Kiccha Sudeep: ಕನ್ನಡ ಸಿನಿಮಾ ನೋಡಿ ಕೊಂಡಾಡಿದ ಕಿಚ್ಚ! 'ಆ' ನಟನ ಪರ್ಫಾಮೆನ್ಸ್​ಗೆ ಸುದೀಪ್​ ಫಿದಾ

ಕಿಚ್ಚ ಸುದೀಪ್​ ಮೊದಲಿನಿಂದಲೂ ಯಂಗ್​ ಟ್ಯಾಲೆಂಟ್ಸ್​​ಗೆ ಸರ್ಪೋಟ್​ ಮಾಡಿಕೊಂಡು ಬಂದಿದ್ದಾರೆ. ಸಮಯ ಸಿಕ್ಕಾಗೆಲ್ಲ ಕಿಚ್ಚ ಹೊಸಬರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈಗಲೂ ಅದನ್ನೇ ಮಾಡಿದ್ದಾರೆ.

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಭಾರತದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep) ಅವರ ಕಾಮೆಂಟ್‌ಗೆ ಅಜಯ್ ದೇವಗನ್ (Ajay devgan) ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ, ಹಾಗಾದರೆ ಹಿಂದಿ ಭಾಷೆಯಲ್ಲೇಕೆ ನಿಮ್ಮ ಚಿತ್ರಗಳನ್ನು ಡಬ್ (Dub) ಮಾಡುತ್ತೀರಿ ಎಂದು ಸಂಪೂರ್ಣ ಹಿಂದಿಯಲ್ಲಿಯೇ ಬರೆದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಆದರೆ, ಅಜಯ್ ದೇವಗನ್ ಅವರ ಟ್ವೀಟ್ ಗೆ  (Tweet) ಸುದೀಪ್ ಕೂಡ ತಕ್ಕ ಉತ್ತರ ನೀಡಿದ್ದರು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಕಿಚ್ಚ  ಸುದೀಪ್​ಗೆ ಆಭೂತ ಪೂರ್ವ ಬೆಂಬಲ ವ್ಯಕ್ತವಾಗಿತ್ತು. ಕಿಚ್ಚ ಸುದೀಪ್​ ಮೊದಲಿನಿಂದಲೂ ನೇರ ವ್ಯಕ್ತಿ. ಸುತ್ತಿ ಬಳಸಿ ಮಾತನಾಡದೇ ಡೈರೆಕ್ಟ್​ ಆಗಿ ಮಾತನಾಡುತ್ತಾರೆ. ಅದು ಯಾವುದೇ ವಿಚಾರ ಇರಲಿ. ಈಗಲೂ ಕನ್ನಡ ಸಿನಿಮಾವೊಂದನ್ನು ನೋಡಿದ ಕಿಚ್ಚ ಹಾಡಿ ಹೊಗಳಿದ್ದಾರೆ.

'ಗರುಡ ಗಮನ ವೃಷಭ ವಾಹನ' ಮೆಚ್ಚಿದ ಕಿಚ್ಚ

ಕಿಚ್ಚ ಸುದೀಪ್​ ಮೊದಲಿನಿಂದಲೂ ಯಂಗ್​ ಟ್ಯಾಲೆಂಟ್ಸ್​​ಗೆ ಸರ್ಪೋಟ್​ ಮಾಡಿಕೊಂಡು ಬಂದಿದ್ದಾರೆ. ಸಮಯ ಸಿಕ್ಕಾಗೆಲ್ಲ ಕಿಚ್ಚ ಹೊಸಬರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈಗಲೂ ಅದನ್ನೇ ಮಾಡಿದ್ದಾರೆ. ಮಂಗಳಾದೇವಿಯ ರಕ್ತ ಸಿಕ್ತ ಕಥೆ ಹೊಂದಿರುವ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಹೊಗಳಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ ಈ ಸಿನಿಮಾವನ್ನು ನಿನ್ನೆಯಷ್ಟೆ (ಮೇ 05) ರಂದು ವೀಕ್ಷಿಸಿರುವ ಸುದೀಪ್, ಟ್ವಿಟ್ಟರ್‌ನಲ್ಲಿ ಉದ್ದದ ಪತ್ರವೊಂದನ್ನು ಬರೆದು ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್​ ಬಿ ಶೆಟ್ಟಿ ನಿರ್ದೇಶನಕ್ಕೆ ಕಿಚ್ಚ ಫಿದಾ!

ಒಳ್ಳೆಯ ಚಿತ್ರಕ್ಕಾಗಿ ಕ್ರಿಯೇಟರ್ ಒಬ್ಬ ನಡೆಸುವ ಹುಡುಕಾಟ ನಿರಂತರವಾದುದು. ಸಿನಿಮಾ ಮಾಡುವಾಗ ಎಲ್ಲರಲ್ಲೂ ಉತ್ಸಾಹ ತುಂಬಬಲ್ಲ ಚಿತ್ರಕತೆ, ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಭಿನ್ನ ಅನುಭೂತಿ ನೀಡುವ ಚಿತ್ರಕತೆ'' ಎಂದಿರುವ ಸುದೀಪ್, ''ಈ ಮಾತುಗಳನ್ನು ನಾನು ಕೇವಲ ನನ್ನ ಅಭಿಪ್ರಾಯವಾಗಿ ಅಲ್ಲ, ಬದಲಿಗೆ ಈ ಸಿನಿಮಾ ನೀಡಿದ ಇಡೀ ತಂಡಕ್ಕೆ ನನ್ನ ಅಭಿನಂದನೆಗಳ ರೂಪದಲ್ಲಿ ಹೇಳುತ್ತಿದ್ದೇನೆ. ನೀವೊಂದು ಅದ್ಭುತವಾದ ಸಿನಿಮಾವನ್ನು ನೀಡಿದ್ದೀರಿ'' ಎಂದಿದ್ದಾರೆ.






ಇದನ್ನೂ ಓದಿ : ಇಂದು ದೊಡ್ಮನೆ ಮೊಮ್ಮಗ ವಿನಯ್​ ರಾಜ್​ಕುಮಾರ್ ಹುಟ್ಟುಹಬ್ಬ, ಸಂಜೆ 'ಪೆಪೆ' ಟೀಂನಿಂದ ಬಿಗ್​ ಗಿಫ್ಟ್​!

ಸಂಗೀತ ನಿರ್ದೇಶಕನಿಗೆ ಅಭಿನಂದನೆ ತಿಳಿಸಿದ ಕಿಚ್ಚ!

"ಸರಳತೆಯೇ ಸಿನಿಮಾದ ಹೈಲೆಟ್​ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ​.ಸಿನಿಮಾದ ಸರಳತೆಯೇ ಸಿನಿಮಾದ ಬಹುದೊಡ್ಡ ಅಂಶ. ಸಿನಿಮಾದ ಯಾವ ದೃಶ್ಯ ಅಥವಾ ಪಾತ್ರವೂ ಸಹ ಬಲವಂತದಿಂದ ತುರುಕಲಾಗಿದೆ ಎನಿಸುವುದಿಲ್ಲ. ಹಿನ್ನೆಲೆ ಸಂಗೀತ ಸಿನಿಮಾದ ತೀವ್ರತೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ನಾನು ಸಿನಿಮಾದ ಕತೆಯಲ್ಲಿ ಮುಳುಗಿ ಹೋಗಿದ್ದರೂ ಸಹ ಸಂಗೀತದಿಂದ ನನ್ನ ಗಮನ ಬೇರೆಯಡೆ ಹರಿಯಲಿಲ್ಲ. ಸಂಗೀತ ನಿರ್ದೇಶಕ ಮುಕುಂದ್‌ಗೆ ಅಭಿನಂದನೆ'' ಎಂದು ಹೊಗಳಿದ್ದಾರೆ ಸುದೀಪ್.

ಇದನ್ನೂ ಓದಿ: ಮತ್ತೆ ಗುಟ್ಕಾ​ ಗಿರಾಕಿ ಕಿರಿಕ್! 'ವಿಕ್ರಾಂತ್​ ರೋಣ' ವಿರುದ್ಧ ತೊಡೆತಟ್ಟಿದ ಅಜಯ್​ ದೇವಗನ್​

ಶಿವನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರಂತೆ ರಾಜ್​ ಬಿ ಶೆಟ್ಟಿ!

ಮೊದಲ ಬಾರಿಗೆ ರಾಜ್​ಬಿ ಶೆಟ್ಟಿ ಅವರ ಸಿನಿಮಾವನ್ನು ಕಿಚ್ಚ ಸುದೀಪ್​ ನೋಡಿದ್ದಾರೆ . ಶಿವನ ಪಾತ್ರದಲ್ಲಿ ಬೇರೆ ಯಾರು ನಟಿಸಿದ್ದರು, ರಾಜ್​ ಬಿ ಶೆಟ್ಟಿಯಷ್ಟು ಅದ್ಭುತವಾಗಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ. ಶಿವನ ಪಾತ್ರಕ್ಕೆ ರಾಜ್​ ಬಿ ಶೆಟ್ಟಿ ನ್ಯಾಯ ಒದಗಿಸಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಕಿಚ್ಚ ಸುದೀಪ್​ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Published by:Vasudeva M
First published: