Kichcha Sudeep Birthday: ಜಪಾನ್​​ನಲ್ಲಿಯೂ ಕಿಚ್ಚ ಕ್ರೇಜ್! ಹೂವಿನ ಸುರಿಮಳೆ

Kichcha Sudeep: ಜಪಾನ್​ನಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳು ನಟನ ಹುಟ್ಟಿದ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳು ನಟನ ಬರ್ತ್​ಡೇ (Birthday) ಆಚರಣೆಯ ಸಂಭ್ರಮದಲ್ಲಿದ್ದಾರೆ. ಕರುನಾಡಿನಲ್ಲಿ ನಟನ (Actor) ಜನ್ಮದಿನದ (Birthday) ಸಂಭ್ರಮದ ಮಧ್ಯೆ ಅವರ ಅಭಿಮಾನಿಗಳು ವಿಭಿನ್ನವಾಗಿ ತಮ್ಮ ನೆಚ್ಚಿನ ನಟನ ಹುಟ್ಟಿದ ದಿನ ಆಚರಣೆಗೆ ಪ್ಲಾನ್ (Plan) ಮಾಡಿದ್ದಾರೆ. ದೇಶಾದ್ಯಂತ ನಟನಿಗೆ ಅಸಂಖ್ಯಾತ ಅಭಿಮಾನಿಗಳಿದ್ದು (Fans) ಎಲ್ಲರೂ ಈ ದಿನ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಸಿನಿಪ್ರಿಯರ ನಿರೀಕ್ಷೆಯಂತೆ ಸೆ. 2ರಂದು ವಿಕ್ರಾಂತ್ ರೋಣ  (Vikrant Rona) ಒಟಿಟಿಯಲ್ಲಿ (OTT) ರಿಲೀಸ್ ಆಗುತ್ತಿದೆ. ಪುರಿ ಬೀಚ್​ನಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು (Sand art) ಮಾಡಿದ್ದು ಈ ಫೊಟೋಗಳು ಕೂಡಾ ವೈರಲ್ ಆಗಿವೆ. ಈಗ ನಟನ ಅಭಿಮಾನಿಗಳು ಜಪಾನ್​ನಲ್ಲಿಯೂ (Japan) ಅವರ ಬರ್ತ್​ಡೇ (Birthday) ಆಚರಿಸುತ್ತಿರುವ ವಿಡಿಯೋ ಟ್ವಿಟರ್​ನಲ್ಲಿ (Twitter) ವೈರಲ್ ಆಗಿದೆ. ಕಿಚ್ಚ ಅವರ ಅಭಿಮಾನಿಗಳನ್ನು (Fans) ವಿಡಿಯೋವನ್ನು (Video) ಟ್ವಿಟರ್​​ನಲ್ಲಿ ಶೇರ್ ಮಾಡಿದ್ದಾರೆ.

ದಿ ಗ್ರೇಟ್ ಸುದೀಪಿಯನ್ಸ್ ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ. ಸುದೀಪ್ ಅಭಿಮಾನಿಗಳು ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡಿದ್ದು ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.





ಮೂರು ಸಾವಿರಕ್ಕೂ ಹೆಚ್ಚು ವ್ಯೂಸ್

ಈ ಸೆಲೆಬ್ರೇಷನ್ ವಿಡಿಯೋಗೆ 3 ಸಾವಿರಕ್ಕೂ ಹೆಚ್ಚು ವ್ಯೂಸ್ ಲಭಿಸಿದೆ. 574 ಮಂದಿ ವಿಡಿಯೋವನ್ನು ರೀಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಅಂತೂ ಕಿಚ್ಚ ಸುದೀಪ್​ಗೆ ವಿದೇಶದಲ್ಲಿರೋ ಫ್ಯಾನ್ ಕ್ರೇಜ್ ಎಂಥದ್ದು ಎನ್ನುವುದನ್ನು ಈ ವಿಡಿಯೋ ಪ್ರೂವ್ ಮಾಡಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ನಟನಿಗೆ ಮರಳು ಶಿಲ್ಪ ಗೌರವ

ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ: Kiccha Sudeep Birthday: ಇಂದು 49ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್​, ಐರನ್​ ಲೆಗ್​ ಟು ಗೋಲ್ಡನ್​ ಮ್ಯಾನ್​!

ಪ್ಯಾನ್ ಇಂಡಿಯಾ ಸ್ಟಾರ್​​ ಕಿಚ್ಚ ಸುದೀಪ್​!

ಸಿನಿ ಜರ್ನಿಯಲ್ಲಿ ಸಾಕಷ್ಟು ಸೋಲು, ಗೆಲುವು ಎಲ್ಲಾವನ್ನು ಕಂಡಿರುವ ಕಿಚ್ಚ ಗೆದ್ದಾಗ ಹಿಗ್ಗಲಿಲ್ಲ, ಬಿದ್ದಾಗ ಕುಗ್ಗಲಿಲ್ಲ. ಅದಕ್ಕೆ ಸಾಕ್ಷಿ ಎಂಬತೆ ‘ಹುಚ್ಚ’ ಚಿತ್ರದ ನಂತರ ಸುದೀಪ್ ಅವರ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ್ದವು, ಇದಕ್ಕೆ ಜಗ್ಗದ ಕಿಚ್ಚ ನಟನೆಯಿಂದ ನಿರ್ದೇಶಕ, ನಿರ್ಮಾಪಕನಾಗಿ ‘ಮೈ ಆಟೋ ಗ್ರಾಫ್’ ಚಿತ್ರ ಮಾಡಿ ಮತ್ತೆ ಗೆಲುವಿನ ಕುದುರೆ ಏರಿ ಚಿತ್ರರಂಗದಲ್ಲಿ ಸವಾರಿ ಮುಂದುವರೆಸಿದರು. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಚ್ಚ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಅಗಿ ದರ್ಬಾರ್ ನಡೆಸುತ್ತಿದ್ದಾರೆ.
Published by:Divya D
First published: