ಸ್ಯಾಂಡಲ್‌ವುಡ್‌ನ (Sandalwood) ಚಿತ್ರ ಕಬ್ಜ (Kabzaa) ಸಿನಿಮಾ ಇಡೀ ದೇಶದಲ್ಲಿ ಗ್ರ್ಯಾಂಡ್ ರಿಲೀಸ್ ಕಂಡಿದೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನು ಚಿತ್ರದ ರೆಸ್ಪಾನ್ಸ್ ಗೆ ನಿರ್ದೇಶಕ ಆರ್ ಚಂದ್ರು (R. Chandru), ನಟ ಉಪೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದಲ್ಲಿ ಕೆಲವೇ ನಿಮಿಷಗಳ ಎಂಟ್ರಿಗೆ ಕಿಚ್ಚ ಸುದೀಪ್ (Kichcha Sudeepa) ಅಭಿಮಾನಿಗಳು ಬೇಸರಗೊಂಡಿದ್ದಾರೆ. ನಿರ್ದೇಶಕ ಆರ್. ಚಂದ್ರು ಅವರು ತಮ್ಮ ಕಬ್ಜಾ ಚಿತ್ರವನ್ನು ನಟರಾದ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶಿವರಾಜ್‌ಕುಮಾರ್ (Shivarajkumar) ಅವರೊಂದಿಗೆ ಮಲ್ಟಿ-ಸ್ಟಾರರ್ ಚಿತ್ರ ಎಂದು ಹೇಳಲಾಗುತ್ತಿತ್ತು. ಆದರೆ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕೆಲ ನಿಮಿಷಗಳಷ್ಟೇ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಚಂದ್ರು ಅವರ ಕಬ್ಜ ಚಿತ್ರವನ್ನು ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳು ಈ ಬಗ್ಗೆ ನಿರಾಸೆಗೊಂಡಿದ್ದಾರೆ. ಕಬ್ಜದಲ್ಲಿ ಸುದೀಪ್ ಸಣ್ಣ ಪಾತ್ರ ಕಂಡು ಬೇಸರಗೊಂಡಿದ್ದಾರೆ. ಅಲ್ಲದೇ ಇಂಥ ಪಾತ್ರಗಳಿಗೆ ಬಣ್ಣ ಹಚ್ಚಬೇಡಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಹೇಳುತ್ತಿದ್ದಾರೆ.
ಅತಿಥಿ ಪಾತ್ರ ಮಾಡುವುದನ್ನು ಬಿಡಿ ಎಂದ ಫ್ಯಾನ್ಸ್
ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಕೇಳಿಬಂದ ಹಿನ್ನೆಲೆಯಲ್ಲಿ ನಟ ಸುದೀಪ್ ಕಬ್ಜಾ ತಂಡಕ್ಕೆ ಅಭಿನಂದನಾ ಸಂದೇಶವನ್ನು ಟ್ವೀಟ್ ಮಾಡಿದ್ದರು. "#Kabzaa ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿಬರುತ್ತಿದೆ. ನಿಮಗೆ @rchandru_movies @nimmaupendra ಸರ್.. ಅಭಿನಂದನೆಗಳು ತಂಡ" ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವಿಟ್ಟರ್‌ನಲ್ಲಿ ಸಾಕಷ್ಟು ಜನರು, ಸುದೀಪ್‌ಗೆ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಬೇಡಿ ಎಂದು ಹೇಳಿದ್ದಾರೆ. “ಕ್ಯಾಮಿಯೋ ಮಾಡುವುದನ್ನು ನಿಲ್ಲಿಸಿ. ಫ್ರೆಂಡ್‌ಶಿಪ್‌ಗಾಗಿ ಕಾಲ್‌ಶೀಟ್ ಕೊಡಬೇಡಿ. ಅಭಿಮಾನಿಗಳ ಭಾವನೆಗಳನ್ನು ಗೌರವಿಸಿ. ನಮಗೆ ಉತ್ತಮ ಚಿತ್ರಗಳನ್ನು ನೀಡಿ” ಎಂದು ಹೇಮಂತ್ ಶೈವ ಎಂಬುವವರು ಬರೆದಿದ್ದಾರೆ.
ಇದನ್ನೂ ಓದಿ: Chandan-Nivedita: ಕೇರಳದಲ್ಲಿ ಬಿಗ್ ಬಾಸ್ ಜೋಡಿ, ನಿವಿ-ಚಂದನ್ ಮತ್ತೊಂದು ಟ್ರಿಪ್!
ಇನ್ನು, “ಅಭಿಮಾನಿಗಳ ಧ್ವನಿ ನಿಮಗೆ ಕೇಳುತ್ತೆ ಅನ್ಕೋತೀನಿ ಪ್ಲೀಸ್ ನಿಮ್ಮ ವೃತ್ತಿಜೀವನದ ಈ ಪೀಕ್ ಸಮಯದಲ್ಲಿ ಅಭಿಮಾನಿಗಳು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಯಲು ಕಾಮೆಂಟ್‌ಗಳನ್ನು ಓದಿ” ಎಂಬುದಾಗಿ ಬಾಬು. ಕೆ ಎಂಬುವವರು ಬರೆದಿದ್ದಾರೆ.
ಕಬ್ಜಾದಲ್ಲಿ ಸುದೀಪ್ ಅವರ ಶೈಲಿ ಹಾಗೂ ಅಭಿನಯವನ್ನು ಎಲ್ಲರೂ ಇಷ್ಟಪಟ್ಟರೂ ಟ್ವಿಟ್ಟರ್‌ನಲ್ಲಿ ಹೆಚ್ಚು ಅಭಿಮಾನಿಗಳು ಇಂಥ ಅತಿಥಿ ಪಾತ್ರ ಮಾಡಬೇಡಿ ಎಂದು ಸುದೀಪ್‌ಗೆ ಸಲಹೆ ನೀಡಿದ್ದಾರೆ.
ಅಪ್ಪಿತಪ್ಪಿಯೂ ಕಬ್ಜ 2 ಗೆ ಸೈನ್ ಮಾಡ್ಬೇಡಿ
“ಬಾಸ್ ಅಪ್ಪಿ ತಪ್ಪಿ ಕೂಡ ಕಬ್ಜ ಭಾಗ 2 ಸೈನ್ ಮಾಡ್ಬೇಡಿ, ಸ್ನೇಹ ಗೋಸ್ಕರ ಚಿತ್ರಗಳು ಮಾಡಿ, ಪರವಾಗಿಲ್ಲ ಆದರೆ ಅಭಿಮಾನಿಗಳು ಗ್ರಾಂಟೆಡ್ ಆಗಿ ತಗೋಬೇಡಿ” ಎಂದು ಅಭಿಮಾನಿಗಳು ಹೇಳಿದ್ದಾರೆ. ಅಲ್ಲದೇ “ಸ್ನೇಹಿತರಿಗಾಗಿ ಸಿನಿಮಾ ಮಾಡುವುದನ್ನು ನಿಲ್ಲಿಸಿ ಮತ್ತು ಅಂತಹ ಚಲನಚಿತ್ರಗಳಿಗೆ ಅತಿಥಿ ಪಾತ್ರಗಳನ್ನು ಮಾಡುವುದನ್ನು ನಿಲ್ಲಿಸಿ. ನಿಮ್ಮ ಸಿನಿಮಾಗಳಿಗಾಗಿ ನಾವಿದ್ದೇವೆ. ನಿಮ್ಮ ಪ್ರತಿಭೆಗೆ ತಕ್ಕಂತೆ ಸ್ಕ್ರಿಪ್ಟ್ ಆಯ್ಕೆ ಮಾಡಿ ಸರ್” ಎಂದು ಸುದೀಪ್ ಫ್ಯಾನ್ಸ್ ಹೇಳುತ್ತಿದ್ದಾರೆ.
“ದೊಡ್ಡ ನಮಸ್ಕಾರ... ಅವ್ನ್ ಮುಗ್ಧತೆ ಇಷ್ಟ ಆಯ್ತು, ಪ್ರಾಮಾಣಿಕ ವ್ಯಕ್ತಿ, ತಮ್ಮ ಇದ್ದ ಹಾಗೆ, ಅಣ್ಣ ಇದ್ದ ಹಾಗೆ ಅಂದ್ಕೊಂಡು ಫಿಲ್ಮ್ ಸೆಲೆಕ್ಟ್ ಮಾಡೋದು ಬಿಡಿ ಪ್ಲೀಸ್. ಫ್ಯಾನ್ಸ್ ರಿಕ್ವೆಸ್ಟ್ ,ಸಪೋರ್ಟ್ ರೋಲ್ ಬೇಡ” ಅಂತ ಮತ್ತೊಬ್ಬರು ಹೇಳಿದ್ದಾರೆ.
“ಅತಿಥಿ ಪಾತ್ರಗಳಲ್ಲಿ ಅಭಿನಯಿಸಬೇಡಿ. ನಿಮ್ಮ ಮುಂದಿನ ಚಿತ್ರವನ್ನು 10ವರ್ಷ ಆದ್ಮೇಲೆ ಬೇಕಾದ್ರೆ ರಿಲೀಸ್ ಮಾಡಿ. ಆದ್ರೆ ನಂದ ಕಿಶೋರ್ ಜೊತೆ ಮಾತ್ರ ಮಾಡ್ಬೇಡಿ” ಅಂತ ಮತ್ತೊಬ್ಬರು ಅಭಿಮಾನಿ ಹೇಳಿದ್ದಾರೆ. ಇನ್ನೊಬ್ಬರು “ಕಬ್ಜಾ 2 ಚಿತ್ರಕ್ಕೆ ಮಾತ್ರ ಸೈನ್ ಮಾಡ್ಬೇಡಿ ಪ್ಲೀಸ್” ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ