Vikrant Rona: ವಿಕ್ರಾಂತ್ ರೋಣ ಅಂದ್ರೆ ವಿಕ್ಟರಿ ರೋಣ, ಪ್ರೀ ರಿಲೀಸ್​ ಇವೆಂಟ್​ನಲ್ಲಿ ಸ್ಟಾರ್​ಗಳ ದಂಡು

ಕಿಚ್ಚ ಸುದೀಪ್ ಅಭಿನಯದ (Kichcha Sudeep) ಬಹು ನಿರೀಕ್ಷಿತ ಸಿನಿಮಾವಾದ ವಿಕ್ರಾಂತ್ ರೋಣ (Vikrant Rona) ಬಿಡುಗಡೆಗೆ ಕೇವಲ 2 ದಿನ ಬಾಕಿ ಇದೆ. ಇದರ ನಡುವೆ ಚಿತ್ರದ ಪ್ರೀ ರಿಲೀಸ್​ ಇವೆಂಟ್​ ಬೆಂಗಳೂರಿನ ಲುಲು ಗ್ಲೋಬಲ್​ ಮಾಲ್ ನಲ್ಲಿ ನಡೆಯಿತು.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನ (sandalwood) ಕಿಚ್ಚ ಸುದೀಪ್ ಅಭಿನಯದ (Kichcha Sudeep) ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ (Vikrant Rona) ಬಿಡುಗಡೆಗೆ ಕೇವಲ 2 ದಿನ ಬಾಕಿ ಇದೆ. ಇದರ ನಡುವೆ ಚಿತ್ರದ ಪ್ರೀ ರಿಲೀಸ್​ ಇವೆಂಟ್​ ಬೆಂಗಳೂರಿನ ಲುಲು ಗ್ಲೋಬಲ್​ ಮಾಲ್ ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್​ ಉಪೇಂದ್ರ (Upendra ) ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ಅಲ್ಲದೇ ವಿಕ್ರಾಂತ್ ರೋಣ ಎಂದರೆ ಕೇವಲ ಒಂದು ಮಾತಲ್ಲಿ ವಿಕ್ಟರಿ ರೋಣ ಎಂದು ಹೇಳುವ ಮೂಲಕ ಚಿತ್ರದ ಮೇಲಿನ ಉಪ್ಪಿಯ ನಿರೀಕ್ಷೆ ಹೆಚ್ಚಿದೆ ಎಂದು ಹೇಳಿದ್ದಾರೆ. ಅಲ್ಲದೇ ಸಂಪೂರ್ಣ ಚಿತ್ರತಂಡ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ನೆರವೇರಿದೆ

ವಿಕ್ರಾಂತ್ ರೋಣ ಅಂದ್ರೆ ವಿಕ್ಟರಿ ರೋಣ: 

ವಿಕ್ರಾಂತ್​ ರೋಣ ಚಿತ್ರದ ಪ್ರೀ ರಿಲೀಸ್​ ಇವೆಂಟ್​ ನಡೆಯಿತು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಉಪೇಂದ್ರ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ‘ಸುದೀಪ್ ಅವರನ್ನು ನೋಡಿ ಹೀರೋ ಅಗಿ ಎಂದು ಹೇಳಿದ್ದೆ. ಆದರೆ ಅವರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಅಲ್ಲದೇ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ. ಯಶ್ ಪ್ಯಾನ್ ಇಂಡಿಯಾ ಹೋಡಿತಿವಿ ಅಂದ್ರು ಈಗ ನಾವು ಪ್ಯಾನ್ ವರ್ಲ್ಡ್ ಹೋಡಿತಿವಿ. ಜೊತೆಗೆ ವಿಕ್ರಾಂತ್ ರೋಣ ಅಂದ್ರೆ ವಿಕ್ಟರಿ ರೋಣ ಎಂದು ಅರ್ಥ. ಇದರೊಂದಿಗೆ ನನಗೆ ಟಿಕೆಟ್ ಸಿಗಲ್ಲ ಫಸ್ಟ್ ಡೇ ಈ ಸಿನಿಮಾವನ್ನು ಜನಗಳ ಜೊತೆ ಕುಳಿತು ನೋಡಬೇಕೆಂದು ಆಸೆ ಇದೆ‘ ಎಂದು ಹೇಳಿದ್ದಾರೆ.

ಇದು ನನ್ನೊಬ್ಬನ ಕನಸಲ್ಲ ಎಲ್ಲರ ಕನಸು:

ಇನ್ನು, ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್​ ಅಭಿಮಾನಿಗಳ ಸೌಂಡ್​ಗೆ ಇದು ಸೌಂಡ್​ ಅಂದ್ರೆ ಎಂದು ನೆರೆದವರಿಗೆ ಉತ್ತೇಜಿಸಿದರು. ಇದಾದ ಬಳಿಕ ಸಿನಿಮಾದ ಕುರಿತು ಮಾತನಾಡಿದ ಅವರು, ‘ಈ ಸಿನಿಮಾ ನನ್ನೋಬ್ಬನ ಕನಸಲ್ಲ. ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಇದು ಎಲ್ಲರ ಕನಸು. ಅಲ್ಲದೇ ವಿಕ್ರಾಂತ್ ರೋಣ ಹಾಗೂ ನನಗೆ ಯಾವುದೇ ವ್ಯತ್ಯಾಸ ಇಲ್ಲ ಅವನೇ ನಾನು ನಾನೇ ಅವನು‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vikrant Rona: ಕಿಚ್ಚನ ಅಭಿಮಾನಿಗಳಿಗೆ ಗುಡ್​ ನ್ಯೂಸ್, ‘ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಇಂದಿನಿಂದಲೇ ಪ್ರಾರಂಭ

ಅಪ್ಪು ನೆನೆದ ಜಾನಿ ಮಾಸ್ಟರ್:

ಕಾರ್ಯಕ್ರಮ ಯಾವುದೇ ಆಗಿರಲಿ ಅಲ್ಲಿ ನಟ ಪುನೀತ್ ರಾಜ್​ಕುಮಾರ್ ಅವರನ್ನು ಇದೀಗ ಎಲ್ಲಡೆ ನೆನಪಿಸಿಕೊಳ್ಳಲಾಗುತ್ತಿದೆ. ಅದೇ ರೀತಿ ಇದೀಗ ವಿಕ್ರಾಂತ್ ರೋಣ ಕಾರ್ಯಕ್ರಮದಲ್ಲಿಯೂ ಸಹ ಜಾನಿ ಮಾಸ್ಟರ್ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ನನ್ನನ್ನು ಇಲ್ಲಿ ಪರಿಸಯಿಸಿದ್ದೇ ಅಪ್ಪು ಸರ್. ಅಲ್ಲದೇ ಯಾರು ಎಲ್ಲೇ ಡ್ಯಾನ್ಸ್ ಮಾಡಿದ್ರು ಅಲ್ಲಿ ಅಪ್ಪು ಸರ್ ಇರ್ತಾರೆ ಎಂದ ಜಾನಿ ಮಾಸ್ಟರ್ ಹೇಳಿದ್ದಾರೆ.

ಇದರ ಜೊತೆ ಇನ್ನು 2 ದಿನದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅಲ್ಲದೇ ಸುದೀಪ್ ಅವರ 27 ವರ್ಷವೂ ಕಂಪ್ಲೀಟ್​ ಆಗುತ್ತಿದೆ. 27 ವರ್ಷದಿಂದ ಒಂದು ಲೆಕ್ಕ, ವಿಕ್ರಾಂತ್ ರೋಣ ರಿಲೀಸ್ ಆದ್ಮೇಲೆ ಒಂದು ಲೆಕ್ಕ ಎಂದು ನಟ ನಿರೂಪ್ ಭಂಡಾರಿ ಹೇಳಿದ್ದಾರೆ.

ಇದನ್ನೂ ಓದಿ: ರಾಕಿ ಭಾಯ್ ಅಬ್ಬರಕ್ಕೆ ಬೆಚ್ಚಿದ್ದ ಅಮೀರ್​, KGF 2 ಎದುರು ಬರದೇ ಬದುಕಿದೆವು ಎಂದ ಬಾಲಿವುಡ್​ ಮಿಸ್ಟರ್​ ಪರ್ಫೆಕ್ಟ್!

ಬಹುತೇಕ ಟಿಕೆಟ್​ಗಳು​ ಮಾರಾಟ:

ಚಿಕ್ಕಮಂಗಳೂರು ಜಿಲ್ಲೆ, ಮೈಸೂರು ಸೇರಿದಂತೆ ಅನೇಕ ಕಡೆ ಥಿಯೇಟರ್​ಗಳಲ್ಲಿ ಟಿಕೆಟ್​ ಖಾಲಿ ಆಗಿದ್ದು, ಮೊದಲ ದಿನ ಶೋ ನೋಡಬೇಕು ಎಂದು ಆಸೆ ಹೊಂದಿದ್ದ ಅನೇಕ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಜರ್ಮನಿಯಲ್ಲಿ ಸಹ ಈ ಸಿನಿಮಾಗೆ ಬಹಳ ಬೇಡಿಕೆ ಇದ್ದು, ಈಗಾಗಲೇ ಅರ್ಧಕ್ಕಿಂತ ಹೆಚ್ಚು ಟಿಕೆಟ್​ಗಳು ಸೋಲ್ಡ್​ ಆಗಿದೆ.  ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಜನರಲ್ಲಿ ಬಹಳ ನಿರೀಕ್ಷೆ ಇದೆ. ಇದು ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಕೆಜಿಎಫ್​ ನಂತರ ಮತ್ತೊಮ್ಮೆ ಸ್ಯಾಂಡಲ್​ವುಡ್​ನ ಸಿನಿಮಾ ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ.
Published by:shrikrishna bhat
First published: