Kichcha Sudeep: ತಾಳ್ಮೆ ಕಳೆದುಕೊಳ್ಳದ ಕಿಚ್ಚ ಸುದೀಪ್ ಟಾಲಿವುಡ್​ ಡಾರ್ಲಿಂಗ್​ ಬಗ್ಗೆ ಹೀಗೆ ಟ್ವೀಟ್​ ಮಾಡಿದ್ದೇಕೆ​..!

Saaho: ಅವರ ಬಗ್ಗೆ ಯಾರೇ ಏನೇ ಮಾತನಾಡಿದರೂ ಕಿಚ್ಚ ತಾಳ್ಮೆ ಕಳೆದುಕೊಂಡು ಉತ್ತರಿಸುವುದಾಗಲಿ, ಸಾಮಾಜಿಕ ಜಾಲತಾಣದಲ್ಲಿ ಸಿಟ್ಟಿಗೆದ್ದು ಪ್ರತಿಕ್ರಿಯಿಸುವುದಾಗಲಿ ಮಾಡುವುದಿಲ್ಲ. ಇಂತಹ ನಟ ಇಂದು ಟಾಲಿವುಡ್​ ಡಾರ್ಲಿಂಗ್​ ಬಗ್ಗೆ ಟ್ವೀಟ್​ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.

Anitha E | news18-kannada
Updated:September 12, 2019, 4:34 PM IST
Kichcha Sudeep: ತಾಳ್ಮೆ ಕಳೆದುಕೊಳ್ಳದ ಕಿಚ್ಚ ಸುದೀಪ್ ಟಾಲಿವುಡ್​ ಡಾರ್ಲಿಂಗ್​ ಬಗ್ಗೆ ಹೀಗೆ ಟ್ವೀಟ್​ ಮಾಡಿದ್ದೇಕೆ​..!
ಪ್ರಭಾಸ್​ ಹಾಗೂ ಸುದೀಪ್
  • Share this:
ಕಿಚ್ಚ ಸುದೀಪ್​ ಪ್ಯಾನ್​ ಇಂಡಿಯಾ ಸ್ಟಾರ್​ ಅನ್ನೋದು ಗೊತ್ತೇ ಇದೆ. ಸುದೀಪ್​ ಅವರಿಗೆ ಬೇರೆ ಚಿತ್ರಂಗದ ಸ್ಟಾರ್​ಗಳು ಹಾಗೂ ನಿರ್ದೇಶಕರೊಂದಿಗೆ ಒಳ್ಳೆಯ ಸಂಬಂಧವೂ ಇದೆ. ಅದರಲ್ಲೂ ಯಾರೇ ಎಷ್ಟೇ ಕೆಣಕಿದರೂ ತಾಳ್ಮೆ ಇಂದಿರುವ ನಟ ಸುದೀಪ್​. ಇದಕ್ಕೆ ಸಾಕಷ್ಟು ಉದಾಹರಣೆ ಸಿಗುತ್ತದೆ.

ಅವರ ಬಗ್ಗೆ ಯಾರೇ ಏನೇ ಮಾತನಾಡಿದರೂ ಕಿಚ್ಚ ತಾಳ್ಮೆ ಕಳೆದುಕೊಂಡು ಉತ್ತರಿಸುವುದಾಗಲಿ, ಸಾಮಾಜಿಕ ಜಾಲತಾಣದಲ್ಲಿ ಸಿಟ್ಟಿಗೆದ್ದು ಪ್ರತಿಕ್ರಿಯಿಸುವುದಾಗಲಿ ಮಾಡುವುದಿಲ್ಲ. ಇಂತಹ ನಟ ಇಂದು ಟಾಲಿವುಡ್​ ಡಾರ್ಲಿಂಗ್​ ಬಗ್ಗೆ ಟ್ವೀಟ್​ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.

 


ಹೌದು, ಕಿಚ್ಚ ಸುದೀಪ್​ 'ಪೂಲ್ವಾನ್​' ಸಿನಿಮಾ ಪ್ರಚಾರದ ಅಂಗವಾಗಿ ಇತ್ತೀಚೆಗಷ್ಟೆ ಟ್ವಿಟರ್​ನಲ್ಲಿ ಲೈವ್​ ಬಂದಿದ್ದರು. ಆಗ ಸುದೀಪ್​ ಅವರನ್ನು ಯಾರಾದರು ಪ್ರಶ್ನೆ ಕೇಳಲು ಬಯಸಿದಲ್ಲಿ #AskPailwaan ಎಂದು ಬರೆದು ತಮ್ಮ ಪ್ರಶ್ನೆ ಬರೆಯಬೇಕಿತ್ತು.

ಇದನ್ನೂ ಓದಿ: Pailwaan: ಪೈಲ್ವಾನ್​ ನೋಡಿ ಟ್ವೀಟ್​ ಮಾಡಿದ ಕಿಚ್ಚ ಸುದೀಪ್: ಕಣ್ಣೀರಿಟ್ಟ ಪ್ರಿಯಾ-ಸಾನ್ವಿ..!

ಈ  #AskPailwaan  ಅಭಿಯಾನದಲ್ಲಿ ಅಭಿಮಾನಿಯೊಬ್ಬರು ನಟ ಪ್ರಭಾಸ್ ಬಗ್ಗೆ ಒಂದು ಪದ ಏನಾದರೂ ಹೇಳಿ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಕಿಚ್ಚ ಕೊಟ್ಟ ಉತ್ತರ ಸ್ಟೈಲಿಶ್​ ಎಂದು.ಹೌದು, ಪ್ರಭಾಸ್​ ಒಬ್ಬ ಸ್ಟೈಲಿಶ್​ ನಟ ಎಂದು ಸುದೀಪ್​ ಹೇಳಿದ್ದಾರೆ. ಇದರಿಂದ ಡಾರ್ಲಿಂಗ್​ ಪ್ರಭಾಸ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಬೇರೆ ಭಾಷೆಯ ನಾಯಕರನ್ನು ತುಂಬು ಮನಸ್ಸಿನಿಂದ ಹೊಗಳುವ ಕಿಚ್ಚನ ಗುಣ ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: 'ಪೈಲ್ವಾನ್'​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ: ಸುದೀಪ್​ ಎಂಟ್ರಿಗೆ ಪ್ರೇಕ್ಷಕರು ಫಿದಾ..!

ಇಂದು ಸುದೀಪ್​ ಅಭಿನಯದ 'ಪೈಲ್ವಾನ್​' ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಗುತ್ತಿದೆ. ಅದಕ್ಕೆ ಪ್ರಭಾಸ್​ ಹಾಗೂ ಎನ್​ಟಿಆರ್ ಅಭಿಮಾನಿಗಳೂ ಸಹ ಕಿಚ್ಚನಿಗೆ ಶುಭ ಕೋರಿದ್ದಾರೆ.

Radhika Apte: ರಾಧಿಕಾ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸಲು ಇದೇ ಕಾರಣವಂತೆ..!


 
First published: September 12, 2019, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading