Kichcha Sudeep: ಧೂಳೆಬ್ಬಿಸುತ್ತಿದೆ Kotigobba 3: ತೆಲುಗಿನಲ್ಲಿ ರಿಲೀಸ್​ ಆಗಲಿದೆ K3 Kotikokkadu

ಕಿಚ್ಚ ಸುದೀಪ್​ ಅವರಿಗೆ ಟಾಲಿವುಡ್​ನಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಈಗಾಗಲೇ ಈಗ, ಬಾಹುಬಲಿ ಸಿನಿಮಾಗಳ ಮೂಲಕ ಕಿಚ್ಚ ಟಾಲಿವುಡ್​ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕೆ3 ಕೋಟಿಕೊಕ್ಕಡು ಸಿನಿಮಾದ ಟ್ರೇಲರ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ತೆಲುಗಿನಲ್ಲಿ ಕೋಟಿಕೊಕ್ಕಡು ಆಗಿ ರಿಲೀಸ್​ ಆಗುತ್ತಿದೆ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ 3 ಸಿನಿಮಾ

ತೆಲುಗಿನಲ್ಲಿ ಕೋಟಿಕೊಕ್ಕಡು ಆಗಿ ರಿಲೀಸ್​ ಆಗುತ್ತಿದೆ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ 3 ಸಿನಿಮಾ

  • Share this:
ಸಾಲು ಸಾಲಲುವಿವಾದಗಳು ಹಾಗೂ ವಿಘ್ನಗಳ ನಡುವೆಯೇ ರಿಲೀಸ್​ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಿಚ್ಚ ಸುದೀಪ್ (Kichcha Sudeep)​ ಅಭಿನಯದ ಸಿನಿಮಾ ಕೋಟಿಗೊಬ್ಬ 3 (Kotigobba 3). ಸಿನಿಮಾ ಶೂಟಿಂಗ್​ ಆರಂಭವಾದಾಗಿನಿಂದಲೂ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಲೇ ಇತ್ತು ಚಿತ್ರತಂಡ. ವಿದೇಶದಲ್ಲಿ ಈ ಸಿನಿಮಾ ತಂಡ ಚಿತ್ರೀಕರಣ ಮುಗಿಸಿ ಬರುವಾಗ ಸಹ ತುಂಬಾ ಸಮಸ್ಯೆಗಳನ್ನು ಎದುರಿಸಿತ್ತು. ಜೊತೆಗೆ ಟೀಸರ್ ರಿಲೀಸ್ ಆದಾಗ ಹಣಕಾಸಿನ ವ್ಯವಹಾರಗಳಿಂದಾಗಿ ಅದನ್ನು ಯೂಟ್ಯೂಬ್​ನಿಂದ ತೆಗೆದು ತೆಗೆದು ಹಾಕಲಾಗಿತ್ತು. ಇಷ್ಟೆಲ್ಲ ಕಷ್ಟದ ನಡುವೆಯೇ ಎಎದುರಾದ ಎಲ್ಲ ಸವಾಲುಗಳನ್ನು ಎದುರಿಸುತ್ತಲೇ ಕೋಟಿಗೊಬ್ಬ 3 ಸಿನಿಮಾವನ್ನು ಒಂದು ದಿನ ತಡವಾಗಿ ರಿಲೀಸ್​ ಮಾಡಲಾಗಿತ್ತು. ರಿಲೀಸ್​ ದಿನವೇ ಎದುರಾಗಿದ್ದ ವಿಘ್ನವನ್ನು ನಿವಾರಿಸಕೊಂಡ ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೂ ಈ ಸಿನಿಮಾ ಕಲೆಕ್ಷನ್​ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. 

ಆಯುಧಪೂಜೆ ದಿನ ರಿಲೀಸ್ ಆಗಬೇಕಿದ್ದ ಸಿನಿಮಾ ಅ.15ರಂದು ತೆರೆಗಪ್ಪಳಿಸಿತು. ಸುಮಾರು ಎರಡು ವರ್ಷಗಳ ನಂತರ ಕಿಚ್ಚ ಸುದೀಪ್​ ಅವರನ್ನು ಬೆಳ್ಳಿತೆರೆ ಮೇಲೆ ನೋಡಿದ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಮೊದಲ ದಿನವೇ 12 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಈಗ ನಾಲ್ಕು ದಿನಗಳ ಗಳಿಕೆ ಎಷ್ಟು ಅನ್ನೋ ವಿಷಯ ಹೊರ ಬಿದ್ದಿದೆ.





ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ನಾಲ್ಕು ದಿನಗಳಲ್ಲಿ 40.5 ಕೋಟಿ ಗಳಿಕೆ ಮಾಡಿದೆಯಂತೆ. ಈ ವಿಷಯವನ್ನು ಚಿತ್ರತಂಡವೇ ಹಂಚಿಕೊಂಡಿದೆ. ಲಾಕ್​ಡೌನ್​ ತೆರವಾದ ಬಳಿಕ ರಿಲೀಸ್ ಆಗಿರುವ ಕನ್ನಡ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಮಾಡುತ್ತಿರುವ ಗಳಿಕೆ ಕಂಡು ಚಿತ್ರರಂಗ ನೆಮ್ಮದಿಯ ಉಸಿರು ಬಿಟ್ಟಿದೆ.

ಇದನ್ನೂ ಓದಿ: Vikrant Rona Glimpse: ಕಿಚ್ಚ ಸುದೀಪ್​ ಹುಟ್ಟುಹಬ್ಬದಂದು ವಿಕ್ರಾಂತ್​ ರೋಣನ ಕಡೆಯಿಂದ ಸಿಗಲಿದೆ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್​

ಇನ್ನು ಕೋಟಿಗೊಬ್ಬ 3 ಸಿನಿಮಾ ಟಾಲಿವುಡ್​ನಲ್ಲಿ ತೆರೆ ಕಾಣುತ್ತಿದೆ. ಕೆ3 ಕೋಟಿಕೊಕ್ಕಡು ಟೈಟಲ್​ನಲ್ಲಿ ರಿಲೀಸ್​ ಆಗಲಿದೆ. ಈ ಸಿನಿಮಾದ ರಿಲೀಸ್​ ಕುರಿತಾಗಿ ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ್ದಾರೆ.

ಕಿಚ್ಚ ಸುದೀಪ್​ ಅವರ ಟ್ವೀಟ್​ ಲಿಂಕ್​...



ಕೋಟಿಕೊಕ್ಕಡು ಸಿನಿಮಾದ ಟ್ರೇಲರ್​ ರಿಲೀಸ್

ತೆಲುಗಿನಲ್ಲಿ ಇದೇ ನವೆಂಬರ್​ನಲ್ಲಿ ಕೋಟಿಗೊಬ್ಬ 3 ಸಿನಿಮಾದ ತೆಲುಗು ವರ್ಷನ್ ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ತೆಲುಗು ಚಿತ್ರ್ ಟ್ರೇಲರ್ ರಿಲೀಸ್​ ಆಗಲಿದೆ. ಇನ್ನು ಸುದೀಪ್​ ಅವರನ್ನು ತೆಲುಗು ಪ್ರೇಕ್ಷಕರಿಗೆ ಪ್ರತ್ಯೇಕವಾಗಿ ಪರಿಚಯಿಸುವ ಅಗತ್ಯವಿಲ್ಲ.

‘ಕೆ3 ಕೋಟಿಕೊಕ್ಕಡು’ ಟ್ರೈಲರ್ ಲಿಂಕ್​ ಇಲ್ಲಿದೆ...



ಕಿಚ್ಚ ಸುದೀಪ್​ ಅವರಿಗೆ ಟಾಲಿವುಡ್​ನಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಈಗಾಗಲೇ ಈಗ, ಬಾಹುಬಲಿ ಸಿನಿಮಾಗಳ ಮೂಲಕ ಕಿಚ್ಚ ಟಾಲಿವುಡ್​ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕೆ3 ಕೋಟಿಕೊಕ್ಕಡು ಸಿನಿಮಾದ ಟ್ರೇಲರ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Vikrant Rona: ಸಿನಿಮಾ ರಿಲೀಸ್​ಗೂ ಮುನ್ನವೇ ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ವೀಕ್ಷಿಸಿದ ನಟಿ ಹೇಳಿದ್ದು ಹೀಗೆ..!

ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳಿರುವ ಕೋಟಿಗೊಬ್ಬ-3 ಸಿನಿಮಾದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್ (Madonna Sebastian) ನಟಿಸಿದ್ದಾರೆ. ಶ್ರದ್ಧಾ ದಾಸ್ (Shraddha Das), ಅಫ್ತಾಬ್ ಶಿವದಾಸನಿ, ರವಿ ಶಂಕರ್, ಆಶಿಕಾ ರಂಗನಾಥ್ (Ashika Ranganath) ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಶಿವದಾಸನಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತವಿದೆ.
Published by:Anitha E
First published: