Vikrant Rona: ‘ವಿಕ್ರಾಂತ್​ ರೋಣ‘ ಚಿತ್ರದ ‘ರಾಜಕುಮಾರಿ‘ ಸಾಂಗ್ ರಿಲೀಸ್, ಲಾಲಿ ಹಾಡಿಗೆ ತಲೆದೂಗಿದ ಕಿಚ್ಚ

ವಿಕ್ರಾಂತ್ ರೋಣ ಚಿತ್ರತಂಡ 'Lullaby Song - Rajkumari' ಲಿರೀಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಅಪ್ಪ ಮಗಳ ಬಾಂಧವ್ಯದ ಸಾರವನ್ನು ಬಿಚ್ಚಿಟ್ಟಿರುವ ಈ ಹಾಡಿಗೆ ಕಿಚ್ಚ ಮನಸಾರೆ ತಲೆದೂಗಿದ್ದಾರೆ.

ಸುದೀಪ್

ಸುದೀಪ್

  • Share this:
ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ  (Vikrant Rona)​ ಸಿನಿಮಾದ ಟ್ರೈಲರ್ (Trailer)​ ಈಗಾಗಲೇ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಇನ್ನು, ಈಗಾಗಲೇ ಬಿಡುಗಡೆ ಆಗಿರುವ ರಾ..ರಾ.. ರಕ್ಕಮ್ಮಾ ಹಾಡು ಸಖತ್ ಹಿಟ್ ಆಗಿದೆ. ಇದೀಗ ಅದೇ ರಿತಿಯಲ್ಲಿ ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದ್ದು, ಕೇಳಲು ಇಂಪಾಗದ ಸಂಗೀತದೊಂದಿಗೆ ‘ರಾಜಕುಮಾರಿ‘ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಇನ್ನು,ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿ(3D)ಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. 

ರಾಜಕುಮಾರಿ ಸಾಂಗ್ ಬಿಡುಗಡೆ:

ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಜಾಕ್ಲಿನ್ ಸೊಂಟ ಬಳುಕಿಸಿರುವ ರಾ..ರಾ...ರಕ್ಕಮ್ಮಾ ಹಾಡು ಸೂಪರ್ ಡೂಪ್ ಹಿಟ್ ಆಗಿದೆ. ನಂತರ ಬಿಡುಗಡೆ ಆದ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಚಿತ್ರತಂಡ 'Lullaby Song - Rajkumari' ಲಿರೀಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಅಪ್ಪ ಮಗಳ ಬಾಂಧವ್ಯದ ಸಾರವನ್ನು ಬಿಚ್ಚಿಟ್ಟಿರುವ ಈ ಹಾಡಿಗೆ ಕಿಚ್ಚ ಮನಸಾರೆ ತಲೆದೂಗಿದ್ದಾರೆ.



ಅಲ್ಲದೇ ವಿಕ್ರಾಂತ್ ರೋನ ಆಲ್ಬಂ ಅಲ್ಲಿ ಈ ಹಾಡು ನನ್ನ ಫೆವರೆಟ್ ಎಂದೂ ಸಹ ಟ್ವೀಟ್ ಮಾಡಿದ್ದಾರೆ. ಈ ಮೆಲೋಡಿ ಸಾಂಗ್​ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ವಿಜಯ್ ಪ್ರಕಾಶ್ ಕಂಠದಾನ ಮಾಡಿದ್ದಾರೆ. ಅಲ್ಲದೇ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಈ ಹಾಡು ಪಕ್ಕಾ ಮಗುವಿನ ಲಾಲಿ ಹಾಡಾಗಿ ಹಿಟ್​ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಿಚ್ಚನ ಅಭಿಮಾನಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: Vikrant Rona: ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ‘ವಿಕ್ರಾಂತ್ ರೋಣ‘ ಟೀಂ, ಹೊಸ ಸಾಂಗ್​ ರಿಲೀಸ್​ ಡೇಟ್​ ಅನೌನ್ಸ್

ವಿಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದ ಚಿತ್ರತಂಡ:

ವಿಕ್ರಾಂತ್ ರೋಣ ಚಿತ್ರದ 'Lullaby Song - Rajkumari' ಲಿರೀಕಲ್ ವಿಡಿಯೋ ಸಾಂಗ್ ಕನ್ನಡದಲ್ಲಿ ಇಂದು ಅಂದರೆ ಜುಲೈ 2ರಂದು ಸಂಜೆ 5:02ಕ್ಕೆ ಬಿಡುಗಡೆ ಆಗಿದೆ. ಆದರೆ ಉಳಿದ ಭಾಷೆಗಳಲ್ಲಿ ಬೇರೆ ಬೇರೆ ದಿನದಲ್ಲಿ ರಿಲಿಸ್ ಆಗಲಿದೆ. ಅದರಂತೆ  ಮಲೆಯಾಳಂನಲ್ಲಿ ಜುಲೈ 3ಕ್ಕೆ ಸಂಜೆ 5:02ಕ್ಕೆ, ತೆಲುಗಿನಲ್ಲಿ ಜುಲೈ 4ಕ್ಕೆ ಸಂಜೆ 5:02ಕ್ಕೆ, ಹಿಂದಿಯಲ್ಲಿ ಜುಲೈ 5ಕ್ಕೆ ಸಂಜೆ 5:02ಕ್ಕೆ ಮತ್ತು ತಮಿಳಿನಲ್ಲಿ ಜುಲೈ 6ಕ್ಕೆ ಸಂಜೆ 5:02ಕ್ಕೆ ಈ ಲರೀಕಲ್ ವಿಡಿಯೋ ಸಾಂಗ್ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಟ್ವೀಟ್ ಮೂಲಕ ತಿಳಿಸಿದೆ.





ವಿಕ್ರಾಂತ್ ರೋಣನ ಅಬ್ಬರ ಆರಂಭ:

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿ ಅಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.
Published by:shrikrishna bhat
First published: