ಎಲೆಕ್ಷನ್ (Election) ಹತ್ತಿರ ಬರ್ತಿದ್ದಂತೆ ಅನೇಕ ಪಕ್ಷಗಳ ನಾಯಕರು (Party Leaders) ಸಿನಿಮಾ ನಟ-ನಟಿಯರನ್ನು ಪಕ್ಷಗಳತ್ತ ಕರೆತರುವ ಶತಪ್ರಯತ್ನದಲ್ಲಿದ್ದಾರೆ. ಸಿನಿಮಾ ಕಲಾವಿದರು (Film Artists) ರಾಜಕೀಯಕ್ಕೆ ಎಂಟ್ರಿ ಕೊಡುವುದು ಸಾಮಾನ್ಯವಾಗಿದೆ. ಅನೇಕ ನಟ-ನಟಿಯರು ರಾಜಕೀಯವಾಗಿಯೂ ಕೂಡ ಬೆಳೆದಿದ್ದಾರೆ. ಇದೀಗ ಕಿಚ್ಚ ಸುದೀಪ್ (Kichcha Sudeep) ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ರಾಜ್ಯದಲ್ಲಿ ವಿಧಾನಸಭೆ ಎಲೆಕ್ಷನ್ (Assembly Election) ಹತ್ತಿರ ಬರ್ತಿದ್ದಂತೆ ಅನೇಕ ರಾಜಕೀಯ ನಾಯಕರು (Political Leaders) ಸುದೀಪ್ ಮನೆಯ ಬಾಗಿಲು ತಟ್ಟಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ ಕೂಡ ನೀಡಿದ್ದಾರೆ.
ರಾಜಕೀಯ ನಾಯಕರು ಮಾತುಕತೆಗೆ ಬಂದಿದ್ದು ನಿಜ
ಕೆಲವೇ ದಿನಗಳ ಹಿಂದೆ ಕಿಚ್ಚ ಸುದೀಪ್ (Kichcha Sudeep) ಅವರನ್ನು ಕೆಲವು ರಾಜಕೀಯ ನಾಯಕರು ಭೇಟಿ ಆಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಡಿಕೆಶಿ ಭೇಟಿ ಹಾಗೂ ಚರ್ಚೆ ಬಗ್ಗೆ ಇದೀಗ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ನಾಯಕರು ಮಾತುಕತೆಗೆ ಬಂದಿದ್ದು ನಿಜ ಎಂದು ಹೇಳಿದ್ದಾರೆ. ಆದರೆ ರಾಜಕೀಯಕ್ಕೆ ಎಂಟ್ರಿ ನೀಡಬೇಕಾ ಬೇಡವಾ ಎಂಬ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಡಿಕೆ ಶಿವಕುಮಾರ್, ರಮ್ಯಾ, ಬೊಮ್ಮಾಯಿ ನನಗೆ ಆಪ್ತರು
‘ನಾನೊಬ್ಬ ಕಲಾವಿದ, ಇಲ್ಲ ಅಂತ ತೇಲಿಸೋಕೆ ಹೋಗಲ್ಲ, ಹಂಡ್ರೆಡ್ ಪರ್ಸೆಂಟ್ ಮಾತುಕತೆಗೆ ಬಂದಿದ್ದರು ಎಂದು ಸುದೀಪ್ ಹೇಳಿದ್ದಾರೆ. ಇತ್ತೀಚೆಗೆ ಪೊಲಿಟಿಕಲ್ ನಾಯಕರಿಗೆ ನನ್ನ ಮೇಲೆ ನಂಬಿಕೆ ಬಂದಿದೆ. ಡಿಕೆ ಶಿವಕುಮಾರ್, ಸುಧಾಕರ್, ಬಸವರಾಜ ಬೊಮ್ಮಾಯಿ, ರಮ್ಯಾ ಅವರು ನನ್ನ ಸ್ನೇಹಿತರು. ರಾಜಕೀಯ ಪ್ರವೇಶದ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ತಗೊಂಡಿಲ್ಲ. ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗುತ್ತದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಶೀಘ್ರದಲ್ಲೇ ಸೂಕ್ತ ನಿರ್ಧಾರ
ಸುದೀಪ್ ಅವರು ರಾಜಕೀಯಕ್ಕೆ ಬರೋದು ಬೇಡ ಅಂತ ನಮ್ಮ ಜನರ ತಲೆಯಲ್ಲಿ ಇರಬಹುದು. ಎಮೋಶನ್ಸ್ ಇದೆ. ಅದರ ಜೊತೆ ನಮ್ಮ ನಿರ್ಧಾರವನ್ನು ಸೇರಿಸೋಕೆ ಹೋಗಲ್ಲ. ಒಳ್ಳೆಯದನ್ನು ಮಾಡೋಕೆ ಪವರ್ ಬೇಕು ಅಂತ ಏನು ಇಲ್ಲ ಎಂದ ಕಿಚ್ಚ ಸುದೀಪ್ ಶೀಘ್ರದಲ್ಲೇ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಎಚ್‌ಡಿಕೆ ವಿರುದ್ಧ ಸ್ಪರ್ಧಿಸ್ತಾರಾ ನಟಿ ರಮ್ಯಾ?
ಎಚ್‌ಡಿ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಒಂದೆಡೆ ಜೆಡಿಎಸ್‌ನಿಂದ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸ್ಪರ್ಧಿಸ್ತಾರೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ನಟಿ, ಮಾಜಿ ಸಂಸದೆ ರಮ್ಯಾ ಹೆಸರು ಕೇಳಿ ಬಂದಿದೆ.
ರಮ್ಯಾಗೆ ಟಿಕೆಟ್ ಯಾಕೆ?
ಈಗಾಗಲೇ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್ ಸ್ಪರ್ಧೆಯಿಂದ ಚನ್ನಪಟ್ಟಣ ಕ್ಷೇತ್ರ ಚುನಾವಣೆ ಘೋಷಣೆಗೂ ಮುನ್ನವೇ ರಂಗೇರಿದೆ. ಇದರೊಂದಿಗೆ ನಟಿ ರಮ್ಯಾ ಹೆಸರೂ ಸೇರಿಕೊಂಡಿದೆ.
ಇದನ್ನೂ ಓದಿ: Ramya-HDK: ಎಚ್‌ಡಿಕೆ ವಿರುದ್ಧ ಸ್ಪರ್ಧಿಸ್ತಾರಾ ನಟಿ ರಮ್ಯಾ? ರಂಗೇರಲಿದೆ ಚನ್ನಪಟ್ಟಣ ರಾಜಕೀಯ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ