• Home
  • »
  • News
  • »
  • entertainment
  • »
  • Sudeep-KCC: ಚಿತ್ರರಂಗ ನನ್ನ ಸ್ವತ್ತಲ್ಲ, ಇಷ್ಟ ಇರುವವರು ಆಡಲು ಬರ್ತಾರೆ; ಕೆಸಿಸಿ 3ನೇ ಸೀಸನ್ ಬಗ್ಗೆ ಸುದೀಪ್​ ಮಾತು

Sudeep-KCC: ಚಿತ್ರರಂಗ ನನ್ನ ಸ್ವತ್ತಲ್ಲ, ಇಷ್ಟ ಇರುವವರು ಆಡಲು ಬರ್ತಾರೆ; ಕೆಸಿಸಿ 3ನೇ ಸೀಸನ್ ಬಗ್ಗೆ ಸುದೀಪ್​ ಮಾತು

ಕಿಚ್ಚ ಸುದೀಪ್

ಕಿಚ್ಚ ಸುದೀಪ್

ಕೆಸಿಸಿಯಲ್ಲಿ ಭಾಗವಹಿಸಲು ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ, ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ ಎಂದು ಸುದೀಪ್ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿರುವ ಸ್ಯಾಂಡಲ್​ವುಡ್ (Sandalwood) ಮಂದಿ ಇದೀಗ ಬ್ಯಾಟು-ಬಾಲ್​ ಹಿಡಿದು ಫೀಲ್ಡ್​ಗೆ ಇಳಿಯಲು ರೆಡಿಯಾಗಿದ್ದಾರೆ. ಕೆಸಿಸಿ 3ನೇ ಸೀಸನ್ (KCC 3rd Season)​ ಆರಂಭಿಸಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಎರಡೂ ಸೀಸನ್​ ಯಶಸ್ವಿಯಾದ ಬಳಿಕ ಇದೀಗ ಮೂರನೇ ಸೀಸನ್​ಗೂ ಶೀಘ್ರವೇ ಚಾಲನೆ ಸಿಗಲಿದೆ. ಫೆಬ್ರವರಿ ತಿಂಗಳಲ್ಲಿ (February Month) ನಡೆಯುವ ಮ್ಯಾಚ್​ಗೆ (Match) ಭರ್ಜರಿ ತಯಾರಿ ನಡೆಸಲಾಗಿದೆ. ಕೆಸಿಸಿ 3ನೇ ಸೀಸನ್ ಕುರಿತು ನಟ ಕಿಚ್ಚ ಸುದೀಪ್ (Actor Sudeep)​ ಮಾಹಿತಿ ನೀಡಿದ್ದಾರೆ. 


ಚಿತ್ರರಂಗದ ಎಲ್ಲರಿಗೂ ಆಹ್ವಾನ ಕೊಡ್ತೀವಿ


ಕೆಸಿಸಿಯ ಕಳೆದ ಎರಡು ಸೀಸನ್​ಗಳಲ್ಲಿ ಸ್ಯಾಂಡಲ್​ವುಡ್​ನ ಅನೇಕರು  ಭಾಗಿಯಾಗಿದ್ರು. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿಲ್ಲ.ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಹಿಂದಿನ ಸೀಸನ್​ನಲ್ಲಿ ಕೇಳಿ ಬಂದಿರುವ ಆರೋಪದ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.




ಚಿತ್ರರಂಗ ನನ್ನ ಸ್ವತ್ತಲ್ಲ


ಕೆಸಿಸಿಯಲ್ಲಿ ಭಾಗವಹಿಸಲು ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ ಎಂದು ಸುದೀಪ್​ ಖಡಕ್ ಆಗಿಯೇ ಹೇಳಿದ್ದಾರೆ.




ಅಂತಾರಾಷ್ಟ್ರೀಯ ಆಟಗಾರರು ಇರ್ತಾರೆ


ಕಳೆದ ವರ್ಷ ತಂಡದಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ಆಡಿದ ಕ್ರಿಕೆಟ್ ಆಟಗಾರರು ಕೂಡ ಇದ್ರು. ಹಾಗೆಯೇ  ಈ ವರ್ಷ ಕೂಡ ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ ಎಂದು ನಟ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ಸಿನಿಮಾ ರಂಗದವರು ಕೂಡ ಇರುತ್ತಾರೆ. ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಯವರು ಸಹ ಕ್ರಿಕೆಟ್​ ಆಡೋಕೆ ಬರಬಹುದು. ರಾಜಕಾರಣಿಗಳು ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು ಎಂದು ಸುದೀಪ್ ಹೇಳಿದ್ದಾರೆ.


ಯಾವ ರೀತಿ ಕ್ಯಾಪ್ಟನ್ ಆಯ್ಕೆ ಮಾಡಲಾಗುತ್ತದೆ?


ಕೆಸಿಸಿ ಸೀಸನ್ 3ಕ್ಕೆ ತಂಡ ರಚನೆಯಾದ ಬಳಿಕ ಕ್ಯಾಪ್ಟನ್ ಆಯ್ಕೆ ಮಾಡಲಾಗುತ್ತದೆ. ಅವರವರ ತಂಡದ ಕ್ಯಾಪ್ಟನ್​ನನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು. ಒಮ್ಮತದಿಂದ ಕ್ಯಾಪ್ಟನ್ ಆಯ್ಕೆ ನಡೆಯುತ್ತದೆ. ಒತ್ತಾಯ ಪೂರ್ವಕವಾಗಿ ಯಾರೂ ಇಲ್ಲಿ ನಾಯಕ ಆಗೋಕೆ ಆಗಲ್ಲ ಎಂದು ಸುದೀಪ್ ಹೇಳಿದ್ದಾರೆ.




ಕೆಸಿಸಿ 3ನೇ ಸೀಸನ್​ಗೆ ಅದ್ದೂರಿ ಚಾಲನೆ


‘ಕೆಸಿಸಿ 3ನೇ ಸೀಸನ್​​’ಗೆ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಸುದೀಪ್ ಕೂಡ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಿದ್ದಾರೆ. ಸಾಕಷ್ಟು ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲು ಅವರು ಪ್ಲಾನ್ ಮಾಡಿದ್ದಾರೆ. ಅನೇಕ ಗಾಯಕರು​ ಭಾಗಿಯಾಗಿ ಉದ್ಘಾಟನಾ ಸಮಾರಂಭದ ರಂಗು ಹೆಚ್ಚಿಸಲಿದ್ದಾರೆ.


ಇದನ್ನೂ ಓದಿ: Anup Bhandari Movie: ಬಿಗ್ ಸಿನಿಮಾ ಬಿಗ್ ತಯಾರಿ, ಕಿಚ್ಚನ ಮುಂದಿನ ಚಿತ್ರಕ್ಕೆ ಎಲ್ಲ ರೆಡಿನಾ? ಏನಂತಾರೆ ಅನೂಪ್ ಭಂಡಾರಿ!




ಕೆಸಿಸಿ ಟಿವಿಯಲ್ಲಿ ಲೈವ್​ ಇರುತ್ತೆ


ಕೆಸಿಸಿ ಸೀಸನ್ 3 ಮ್ಯಾಚ್ ಲೈವ್​ ಕೆಸಿಸಿ ಟಿವಿಯಲ್ಲಿ ಇರುತ್ತದೆ. ವೃತ್ತಿಪರ ಕ್ಯಾಮೆರಾಮೆನ್​​ಗಳು ಬರುತ್ತವೆ.  ಮೈಸೂರಿನಲ್ಲಿ 2 ದಿನ ಮ್ಯಾಚ್ ಇರುತ್ತದೆ. ಫೆಬ್ರವರಿ 11 ಹಾಗೂ 12 ರಂದು ಮ್ಯಾಚ್​​ಗಳು ನಡೆಯಲಿದೆ ಎಂದು ಸುದೀಪ್ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: