HOME » NEWS » Entertainment » KICHCHA SUDEEP DONATED 10 LAKH RUPEES BUILDING FUND TO KARNATAKA STUNT UNION AE

Kichcha Sudeep: ಸಹಾಯಹಸ್ತ ಚಾಚಿದ ಕೋಟಿಗೊಬ್ಬ ಕಿಚ್ಚ: ನನಸಾಯ್ತು ಫೈಟ್ ಮಾಸ್ಟರ್​ಗಳ 38 ವರ್ಷಗಳ ಕನಸು !

Kichcha Sudeep: ತೆರೆಯ ಮೇಲೆ ನನ್ನನ್ನು ಚೆನ್ನಾಗಿ ಕಾಣುವಂತೆ ಮಾಡುವ ಅದ್ಭುತ ಸ್ಟಂಟ್ ಮಾಸ್ಟರ್ಸ್ ಹಾಗೂ ಫೈಟರ್‌ಗಳಿಗೆ ಹೀಗೊಂದು ಪ್ರೀತಿಪೂರ್ವಕವಾಗಿ ಕೃತಜ್ಞತೆ ತಿಳಿಸಿದ್ದೇನಷ್ಟೇ. ನಾನು ನನ್ನದೇ ಆದ ಇತಿಮಿತಿಗಳಿರುವ ವ್ಯಕ್ತಿ. ಆದರೆ ನಿಮ್ಮಂತಹ ಅದ್ಭುತ ತಂತ್ರಜ್ಞರು ನನ್ನನ್ನು ಹೀರೋ ಮಾಡಿದ್ದೀರಿ ಎಂದು ಟ್ವೀಟ್​ ಮಾಡಿದ ಕಿಚ್ಚ.

Anitha E | news18-kannada
Updated:November 7, 2019, 1:12 PM IST
Kichcha Sudeep: ಸಹಾಯಹಸ್ತ ಚಾಚಿದ ಕೋಟಿಗೊಬ್ಬ ಕಿಚ್ಚ: ನನಸಾಯ್ತು ಫೈಟ್ ಮಾಸ್ಟರ್​ಗಳ 38 ವರ್ಷಗಳ ಕನಸು !
ಕಿಚ್ಚ ಸುದೀಪ್​
  • Share this:
ಬಾದ್‌ಶಾ ಕಿಚ್ಚ ಸುದೀಪ್, ಕೇವಲ ಸಿನಿಮಾ ವಿಷಯದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ 'ಕೋಟಿಗೊಬ್ಬ' ಅಂದರೂ ತಪ್ಪಲ್ಲ. ಯಾಕಪ್ಪಾ ಹಿಂಗೆಲ್ಲ ಹೊಗಳುತ್ತಿದ್ದಾರೆ ಅನ್ಕೋಬೇಡಿ. ಅದಕ್ಕೊಂದು ಬಲವಾದ ಕಾರಣವಿದೆ.

ಕಷ್ಟ ಅಂತ ಬಂದಾಗ ಸಹಾಯಹಸ್ತ ಚಾಚುವ ಗುಣ ಕಿಚ್ಚನನ್ನು ವಿಶೇಷ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತೆ. ಅವರು ಯಾರೇ ಇರಬಹುದು, ತಮ್ಮ ಗಮನಕ್ಕೆ ಬಂದರೆ, ಕೈಲಾದ ಸಹಾಯ ಮಾಡದೇ ಇರೋದಿಲ್ಲ. ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ಕಿಚ್ಚ ಸುದೀಪ್ ಹೇಗೆ ನೆರವಿಗೆ ನಿಂತರು ಅನ್ನೋದು ಎಲ್ಲರಿಗೂ ಗೊತ್ತು.

Celebrities sent good wishes to Kichcha Sudeep for his Pailwaan movie
'ಪೈಲ್ವಾನ್​' ಸಿನಿಮಾದಲ್ಲಿ ಸುದೀಪ್​


'ಕರ್ನಾಟಕ ಸ್ಟಂಟ್​ ಯೂನಿಯನ್​' ರೂಪುಗೊಂಡು 38 ವರ್ಷಗಳೇ ಆಗಿವೆ. ಆದರೆ ಇದುವರೆಗೂ ಅವರದ್ದೇ ಅಂತ ಒಂದು ಸ್ವಂತ ಕಟ್ಟಡ ಇರಲಿಲ್ಲ. ಬಾಡಿಗೆ ಹಾಗೂ ಲೀಸ್ ಕಟ್ಟಡಗಳಲ್ಲಿಯೇ ಕಛೇರಿ ಮಾಡಿಕೊಂಡಿದ್ದರು. ಹೀಗಾಗಿ ತಮ್ಮದೇ ಸ್ಟಂಟ್ ಮಾಸ್ಟರ್ಸ್ ಮತ್ತು ಫೈಟರ್ಸ್ ಸಂಘಕ್ಕಾಗಿ ಒಂದು ಸ್ವಂತ ಕಟ್ಟಡ ನಿರ್ಮಿಸಿಕೊಳ್ಳುವ ಉದ್ದೇಶದಿಂದ ಹಣ ಕೂಡಿಟ್ಟು, ಕೆಲ ತಿಂಗಳ ಹಿಂದಷ್ಟೇ ನಿವೇಶನ ಖರೀದಿಸಿದ್ದರು. ಇತ್ತೀಚೆಗಷ್ಟೇ ಕಟ್ಟಡ ನಿರ್ಮಾಣ ಕೆಲಸವೂ ಪ್ರಾರಂಭವಾಗಿದೆ.

ಇದನ್ನೂ ಓದಿ: Happy Birthday Anushka Shetty: ಕನ್ನಡತಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್​..!

ಕಟ್ಟಡ ನಿರ್ಮಾಣಕ್ಕಾಗಿ 'ಕರ್ನಾಟಕ ಸ್ಟಂಟ್​ ಯೂನಿಯನ್​'ನವರು ಕಿಚ್ಚ ಸುದೀಪ್ ಅವರ ಗಮನಕ್ಕೆ ತಂದಿದ್ದರು. ತಕ್ಷಣ ಅವರ ಪರ ನಿಂತ ಬಾದ್‌ಶಾ 10 ಲಕ್ಷ ರೂಪಾಯಿ ಧನಸಹಾಯ ಮಾಡಿದ್ದಾರೆ. ಸುದೀಪ್​ ಅವರ ಸಹಾಯಕ್ಕೆ ಥ್ರಿಲ್ಲರ್ ಮಂಜು ಹಾಗೂ ರವಿವರ್ಮಾ ಟ್ವಿಟರ್‌ನಲ್ಲಿ ಸುದೀಪ್‌ರಿಗೆ ಧನ್ಯವಾದ ತಿಳಿಸಿದ್ದಾರೆ.





ಅವರಿಗೆ ಟ್ವೀಟ್ ಮೂಲಕ ಶುಭಕೋರಿರುವ ಕಿಚ್ಚ, ತೆರೆಯ ಮೇಲೆ ನನ್ನನ್ನು ಚೆನ್ನಾಗಿ ಕಾಣುವಂತೆ ಮಾಡುವ ಅದ್ಭುತ ಸ್ಟಂಟ್ ಮಾಸ್ಟರ್ಸ್ ಹಾಗೂ ಫೈಟರ್‌ಗಳಿಗೆ ಹೀಗೊಂದು ಪ್ರೀತಿಪೂರ್ವಕವಾಗಿ ಕೃತಜ್ಞತೆ ತಿಳಿಸಿದ್ದೇನಷ್ಟೇ. ನಾನು ನನ್ನದೇ ಆದ ಇತಿಮಿತಿಗಳಿರುವ ವ್ಯಕ್ತಿ. ಆದರೆ ನಿಮ್ಮಂತಹ ಅದ್ಭುತ ತಂತ್ರಜ್ಞರು ನನ್ನನ್ನು ಹೀರೋ ಮಾಡಿದ್ದೀರಿ ಧನ್ಯವಾದಗಳು ಎಂದಿದ್ದಾರೆ.

Just a token of love to show my gratitude, towards all that u amazing masters n fighters do, to make me look good on screen. Im a man with limitations n restrictions n u all wondeful technicians made a hero of me.



ಚಿತ್ರರಂಗ ಒಂದು ಕುಟುಂಬ ಎಲ್ಲರೂ ನಮ್ಮವರೇ ಅನ್ನೋ ಭಾವದೊಂದಿಗೆ ಕಿಚ್ಚ ಸುದೀಪ್ ಫೈಟರ್ಸ್ ಜೊತೆಗೆ ನಿಂತಿರೋದು ವಿಶೇಷ. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಸ್ಟಾರ್‌ಗಳನ್ನೂ ಸಂಪರ್ಕಿಸಲು ಅಸೋಸಿಯೇಷನ್‌ನವರು ಯೋಚಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ 'ಕರ್ನಾಟಕ ಸ್ಟಂಟ್​ ಯೂನಿಯನ್​' ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದ್ದು, 38 ವರ್ಷಗಳ ಅವರ ಕನಸೂ ನನಸಾಗಲಿದೆ.

 

ಅವಕಾಶಗಳ ಕೊರತೆಯಿಂದಾಗಿ ಬೋಲ್ಡ್​ ಫೋಟೋಶೂಟ್​ ಮೊರೆ ಹೋದ ಖ್ಯಾತ ಸ್ಯಾಂಡಲ್​ವುಡ್​ ನಟಿಯ ಮಗಳು..!




 
First published: November 7, 2019, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories