HOME » NEWS » Entertainment » KICHCHA SUDEEP IN BIGG BOSS 8 SOURCES ARE SAYING SHUBHA POONJA WILL BE EVICT FROM THE BIGG BOSS HOUSE THIS WEEK AE

Bigg Boss 8: ವಾರದ ಕತೆ ಕಿಚ್ಚನ ಜೊತೆ: ಬಿಗ್ ಬಾಸ್​ ಮನೆಯಿಂದ ಈ ವಾರ ಹೊರ ಹೋಗುವುದು ಇವರೇ..!

Kichcha Sudeep: ಈ ವಾರದ ಅಂದರೆ ಮೊದಲ ಎವಿಕ್ಷನ್​ ಸಖತ್​ ತಿರುವುಗಳಿಂದ ಕೂಡಿರಲಿದೆಯಂತೆ. ಹೀಗೆಂದು ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್​ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

Anitha E | news18-kannada
Updated:March 6, 2021, 3:52 PM IST
Bigg Boss 8: ವಾರದ ಕತೆ ಕಿಚ್ಚನ ಜೊತೆ: ಬಿಗ್ ಬಾಸ್​ ಮನೆಯಿಂದ ಈ ವಾರ ಹೊರ ಹೋಗುವುದು ಇವರೇ..!
ವಾರದ ಕತೆ ಕಿಚ್ಚನ ಜೊತೆ
  • Share this:
ಬಿಗ್​ ಬಾಸ್​ ಮನೆಗೆ ಕಾಲಿಟ್ಟ ನಂತರದ ದಿನವೇ ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿಗಳು ನಾಮಿನೇಟ್ ಆದರು. ಅದು ಬಿಗ್​ ಬಾಸ್​ ಸಖತ್​ ಟ್ವಿಸ್ಟ್​ ಮೂಲಕ ನಾಮಿನೇಶ್​ ಪ್ರಕ್ರಿಯೆ ನಡೆಸಿದ್ದರು. ಆದರೆ ಎಲ್ಲರಿಗೂ ಮೊದಲು ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ  ಸದಸ್ಯೆಯಾಗಿ ನಿರ್ಮಲಾ ಚೆನ್ನಪ್ಪ ನೇರವಾಗಿ ನಾಮಿನೇಟ್​ ಆಗಿದ್ದರು. ನಂತರ  ಉಳಿದ ಸದಸ್ಯರು ಟಾಸ್ಕ್​ಗಳ ಮೂಲಕ ಮನೆಯಿಂದ ಹೊರ ಹೋಗಲು ಆಯ್ಕೆಯಾದರು. ಇನ್ನು ಹೀಗೆ ಆಯ್ಕೆಯಾದ ಸದ್ಯರಿಗೆ ನಾಮಿನೇಶನ್​ನಿಂದ ಪಾರಾಗಲೂ ಸಹ ಬಿಗ್​ ಬಾಸ್​ ಒಂದು ಅವಕಾಶ ನೀಡಿದ್ದರು. ಅದರಲ್ಲಿ ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಟಾಸ್ಕ್​ನಲ್ಲಿ ಗೆದ್ದು ನಾಮಿನೇಶನ್​ನಿಂದ ಪಾರಾಗಿದ್ದಾರೆ. ಈಗ ಉಳಿದಿರುವುದು ಶುಭಾ ಪೂಂಜಾ, ನಿರ್ಮಲಾ ಚೆನ್ನಪ್ಪ, ಧನುಶ್ರೀ, ಗಾಯಕ ವಿಶ್ವನಾಥ್​  ಹಾಗೂ ರಘು ಗೌಡ . ಇವರಲ್ಲಿ ಈ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಅನ್ನೋ ಲೆಕ್ಕಾಚಾರ ಆರಂಭವಾಗಿದೆ.  

ಫೆ. 28ರಂದು ಸಂಜೆ 6ಕ್ಕೆ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು ಆರು ದಿನಗಳ ನಂತರ ಕಿಚ್ಚ ಸುದೀಪ್​ ಅವರೊಂದಿಗೆ ಮಾತನಾಡಲಿದ್ದಾರೆ. ಇಂದಿನ ಸಂಚಿಕೆ ವಾರದ ಕತೆ ಕಿಚ್ಚನ ಜೊತೆ. ಇಡೀ ಪೂರ್ತಿ ವಾರದಲ್ಲಿ ಆದ ಘಟನೆಗಳು ಹಾಗೂ ಟಾಸ್ಕ್​ಗಳ ಬಗ್ಗೆ ಕಿಚ್ಚನ ಜೊತೆ ಸ್ಪರ್ಧಿಗಳು ಚರ್ಚಿಸಲಿದ್ದಾರೆ.

who will win the bigg boss kannada 8 season
ಬಿಗ್ ಬಾಸ್​ 8ರ ಸ್ಪರ್ಧಿಗಳು


ಇನ್ನು ಈ ವಾರದ ಅಂದರೆ ಮೊದಲ ಎವಿಕ್ಷನ್​ ಸಖತ್​ ತಿರುವುಗಳಿಂದ ಕೂಡಿರಲಿದೆಯಂತೆ. ಹೀಗೆಂದು ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್​ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.View this post on Instagram


A post shared by Param (@parameshwargundkal)


ಸದ್ಯಕ್ಕೆ ಲಭ್ಯವಾಗುತ್ತಿರುವ ಮಾಹಿತಿಗಳ ಪ್ರಕಾರ ಈ ಸಲ ನಟಿ ಶುಭಾ ಪೂಂಜಾ ಮನೆಯಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಡದಿಯ ಫಿಲ್ಮ್​ ಸಿಟಿಯಲ್ಲಿ ಇಂಧಿನ ಸಂಚಿಕೆಯ ಚಿತ್ರೀಕರಣ ನಡೆಯುತ್ತಿದ್ದು, ಶುಭಾ ಪೂಂಜಾ ಅವರನ್ನು ಮನೆಯಿಂದ ಹೊರ ಕರೆಯಲಾಗಿದೆಯಂತೆ. ಆದರೆ ಯಾರು ಮನೆಯಿಂದ ನಿಜಕ್ಕೂ ಹೊರ ನಡೆದಿದ್ದಾರೆ ಅನ್ನೋದನ್ನು ತಿಳಿಯೋಕೆ ಸಂಚಿಕೆ ವೀಕ್ಷಿಸಲೇ ಬೇಕು.

Actress Shubha Poonja cry, bigg boss kannada 8, bigg boss kannada season 8, Bigg Boss kannada 8, ಶುಭ ಪೂಂಜಾ ಕಣ್ಣೀರು, ಬಿಗ್ ಬಾಸ್ ಕನ್ನಡ 8, Bro Gowda, Bro Gowda Love Story, Dhanushree, Divya, ಬಿಗ್​ ಬಾಸ್​ ಮನೆಯಲ್ಲಿ ಚಿಗುರಿದ ಪ್ರೇಮ, ಬ್ರೋ ಗೌಡನಿಗೆ ಲವ್ವಾಗಿದೆ, ಧನುಶ್ರೀ, ದಿವ್ಯಾ, Nidhi Subbaiah, BBK , bbk8, kichcha sudeep,bbk8 contestant, who will win bbk8 colors kannada, kannada bigg boss, ಬಿಗ್​ ಬಾಸ್​ 8, ಕನ್ನಡ ಬಿಗ್​ ಬಾಸ್,
ಸ್ಯಾಂಡಲ್​ವುಡ್ ಗ್ಲಾಮರ್​ ಗೊಂಬೆ ಶುಭಾ ಪೂಂಜಾ


ಮನೆಯಿಂದ ಹೊರ ಕರೆದ ಮಾತ್ರ ಅವರೇ ಹೋಗಬೇಕಂತಲೂ ಇಲ್ಲ. ಕಾರಣ ಶುಭ ಪೂಂಜಾ ಅವರಿಗೆ ಇರುವ ಕ್ರೇಜ್​ ಬಗ್ಗೆ ಗೊತ್ತೇ ಇದೆ. ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿರುವುದರಿಂದಲೇ ಕಾರ್ಯಕ್ರಮ ನೋಡುತ್ತಿದ್ದೇವೆ ಎಂದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಪೋಸ್ಟ್​ ಮಾಡಿದ್ದರು.


ಇನ್ನು ಟಿಕ್​ಟಾಕ್​ ಸ್ಟಾರ್ ಧನುಶ್ರೀ ಮನೆಯಲ್ಲಿ ಯಾವ ಟಾಸ್ಕ್​ನಲ್ಲೂ ಗೆದ್ದಿಲ್ಲ. ಅಲ್ಲದೆ ಹೆಚ್ಚಾಗಿ ಯಾವ ಕೆಲಸಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅವರು ಮನೆಯಲ್ಲಿರುವುದೇ ಗೊತ್ತಾಗುತ್ತಿಲ್ಲ ಎಂದು ಸಹ ಸ್ಪರ್ಧಿಯೊಬ್ಬರು ಹೇಳಿದ್ದಾರೆ. ಅವರಿಂದ ತುಂಬಾ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ ಎಂದಿದ್ದಾರೆ. ಅಲ್ಲದೆ ಮೊದಲ ವಾರವೇ ಮನೆಯಿಂದ ಹೊರ ಹೋಗಲು ಇಷ್ಟವಿಲ್ಲ ಎಂದು ಧನುಶ್ರೀ ಸಹ ರಘು ಗೌಡ ಬಳಿ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದರೆ, ಈ ವಾರ ಮನೆಯಿಂದ ಧನುಶ್ರೀ ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದೂ ಹೇಳಲಾಗುತ್ತಿದೆ.
Published by: Anitha E
First published: March 6, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories