ಅಮಿತಾಭ್​ ಬಚ್ಚನ್​ ಜೊತೆ ಫೋಟೋಗೆ ಪೋಸ್​​ ನೀಡಿದ ಖುಷಿಯಲ್ಲಿ 'ಕಿಚ್ಚ' ಸುದೀಪ್​

Sye Raa Narasimha Reddy | ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿರುವ ಚಿರಂಜೀವಿ ನಟನೆಯ ತೆಲುಗಿನ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದ ಸೆಟ್​ನಲ್ಲಿರುವ ಸುದೀಪ್,​ ಬಚ್ಚನ್​ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Rajesh Duggumane | news18
Updated:March 16, 2019, 11:57 AM IST
ಅಮಿತಾಭ್​ ಬಚ್ಚನ್​ ಜೊತೆ ಫೋಟೋಗೆ ಪೋಸ್​​ ನೀಡಿದ ಖುಷಿಯಲ್ಲಿ 'ಕಿಚ್ಚ' ಸುದೀಪ್​
ಅಮಿತಾಭ್​-ಸುದೀಪ್​
Rajesh Duggumane | news18
Updated: March 16, 2019, 11:57 AM IST
ನಟ ಅಮಿತಾಭ್​ ಬಚ್ಚನ್​ ಹಾಗೂ ‘ಕಿಚ್ಚ’ ಸುದೀಪ್​ ಹಿಂದಿಯ ‘ರನ್​’ ಚಿತ್ರದಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಈ ಸಿನಿಮಾ ತೆರೆಕಂಡು 10 ವರ್ಷಗಳೇ ಕಳೆದಿವೆ. ಈಗ ಈ ಲೆಜೆಂಡ್​ ಜೊತೆ ಮತ್ತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಸುದೀಪ್​. ಈ ವಿಚಾರಕ್ಕೆ ಸುದೀಪ್​ ಸಖತ್​ ಖುಷಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.

ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿರುವ ಚಿರಂಜೀವಿ ನಟನೆಯ ತೆಲುಗಿನ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅಮಿತಾಭ್​ ಹಾಗೂ ಸುದೀಪ್​ ಇಬ್ಬರೂ ಅಭಿನಯಿಸುತ್ತಿದ್ದಾರೆ. ಸದ್ಯ ಸಿನಿಮಾದ ಸೆಟ್​ನಲ್ಲಿರುವ ಸುದೀಪ್,​ ಬಚ್ಚನ್​ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ರನ್​ ಚಿತ್ರ ತೆರೆಕಂಡು 10 ವರ್ಷಗಳ ನಂತರ ನಾನು ಈ ಲೆಜೆಂಡ್​ ಜೊತೆ ಮತ್ತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದೇನೆ. ಅವರು ತಮ್ಮ ಜೀವನದ ಬಹುತೇಕ ಸಮಯವನ್ನು ಚಿತ್ರರಂಗದಲ್ಲೇ ಕಳೆದಿದ್ದಾರೆ. ನನಗೆ ಈ ಕ್ಷಣವನ್ನು ಉಡುಗರೆಯಾಗಿ ನೀಡಿದ ಚಿರಂಜೀವಿ ಹಾಗೂ ನಿರ್ದೇಶಕ ಸುರೇಂದರ್​ ಅವರಿಗೆ ಧನ್ಯವಾದ. ಅಮಿತಾಭ್​ ಅವರಿಗೂ ಥ್ಯಾಂಕ್ಸ್​,” ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕ್ರಿಸ್​​ಮಸ್​ಗೆ ತೆರೆಗೆ ಬರಲಿದೆ ‘ಕಿಚ್ಚ’ ಸುದೀಪ್​ ನಟನೆಯ ಈ ಬಾಲಿವುಡ್​ ಚಿತ್ರ!ರಾಯಲು ಸೀಮೆಯ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನ ಆಧರಿಸಿ ಈ ಚಿತ್ರ ಮಾಡಿದ್ದಾರೆ ನಿರ್ದೇಶಕ ಸುರೇಂದರ್​ ರೆಡ್ಡಿ. ಈ ವರ್ಷ ಅಕ್ಟೋಬರ್​ನಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಅಮಿತಾಭ್​ ಹಾಗೂ ಸುದೀಪ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ‘ಸೈರಾ…’ ನಾಯಕಿ. ನಟ ರಾಮ್​ ಚರಣ್​ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

'ರನ್​' ಚಿತ್ರವನ್ನು ರಾಮ್​ ಗೋಪಾಲ್​ ವರ್ಮಾ ನಿರ್ದೇಶನ ಮಾಡಿದ್ದರು. ಅಮಿತಾಭ್​, ರಿತೇಶ್​ ದೇಶ್​ಮುಖ್​, ಪರೇಶ್ ರಾವಲ್​ ಹಾಗೂ ಸುದೀಪ್​ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ: 'ದಬಂಗ್​ 3' ಚಿತ್ರದಲ್ಲಿ ಸುದೀಪ್​ ನಟಿಸೋದು ಖಚಿತ?; ಹೌದೆನ್ನುತ್ತಿವೆ ಈ ಟ್ವೀಟ್​ಗಳು

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626