Kichcha Sudeep: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್

ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸುದೀಪ್

ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸುದೀಪ್

ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಕಾಲು ಇಲ್ಲದ ಇಬ್ಬರಿಗೆ ಕೃತಕ ಕಾಲು ಜೋಡಿಸೋ ಮೂಲಕ ಇಬ್ಬರ ಬಾಳಲ್ಲಿ ಕಿಚ್ಚ ಸುದೀಪ್​​ ಬೆಳಕಾಗಿದ್ದಾರೆ. ಕಿಚ್ಚ ಸುದೀಪ್​​ ಚಾರಿಟಬಲ್ ಟ್ರಸ್ಟ್ ಮೂಲಕ ಈಗಾಗಲೇ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ.

  • Share this:

ಸ್ಯಾಂಡಲ್​ವುಡ್​ ಬಾದ್​ಷಾ (Sandalwood Badshah) ಅಂದರೆ ಯಾರಿಗೆ ಇಷ್ಟ ಇಲ್ಲ. ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ (Kiccha Sudeep)​ ಅಂದರೆ ನೂರು ರೂಪಾಯಿ ನೋಟು ನೋಡಿದ ಹಾಗೇ ಇರುತ್ತೆ. ಯಾಕೆ ಗೊತ್ತಾ? 100 ರೂಪಾಯಿ ನೋಟಿನಲ್ಲಿ ಎಲ್ಲಾ ಭಾಷೆ ಇರುವ ಹಾಗೆ, ಕಿಚ್ಚನ ನೋಡಿದರೆ ಪರಿಪೂರ್ಣ ನಟ ಎಂದರೆ ಅತಿಶೋಕ್ತಿಯಲ್ಲ. ಹೀರೋ (Hero) , ವಿಲನ್ (Villain) ​, ಸಪೋರ್ಟಿಂಗ್​ ಕ್ಯಾರಕ್ಟರ್​, ಗೆಸ್ಟ್​ ಕ್ಯಾರೆಕ್ಟರ್​ ಹೀಗೆ ಕಿಚ್ಚ ಮಾಡದೇ ಇರುವ ಪಾತ್ರವೇ ಇಲ್ಲ ಅನ್ನಬಹುದು. ಇಂಥಹ ನಟನಿಗೆ ಇಂದು ಜನ್ಮದಿನ (Kiccha Sudeep Birthday) ದ ಸಂಭ್ರಮ. ಸುದೀಪ್ ಅವರ ಇಂಡಸ್ಟ್ರಿ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತಡೇಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಗುಣದಲ್ಲಿ ಮಾಣಿಕ್ಯ, ಅಭಿನಯದಲ್ಲಿ ಚಕ್ರವರ್ತಿ, ಅಭಿಮಾನಿಗಳ ಬಾದ್​ಷಾ, ಕಿಚ್ಚ ಸುದೀಪ್ ಅವರು ಇಂದು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ. 


ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ


ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಕಾಲು ಇಲ್ಲದ ಇಬ್ಬರಿಗೆ ಕೃತಕ ಕಾಲು ಜೋಡಿಸೋ ಮೂಲಕ ಇಬ್ಬರ ಬಾಳಲ್ಲಿ ಕಿಚ್ಚ ಸುದೀಪ್​ ಬೆಳಕಾಗಿದ್ದಾರೆ. ಕಿಚ್ಚ ಚಾರಿಟಬಲ್ ಟ್ರಸ್ಟ್ ಮೂಲಕ ಈಗಾಗಲೇ ಸಾಕಷ್ಟು ಸಮಾಜ ಸೇವೆ ಮಾಡಿರೋ ಸುದೀಪ್​, ಇದೀಗ ಪುಟ್ಟ ಬಾಲಕ ಹಾಗೂ ಯುವಕನೋರ್ವನಿಗೆ ಕೃತಕ ಕಾಲು ಜೋಡಿಸಲು ನೆರವಾಗಿದ್ದಾರೆ.




ಅಭಿಮಾನಿಗಳ ಜೊತೆ ಸುದೀಪ್​ ಹುಟ್ಟುಹಬ್ಬ ಆಚರಣೆ


ಕುಟುಂಬ ಸಮೇತ ಅಭಿಮಾನಿಗಳ ಭೇಟಿ ಮಾಡಿದ ಕಿಚ್ಚ ಸುದೀಪ್, ಅಭಿಮಾನಿಗಳ ಜೊತೆ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ. ಕೊರೊನಾ ಹಿನ್ನೆಲೆ ಸುದೀಪ್​ ಅವರು 2 ವರ್ಷ ಹುಟ್ಟಹಬ್ಬ ಆಚರಿಸಿಕೊಂಡಿಲ್ಲ. ಹೀಗಾಗಿ ಈ ವರ್ಷ ಸುದೀಪ್​​ ಅಭಿಮಾನಿಗಳು ನೆಚ್ಚಿನ ನಟನ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.


ಪತ್ನಿಹಾಗೂ ಮಗಳ ಜೊತೆ ಬಂದ ಸುದೀಪ್​​


ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿಯ ಜೊತೆ ಬಂದ ಸುದೀಪ್​ ಅಭಿಮಾನಿಗಳ ಪ್ರೀತಿಯ ಶುಭಾಶಗಳನ್ನು ಸ್ವೀಕರಿದ್ದಾರೆ. ಅಭಿಮಾನಿಗಳು ತಂದಿದ್ದ ಕೇಟ್​ ಮಾಡಿದ ಸುದೀಪ್​ ಅವರಿಗೆ ಪತ್ನಿ ಪ್ರಿಯಾ ಅವರು ಸಿಹಿ ತಿನ್ನಿಸಿ ಶುಭಕೋರಿದ್ರು. ಬಳಿಕ ಸುದೀಪ್​ ಅವರು ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.




ಜಪಾನ್​ನಲ್ಲೂ ಕಿಚ್ಚನ ಅಭಿಮಾನಿಗಳು


ನಿಪ್ರಿಯರ ನಿರೀಕ್ಷೆಯಂತೆ ಸೆ. 2ರಂದು ವಿಕ್ರಾಂತ್ ರೋಣ   ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಪುರಿ ಬೀಚ್​ನಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ಮಾಡಿದ್ದು ಈ ಫೊಟೋಗಳು ಕೂಡಾ ವೈರಲ್ ಆಗಿವೆ. ಈಗ ನಟನ ಅಭಿಮಾನಿಗಳು ಜಪಾನ್​ನಲ್ಲಿಯೂ ಅವರ ಬರ್ತ್​ಡೇ  ಆಚರಿಸುತ್ತಿರುವ ವಿಡಿಯೋ ಟ್ವಿಟರ್​ನಲ್ಲಿ ವೈರಲ್ ಆಗಿದೆ. ಕಿಚ್ಚ ಅವರ ಅಭಿಮಾನಿಗಳನ್ನು ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿದ್ದಾರೆ.


ಪ್ಯಾನ್ ಇಂಡಿಯಾ ಸ್ಟಾರ್​​ ಕಿಚ್ಚ ಸುದೀಪ್​!

top videos


    ಸಿನಿ ಜರ್ನಿಯಲ್ಲಿ ಸಾಕಷ್ಟು ಸೋಲು, ಗೆಲುವು ಎಲ್ಲಾವನ್ನು ಕಂಡಿರುವ ಕಿಚ್ಚ ಗೆದ್ದಾಗ ಹಿಗ್ಗಲಿಲ್ಲ, ಬಿದ್ದಾಗ ಕುಗ್ಗಲಿಲ್ಲ. ಅದಕ್ಕೆ ಸಾಕ್ಷಿ ಎಂಬತೆ ‘ಹುಚ್ಚ’ ಚಿತ್ರದ ನಂತರ ಸುದೀಪ್ ಅವರ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ್ದವು, ಇದಕ್ಕೆ ಜಗ್ಗದ ಕಿಚ್ಚ ನಟನೆಯಿಂದ ನಿರ್ದೇಶಕ, ನಿರ್ಮಾಪಕನಾಗಿ ‘ಮೈ ಆಟೋ ಗ್ರಾಫ್’ ಚಿತ್ರ ಮಾಡಿ ಮತ್ತೆ ಗೆಲುವಿನ ಕುದುರೆ ಏರಿ ಚಿತ್ರರಂಗದಲ್ಲಿ ಸವಾರಿ ಮುಂದುವರೆಸಿದರು. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಚ್ಚ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಅಗಿ ದರ್ಬಾರ್ ನಡೆಸುತ್ತಿದ್ದಾರೆ.

    First published: