ಕಿಚ್ಚ ಸುದೀಪ್ (Kichcha Sudeep) ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಂದರ ಹಿಂದೆ ಒಂದರಂತೆ ಎಲ್ಲವೂ ರಿಲೀಸ್ಗೆ ಸಿದ್ಧವಾಗುತ್ತಿವೆ. ಅದರಲ್ಲೂ ಅವರ ಬಹುನಿರೀಕ್ಷಿತ ಸಿನಿಮಾಗಳೆಂದರೆ ಫ್ಯಾಂಟಮ್ ಹಾಗೂ ಕೋಟಿಗೊಬ್ಬ 3(Kotigobba 3). ಲಾಕ್ಡೌನ್ನಿಂದಾಗಿ ಈ ಎರಡೂ ಚಿತ್ರಗಳ ಚಿತ್ರೀರಕಣ ನಿಂತಿತ್ತು. ಒಮ್ಮೆ ಹೈದರಾಬಾದಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸುದೀಪ್ ತಮ್ಮ ಫ್ಯಾಂಟಮ್ (Phantom) ಚಿತ್ರತಂಡದೊಂದಿಗೆ ಹೈದರಾಬಾದಿಗೆ ಹಾರಿದ್ದರು. ಜೊತೆಗೆ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಸ್ಯಾಂಡಲ್ವುಡ್ ತಂತ್ರಜ್ಙರು, ಲೈಟ್ಬಾಯ್, ಸ್ಪಾಟ್ಬಾಯ್ ಹೀಗೆ ಚಿತ್ರೀಕರಣಕ್ಕೆ ಅಗತ್ಯ ಸಿಬ್ಬಂದಿಗಳನ್ನೂ ಇಲ್ಲಿಂದಲೇ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆರವಾಗಿದ್ದರು. ನಂತರ ಚಿತ್ರದ ಚಿತ್ರೀಕರಣ ಕುರಿತಂತೆ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ ಅಪ್ಡೇಟ್ ಕೊಡುತ್ತಿದ್ದರು. ಈಗ ಈ ಸಿನಿಮಾ ಕುರಿತಾಗಿ ಎರಡು ದೊಡ್ಡ ಅಪ್ಡೇಟ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್.
ಒಂದೊಂದೇ ಚಿತ್ರತಂಡಗಳು ತಮ್ಮ ತಮ್ಮ ಸಿನಿಮಾಗಳ ಬಗ್ಗೆ ದೊಡ್ಡ ಬ್ರೇಕಿಂಗ್ ಕೊಡುತ್ತಿರುವಾಗವೇ ಕಿಚ್ಚ ಸುದೀಪ್ ಸಹ ತಮ್ಮ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್ ಕುರಿತಾಗಿ ದೊಡ್ಡ ಅಪ್ಡೇಟ್ ಕೊಡಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದರಂತೆ ಎರಡು ದೊಡ್ಡ ಅಪ್ಡೇಟ್ ಕೊಟ್ಟಿದ್ದಾರೆ.
ಹೌದು, ಈ ಹಿಂದೆಯೇ ಹೇಳಲಾಗುತ್ತಿದ್ದಂತೆಯೇ ಈಗ ಫ್ಯಾಂಟಮ್ ಸಿನಿಮಾದ ಟೈಟಲ್ ಬದಲಿಸಲಾಗಿದೆ. ವಿಕ್ರಾಂತ್ ರೋಣ ಎಂದು ಸಿನಿಮಾಗೆ ಮರು ನಾಮಕರಣ ಮಾಡಿದ್ದು, ಅದರ ಟೈಟಲ್ ಲೊಗೋವನ್ನು ಇದೇ ತಿಂಗಳ 31ಕ್ಕೆ ದುಬೈನ ಬುರ್ಜ್ ಖಲೀಫ ಕಟ್ಟದ ಮೇಲೆ ಅನಾವರಣಗೊಳಿಸಲಾಗುವುದು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಬುರ್ಜ್ ಖಲೀಫ ದುಬೈನಲ್ಲಿರುವ ಎತ್ತಿ ಎತ್ತರದ ಕಟ್ಟಡ. ಇದರ ಮೇಲೆ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಟೈಟಲ್ ಲೊಗೋ ಅನಾವರಣಗೊಳ್ಳಲಿದೆ. ಈ ಕಾರ್ಯಕ್ರಮ ಜ.31ಕ್ಕೆ ಕಿಚ್ಚ ಕ್ರಿಯೇಷನ್ಸ್ನ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರಗೊಳ್ಳಲಿದೆ.
ದುಬೈನ ಬುರ್ಜ್ ಖಲೀಫ ಕಟ್ಟಡದ ಮೇಲೆ ಶಾರುಖ್ ಖಾನ್ ಹಾಗೂ ರಜಿನಿಕಾಂತ್ ಅವರ ಪೋಸ್ಟರ್ ಹಾಗೂ ವಿಡಿಯೋಗಳು ಪ್ರದರ್ಶನಗೊಂಡಿವೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದ ನಟರೊಬ್ಬರ ಸಿನಿಮಾದ ಲೈಟಲ್ ಲೊಗೋ ಪ್ರದರ್ಶನಗೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ