Kichcha Sudeep: ಬೆನ್ನು ನೋವಿನಿಂದ ವಿಶ್ರಾಂತಿಯಲ್ಲಿರುವ ಕಿಚ್ಚ: ದಬಂಗ್​ 3 ಚಿತ್ರೀಕರಣಕ್ಕೆ ಗೈರಾದ ಸುದೀಪ್​..!

Kichcha Sudeep: ಒಂದು ಕಡೆ ಪೈಲ್ವಾನ್​ ಚಿತ್ರದ ಕೆಲಸಗಳು... ಮತ್ತೊಂದು ಕಡೆ ಕೋಟಿಗೊಬ್ಬ 3 ಚಿತ್ರೀಕರಣ... ಇದರ ಜತೆಯಲ್ಲೇ ಬಾಲಿವುಡ್​ ಸಿನಿಮಾ ದಬಂಗ್​ 3ರ ಶೂಟಿಂಗ್​. ಇವೆಲ್ಲದರ ನಡುವೆ ಬಿಡುವಿಲ್ಲದಂತೆ ಕೆಲಸ ಮಾಡುತ್ತಿರುವ ಕಿಚ್ಚ ಸುದೀಪ್​ಗೆ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ.

Anitha E | news18
Updated:July 31, 2019, 4:19 PM IST
Kichcha Sudeep: ಬೆನ್ನು ನೋವಿನಿಂದ ವಿಶ್ರಾಂತಿಯಲ್ಲಿರುವ ಕಿಚ್ಚ: ದಬಂಗ್​ 3 ಚಿತ್ರೀಕರಣಕ್ಕೆ ಗೈರಾದ ಸುದೀಪ್​..!
ದಬಂಗ್​ 3 ಚಿತ್ರದಲ್ಲಿ ಸಲ್ಮಾನ್​ ಖಾನ್ಸು ಹಾಗೂ ಸುದೀಪ್​
  • News18
  • Last Updated: July 31, 2019, 4:19 PM IST
  • Share this:
ಕಿಚ್ಚ ಸುದೀಪ್​ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಕಳೆದ ವಾರ 'ಕೋಟಿಗೊಬ್ಬ 3'ರ ಚಿತ್ರೀಕರಣಕ್ಕಾಗಿ ಹೈದರಾಬಾದಿಗೆ ಹೋಗಿದ್ದರು. ಆದರೆ ಈಗ ಬೆನ್ನು ನೋವಿನಿಂದಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಒಂದು ಕಡೆ 'ಪೈಲ್ವಾನ್​' ಚಿತ್ರದ ಕೆಲಸಗಳು... ಮತ್ತೊಂದು ಕಡೆ 'ಕೋಟಿಗೊಬ್ಬ 3' ಚಿತ್ರೀಕರಣ... ಇದರ ಜತೆಯಲ್ಲೇ ಬಾಲಿವುಡ್​ ಸಿನಿಮಾ 'ದಬಂಗ್​ 3'ರ ಶೂಟಿಂಗ್​. ಇವೆಲ್ಲದರ ನಡುವೆ ಬಿಡುವಿಲ್ಲದಂತೆ ಕೆಲಸ ಮಾಡುತ್ತಿರುವ ಕಿಚ್ಚ ಸುದೀಪ್​ಗೆ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ.

Ravichandran met Sudeep in Hyderabad
ಹೈದರಾಬಾದಿನಲ್ಲಿ ಕಿಚ್ಚನ ಜೊತೆ ರವಿಮಾಮ


ಅದಕ್ಕಾಗಿಯೇ ಅವರು 'ದಬಂಗ್​ 3' ಸಿನಿಮಾ ಎರಡೇ ಶೆಡ್ಯೂಲ್​ನ ಚಿತ್ರೀಕರಣಕ್ಕೆ ಗೈರಾಗಿದ್ದಾರೆ. ಹೈದರಾಬಾದಿನಲ್ಲಿ 'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಸುದೀಪ್​ ಅವರಿಗೆ ಶೂಟಿಂಗ್​ ಮಾಡುವಾಗಲೇ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ. ಇದರಿಂದಾಗಿ ಬೆಂಗಳೂರಿನಗೆ ಬಂದಿರುವ ಅವರು, ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ಇದನ್ನೂ ಓದಿ: ದೇವರಕೊಂಡ ಜತೆ ನಟಿಸಬೇಡ ಎಂದಿದ್ದ ರಶ್ಮಿಕಾರ ಅಮ್ಮ 'ಡಿಯರ್ ಕಾಮ್ರೆಡ್​' ನೋಡಿ ಏನಂದ್ರು ಗೊತ್ತಾ..?

ಈ ಹಿಂದೆ 'ಸ್ವಾತಿಮುತ್ತು' ಚಿತ್ರದ ವೇಳೆ ಕಿಚ್ಚನಿಗೆ ಈ ಬೆನ್ನು ನೋವು ಕಾಣಿಸಿಕೊಂಡಿದ್ದು, ಈಗ ಮತ್ತೆ ಮರುಳಿಸಿದೆ. ಸದ್ಯ ಒಂದು ವಾರ ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರಂತೆ. ಇದಾದ ನಂತರ ಅವರು ಮತ್ತೆ ಚಿತ್ರೀಕರಣಕ್ಕೆ ಮರಳಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Mahesh Babu: ಮತ್ತೊಂದು ವ್ಯವಹಾರ ಆರಂಭಿಸಿದ ಮಹೇಶ್ ಬಾಬು: ದೇವರಕೊಂಡ, ಪೂರಿ ಜಗನ್ನಾಥ್​ ದಾರಿಯಲ್ಲಿ ಪ್ರಿನ್ಸ್..!​
Loading...

Ileana Hot Photos: ಬಿಕಿನಿಯಲ್ಲಿ ಫೋಟೋಗೆ ಪೋಸ್​ ಕೊಟ್ಟ ಇಲಿಯಾನಾರ ಚಿತ್ರ ವೈರಲ್​..!


First published:July 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...