Sudeep: ಕ್ಲೀನ್ ಶೇವ್ ಲುಕ್​ನಲ್ಲಿ ಕಿಚ್ಚ ಸುದೀಪ್; ಬಿಗ್​ ಬಾಸ್​ ವೇದಿಕೆ ಮೇಲೆ ಘರ್ಜಿಸಲು ಹೆಬ್ಬುಲಿ ರೆಡಿ

ಈ ವಾರ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಹೊಸ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ. ಕ್ಲೀನ್ ಶೇವ್ ಮಾಡಿರೋ ಕಿಚ್ಚ ಸುದೀಪ್, ಇನ್ನಷ್ಟು ಯಂಗ್ ಅಂಡ್​ ಹ್ಯಾಂಡ್ಸಮ್​ ಆಗಿ ಕಾಣುತ್ತಿದ್ದಾರೆ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ. ಬಿಗ್​ ಬಾಸ್​ ನಿರೂಪಣೆ ಜವಾಬ್ದಾರಿ ಹೊತ್ತಿರೋ ಕಿಚ್ಚ ಸುದೀಪ್​ ಅವರು ಸಹ ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ. ಶನಿವಾರ, ಭಾನುವಾರ ಬಂದ್ರೆ ಕಿಚ್ಚ ಸುದೀಪ್​ (Kichcha Sudeep) ನೋಡಲು ಜನರು ಕಾಯುತ್ತಿರುತ್ತಾರೆ. ವಾರದ ಪಂಚಾಯಿತಿಯಲ್ಲಿ ಸುದೀಪ್, ಯಾವ ಸ್ಪರ್ಧಿಗಳೇ ತಪ್ಪು ಮಾಡಿದ್ರೂ ಮುಖ-ಮೂತಿ ನೋಡ್ದೆ ಬೈಯ್ದು ಬುದ್ಧಿ ಹೇಳ್ತಾರೆ. ಅಷ್ಟೆ ಅಲ್ಲಾ  ಅವರು ತಮಾಷೆ ಮಾತುಗಳು ಸಹ ಜನರಿಗೆ ಸಖತ್ ಇಷ್ಟವಾಗುತ್ತದೆ. ಇನ್ನು ಅವರ ಅಭಿಮಾನಿಗಳು (Sudeep Fans) ಈ ವಾರ ಸುದೀಪ್​ ಯಾವ ಸ್ಟೈಲ್​ನಲ್ಲಿ (Style) ಬರ್ತಾರೆ ಎಂದು ನೋಡಲು ಕಾದು ಕುಳಿರ್ತಾರೆ.

ಹೊಸ ಲುಕ್ ನಲ್ಲಿ ಸುದೀಪ್​

ಈ ವಾರ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಹೊಸ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ. ಕ್ಲೀನ್ ಶೇವ್ ಮಾಡಿರೋ ಕಿಚ್ಚ ಸುದೀಪ್, ಇನ್ನಷ್ಟು ಯಂಗ್ ಅಂಡ್​ ಹ್ಯಾಂಡ್ಸಮ್​ ಆಗಿ ಕಾಣುತ್ತಿದ್ದಾರೆ. ಕ್ಲೀನ್ ಶೇವ್​ ಲುಕ್​ನಲ್ಲಿ ಸುದೀಪ್​ ವೇದಿಕೆ ಮೇಲಿರೋ ಫೋಟೋವನ್ನು ಕಲರ್ಸ್​ ಸೂಪರ್ ವಾಹಿನಿಯವರು ತಮ್ಮ ಫೇಸ್​ಬುಕ್ ಪೇಜ್​​ನಲ್ಲಿ ಹಾಕಿದ್ದಾರೆ.

kichcha sudeep clean shave look in bigg boss ott weekend season pvn
ಕಿಚ್ಚ ಸುದೀಪ್


ಹೊಸ ಲುಕ್​​ಗೆ ಫ್ಯಾನ್ಸ್ ಮೆಚ್ಚುಗೆ

ಸುದೀಪ್​ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಕ್ಲೀನ್ ಶೇವ್ ಮಾಡಿಸಿಕೊಂಡಿರೋ ಸುದೀಪ್ ಮತ್ತಷ್ಟು ಯಂಗ್​​ ಆಗಿ ಕಾಣ್ತಿರೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೂಪರ್​ ಲುಕ್​, ಅಣ್ಣನ ಲುಕ್ ಸಖತ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊಸ ಚಿತ್ರಕ್ಕೆ ಕಿಚ್ಚನ ಹೊಸ ಗೆಟಪ್

ಸುದೀಪ್​ಗೆ ಇಷ್ಟು ದಿನ ಗಡ್ಡ ಇತ್ತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಅವರಿಗೆ ಅದೇ ರೀತಿಯ ಲುಕ್ ಇತ್ತು. ಅದನ್ನೇ ಸುದೀಪ್ ಮುಂದುವರಿಸಿದ್ದರು. ಈಗ ಅವರು ಏಕಾಏಕಿ ಕ್ಲೀನ್​ ಶೇವ್ ಮಾಡಿಸಿದ್ದಾರೆ. ಕಿಚ್ಚನ ಹೊಸ ಗೆಟಪ್ ಫ್ಯಾನ್ಸ್​ಗೆ ಸಖತ್ ಖುಷಿ ನೀಡಿದೆ.

ಇದನ್ನೂ ಓದಿ: Bigg Boss OTT: ಆರ್ಯವರ್ಧನ್ ಲೆಕ್ಕಗಳೆಲ್ಲಾ ಉಲ್ಟಾಪಲ್ಟ; ಗುರೂಜಿ ಬಿಡೋದೆಲ್ಲ ಬರೀ ಬೊಗಳೆ!

ಸುದೀಪ್ ಅವರು ಇಷ್ಟು ದಿನ ‘ವಿಕ್ರಾಂತ್ ರೋಣ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದರು. ಹಲವು ನಗರಗಳಿಗೆ ತೆರಳಿ ಸಿನಿಮಾ ಪ್ರಚಾರ ಮಾಡಿದ್ದರು. ಈ ಕಾರಣಕ್ಕೆ ಅವರು ‘ಕಬ್ಜ’ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಲು ಸಾಧ್ಯವಾಗಿರಲಿಲ್ಲ. ಈಗ ‘ವಿಕ್ರಾಂತ್ ರೋಣ’ ತೆರೆಕಂಡು ಯಶಸ್ಸು ಗಳಿಸಿದೆ. ಈ ಕಾರಣದಿಂದ ಅವರು ‘ಕಬ್ಜ’ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಸುದೀಪ್ ಕ್ಲೀನ್ ಶೇವ್ ಅವತಾರ ತಾಳಿದ್ದಾರೆ ಎನ್ನಲಾಗುತ್ತಿದೆ. ಉಪೇಂದ್ರ ನಟನೆಯ ಈ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಕಾರಣದಿಂದಲೂ ಸಿನಿಮಾ ಕುತೂಹಲ ಹುಟ್ಟಿಸಿದೆ.

ಶುರುವಾಗಿದೆ ಕ್ಯಾಪ್ಟನ್ ಪಟ್ಟಕ್ಕಾಗಿ ಸರ್ಕಸ್

ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ಬರುವ ವಾರದ ಸಮಯ ಇದು. ಬಿಗ್ ಬಾಸ್ ಮನೆಯೊಳಗೆ ನಾಯಕನ ಜವಾಬ್ದಾರಿಗಾಗಿ ಪ್ರತಿಬಾರಿ ಸ್ಪರ್ಧಿಗಳು ಸಾಕಷ್ಟು ಪ್ರಯತ್ನ ಮಾಡುವುದನ್ನು ಕಾಣಬಹುದು. ಜಸ್ವಂತ್ ಬೋಪಣ್ಣ (Jashwanth Bopanna) ಬಿಗ್ ಬಾಸ್ ಕನ್ನಡ OTT ನ ಹೊಸ ನಾಯಕನಾಗಲಿದ್ದಾರೆ.

ಇದನ್ನೂ ಓದಿ: Bigg Boss OTT: ಇವ್ರೆಲ್ಲ ಇನ್ನೂ ಬಿಗ್​ಬಾಸ್​ ಮನೆಯಲ್ಲಿ ಅಸಲಿ ಮುಖ ತೋರಿಸಿಲ್ವಂತೆ! ಕಿರಣ್​ ಕಥೆ, ನ್ಯೂಸ್​ 18 ಜೊತೆ

ನಾಯಕತ್ವದ ಟಾಸ್ಕ್​ಗಳೇ ಈ ಬಾರಿಯ ಹೈಲೈಟ್

ನಾಯಕತ್ವಕ್ಕಾಗಿ ನೀಡಲಾದ ಟಾಸ್ಕ್ ಅನ್ನು ಜಸ್ವಂತ್ ಹೇಗೆ ನಿಭಾಯಿಸಿದ್ದಾರೆ, ಅದರಲ್ಲಿ ಹೇಗೆ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಿಗ್ ಬಾಸ್ ಕನ್ನಡ OTT ಯ ಮುಂದಿನ ಸಂಚಿಕೆ ನಾಯಕತ್ವದ ಯುದ್ಧವನ್ನು ತೋರಿಸಲಿದ್ದು ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.
Published by:Pavana HS
First published: