕೊಂಡಿದ್ದಾರೆ.

Anitha E | news18-kannada
Updated:December 11, 2019, 2:03 PM IST
Kichcha Sudeep: ಫೇಸ್​ಬುಕ್​ಗೆ ಎಂಟ್ರಿಕೊಟ್ಟ ಕಿಚ್ಚ: ಐ ಆ್ಯಮ್​ ಕೆ ಎಂದ ಸುದೀಪ್​..!
ಕಿಚ್ಚ ಸುದೀಪ್​ ಫೇಸ್​ಬುಕ್ ಖಾತೆ
  • Share this:
ಕಿಚ್ಚ ಸುದೀಪ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟ. ಅಭಿಮಾನಿಗಳ ಪ್ರತಿ ಟ್ವೀಟ್ ಹಾಗೂ ಪೋಸ್ಟರ್​​ಗಳಿಗೆ ಪ್ರತಿಕ್ರಿಯಿಸುತ್ತಾ, ಅವರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ.

ಸುದೀಪ್​ ಅವರು ಈಗಾಗಲೇ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಖಾತೆಗಳೊಂದಿದ್ದು, ಟ್ವಿಟರ್​ನಲ್ಲಿ 20 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ಸುದೀಪ್​ ತಮ್ಮ ಸಿನಿಮಾಗಳ ಪ್ರಚಾರ ಕಾರ್ಯವನ್ನೂ ಮಾಡುತ್ತಾರೆ.

Kichcha Sudeep spotted on Jawa Bike during Dabangg 3 movie Promotion at Mumbai
ಕಿಚ್ಚ ಸುದೀಪ್


ಆದರೆ ಈಗ ಕೆಲವೇ ಗಂಟೆಗಳ ಹಿಂದೆಯಷ್ಟೆ ಸುದೀಪ್​ ಫೇಸ್​ಬುಕ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನು ಖುದ್ದು ಸುದೀಪ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದು, ಫೇಸ್​ಬುಕ್​ ಖಾತೆಯ ಲಿಂಕ್​ ಅನ್ನೂ ಹಂಚಿಕೊಂಡಿದ್ದಾರೆ.


ಸುದೀಪ್​ ಅವರ ಫೇಸ್​ಬುಕ್​ ಖಾತೆ ಹೆಸರು 'I Am K' ಎಂದಿದೆ. ಎರಡು ಗಂಟೆಗಳ ಹಿಂದೆಯಷ್ಟೆ ಈ ಖಾತೆ ತೆರೆದಿರುವ ಸುದೀಪ್​ ಒಂದು ಫೋಟೋವನ್ನೂ ಪ್ರೊಫೈಲ್​ಗೆ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: ಕನ್ನಡತಿ ಅನುಷ್ಕಾ ಶೆಟ್ಟಿಗೆ ಮುತ್ತಿಟ್ಟ ಆ ಇಬ್ಬರು: ಪೋಟೋ ವೈರಲ್​..!

ಸುದೀಪ್​ ಸದ್ಯ 'ಕೋಟಿಗೊಬ್ಬ 3' ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅವರ ನಟನೆಯ 'ದಬಾಂಗ್​ 3' ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಸಿನಿಮಾದಲ್ಲಿ ಕಿಚ್ಚ ಖಳನಾಯಕ ಬಲ್ಲಿಸಿಂಗ್​ ಪಾತ್ರದಲ್ಲಿ ಸಲ್ಮಾನ್​ ಮುಂದೆ ಮೀಸೆ ತಿರುವಲಿದ್ದಾರೆ.

Disha Patani: ಬೋಲ್ಡ್​​ ಫೋಟೋಶೂಟ್​ನಿಂದ ಪಡ್ಡೆಗಳ ನಿದ್ದೆ ಕದ್ದ ದಿಶಾ..!
First published: December 11, 2019, 2:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading