Kichcha Sudeep: ಬಳೆ ಕುರಿತ ವಿವಾದಗಳಿಗೆ ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್

Sudeep Tweet: ಬಳೆ ಬಗ್ಗೆ ಟ್ವೀಟ್ ಮಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದ ಕಿಚ್ಚ ಸುದೀಪ್ ತಮ್ಮ ಟ್ವೀಟ್ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಸುದೀಪ್ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ್ದಾರೆಂಬ ವಿವಾದಗಳಿಗೆ ತೆರೆ ಎಳೆದಿದ್ದಾರೆ.

Sushma Chakre | news18-kannada
Updated:September 23, 2019, 10:12 AM IST
Kichcha Sudeep: ಬಳೆ ಕುರಿತ ವಿವಾದಗಳಿಗೆ ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್
ಕಿಚ್ಚ ಸುದೀಪ್
Sushma Chakre | news18-kannada
Updated: September 23, 2019, 10:12 AM IST
ಸೆಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಪೈಲ್ವಾನ್​ ಸಿನಿಮಾ ಪೈರಸಿ ಕುರಿತು ಚಿತ್ರತಂಡದ ಪರವಾಗಿ ಬ್ಯಾಟ್​ ಬೀಸಿದ್ದ ನಟ ಸುದೀಪ್ ಪೈರಸಿ ಕಾಪಿಗಳು ಎಲ್ಲಾದರೂ ಕಂಡುಬಂದರೆ ಆ ಬಗ್ಗೆ ಚಿತ್ರತಂಡಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಪೈಲ್ವಾನ್​ ಸಿನಿಮಾ ಸಾವಿರಾರು ಜನರ ಮೊಬೈಲ್​ಗಳಲ್ಲಿ ಹರಿದಾಡತೊಡಗಿದ್ದರಿಂದ ಆಕ್ರೋಶಗೊಂಡ ಸುದೀಪ್ ಅಭಿಮಾನಿಗಳು ಇದಕ್ಕೆಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೇ ಕಾರಣ ಎಂದು ಆರೋಪಿಸಿದ್ದರು. ಈ ಕಾರಣಕ್ಕೆ ದರ್ಶನ್​- ಸುದೀಪ್ ಅಭಿಮಾನಿಗಳ ನಡುವೆ ಸ್ಟಾರ್​ ವಾರ್ ನಡೆದಿತ್ತು.

ದರ್ಶನ್​ ಅಭಿಮಾನಿಗಳಿಗೆ ತಿರುಗೇಟು ನೀಡುವ ಭರದಲ್ಲಿ ಟ್ವೀಟ್ ಮಾಡಿದ್ದ ಕಿಚ್ಚ ಸುದೀಪ್, 'ನಾನು ಮತ್ತು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗವೇ ಹೊರತು ಬಳೆಯಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಮೌನ, ತಾಳ್ಮೆಯನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್​ ತಂಡದ ಶ್ರಮವನ್ನು ಹಾಳು ಮಾಡಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳು ಮಾತ್ರ' ಎಂದು ಟ್ವೀಟ್ ಮಾಡಿದ್ದರು.


Loading...

ಬಳೆ ಬಗ್ಗೆ ಮಾತನಾಡಿ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ವಿರುದ್ಧ ಮಹಿಳೆಯರನ್ನೊಳಗೊಂಡು ಸಾಕಷ್ಟು ಜನರಿಂದ ವಿರೋಧ ವ್ಯಕ್ತವಾಗಿತ್ತು. ಅನೇಕರು ಸುದೀಪ್​ ಅವರನ್ನು ಟ್ರೋಲ್ ಕೂಡ ಮಾಡಿದ್ದರು. ಆದರೆ, ಅದಕ್ಕೆಲ್ಲ ಕಿಚ್ಚ ಸುದೀಪ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Sudeep Tweet: ಸುದೀಪ್​ಗೆ ಮುಳುವಾಯಿತು ಕಡಗ, ಬಳೆ ಟ್ವೀಟ್!; ಕಿಚ್ಚನ ಹೇಳಿಕೆಗೆ ಸಿಡಿದೆದ್ದ ಮಹಿಳೆಯರು

ನನ್ನ ಬಗ್ಗೆ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ. ನಾನು ನನ್ನ ಮನಸಿನಲ್ಲಿ ಇರುವುದನ್ನು ಹೇಳಿದ್ದೇನೆ ಅಷ್ಟೇ. ಕೆಲವು ದಿನಗಳ ಹಿಂದೆ ಯಾರೋ ಟ್ವೀಟ್ ಮಾಡಿ ನಿಮ್ಮ ಸ್ನೇಹಿತರಿಗೆ ಬಳೆ ಹಾಕಿಕೊಂಡು ಕುಳಿತುಕೊಳ್ಳಲು ಹೇಳಿ ಎಂದು ಹೇಳಿದ್ದರು. ಯಾರೋ ಕೆಲವರು ನನಗೆ ಅಳುಮುಂಜಿ ಎಂದು ಪತ್ರ ಹಾಕಿದ್ದರು. ಅಂಥವರಿಗೆಲ್ಲ ನಾನು ಉತ್ತರ ಕೊಟ್ಟಿದ್ದೇನಷ್ಟೆ. ಅದಕ್ಕಾಗಿ ನಾನು, ನಾವು ಹಾಕಿರುವುದು ಬಳೆಯಲ್ಲ ಕಡಗ ಎಂದು ಟ್ವೀಟ್ ಮಾಡಿದ್ದೆ. ನನಗೆ ಬಳೆಯ ಮೇಲೆ ತುಂಬಾ ಗೌರವವಿದೆ. ನನ್ನ ತಾಯಿ, ಹೆಂಡತಿ ಎಲ್ಲರೂ ಹಾಕುವುದು ಬಳೆಯನ್ನೇ. ಅದಕ್ಕೇಕೆ ನಾನು ಅವಮಾನ ಮಾಡಲಿ? ಮಹಿಳೆಯರ ಬಗ್ಗೆ ನನಗೆ ತುಂಬ ಗೌರವವಿದೆ. ಅದನ್ನು ನಾನು ಪ್ರದರ್ಶಿಸಿಕೊಳ್ಳಬೇಕಾಗಿಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.



ಟ್ವಿಟ್ಟರ್​ ಇರುವುದೇ ನನಗೆ ಅನಿಸಿದ್ದನ್ನು ಹೇಳಿಕೊಳ್ಳೋಕೆ. ನಾನು ಆ ವೇದಿಕೆಯನ್ನು ಎಂದಿಗೂ ದುರುಪಯೋಗಪಡಿಸಿಕೊಂಡಿಲ್ಲ. ನಾನು ಯಾರ ತಂಟೆಗೂ ಹೋಗೋದಿಲ್ಲ. ನನ್ನ ಸಿನಿಮಾ ಬಗ್ಗೆ ನಾನು ಧ್ವನಿ ಎತ್ತದಿದ್ದರೆ ಬೇರೆ ಯಾರು ಮಾತನಾಡುತ್ತಾರೆ? ನಾನು ನನ್ನ ನಿರ್ಮಾಪಕರ ಪರವಾಗಿ ನಿಂತಿದ್ದೇನೆ. ಅದರಲ್ಲಿ ನನಗೆ ಯಾವುದೇ ತಪ್ಪು ಕಾಣಿಸುತ್ತಿಲ್ಲ. ನಾನು ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿಲ್ಲ. ನಮ್ಮ ಸಿನಿಮಾ ತಂಡದ ಪರವಾಗಿ ಟ್ವೀಟ್ ಮಾಡಿದ್ದೇನೆ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಸುದೀಪ್ ಅವರ ಸಂದರ್ಶನದ ವಿಡಿಯೋವನ್ನು ಅವರ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆ ಟ್ವೀಟ್​ ಅನ್ನು ರೀಟ್ವೀಟ್ ಮಾಡಿರುವ ಸುದೀಪ್, 'ಬಳೆ ಕುರಿತಾದ ನನ್ನ ಟ್ವೀಟ್​ ಅನ್ನು ಮಹಾಪರಾಧ ಎಂದು ಬಿಂಬಿಸಿರುವ ಎಲ್ಲ ಮಹಿಳೆಯರೂ ಈ ವಿಡಿಯೋವನ್ನೊಮ್ಮೆ ನೋಡಿ. ಮಹಿಳಾ ವಿರೋಧಿ ಹೇಳಿಕೆ ನೀಡುವವರ ಕೆಟಗರಿಗೆ ನಾನು ಸೇರುವವನಲ್ಲ. ನನಗೆ ಮಹಿಳೆಯರ ಬಗ್ಗೆ ಬಹಳ ಗೌರವವಿದೆ' ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...