HOME » NEWS » Entertainment » KICHCHA SUDEEP BIGG BOSS 8 PRASHANTH SAMBARGI IS ON HUNGER STRIKE HERE IS THE REASON AE

Prashanth Sambargi: ಬಿಗ್​ ಬಾಸ್​ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಪ್ರಶಾಂತ್​ ಸಂಬರಗಿ: ಕಾರಣ ಇವರೇ ಅಂತೆ..!

Bigg Boss 8 Kannada: ಪ್ರತಿ ಬಾರಿ ತನಗೆ ಅನ್ಯಾಯವಾಗುತ್ತಿದೆ ಅಥವಾ ಯಾರಾದರೂ ತನ್ನನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದೆನಿಸಿದ ಕೂಡಲೇ ಪ್ರಶಾಂತ್​ ಸಂಬರಗಿ ಅಲ್ಲೇ ಏರು ದನಿಯಲ್ಲಿ ಮಾತನಾಡಿ ಮನಸ್ಸಿಗೆ ಅನಿಸಿದ್ದನ್ನು ಹೇಳಿ ಬಿಡುತ್ತಿದ್ದರು. ಆದರೆ ಈಗ ಪ್ರಶಾಂತ್​ ಸಂಬರಗಿ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿದೆ.

Anitha E | news18-kannada
Updated:April 30, 2021, 3:39 PM IST
Prashanth Sambargi: ಬಿಗ್​ ಬಾಸ್​ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಪ್ರಶಾಂತ್​ ಸಂಬರಗಿ: ಕಾರಣ ಇವರೇ ಅಂತೆ..!
ಪ್ರಶಾಂತ್​ ಸಂಬರಗಿ
  • Share this:
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 8ಲ್ಲಿ ನೀಡಲಾಗುತ್ತಿರುವ  ಹೊಸ ಟಾಸ್ಕ್​  ನೋಡಲು ಪ್ರೇಕ್ಷಕರು ಕಾದು ಕುಳಿತಿರುತ್ತಾರೆ. ಪ್ರತಿ ಟಾಸ್ಕ್​ ಮಾಡುವಾಗಲೂ ಸ್ಪರ್ಧಿಗಳ  ನಡುವೆ ಉಂಟಾಗುವ ಭಿನ್ನಾಪ್ರಿಯದಿಂದ ವಾಕ್ಸಮರ ನಡೆಯುತ್ತದೆ. ಕೆಲವೊಮ್ಮೆ ವಾಕ್ಸಮರ ಜಗಳಕ್ಕೂ ದಾರಿ ಮಾಡಿಕೊಟ್ಟಿದೆ. ಪ್ರತಿ ಟಾಸ್ಕ್​ನಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಪ್ರಶಾಂತ್​ ಸಂಬರಗಿ ತಾಳ್ಮೆ ಕಳೆದುಕೊಂಡು ಕೂಗಾಡುತ್ತಾ, ಸಹ ಸ್ಪರ್ಧಿಗಳ ಮೇಲೆ ಸಿಟ್ಟು ಮಾಡಿಕೊಂಡು ಮನಸ್ಸಿಗೆ ಬಂದಂತೆ ಮಾತನಾಡಿ, ನಂತರ ಕ್ಷಮೆ ಕೇಳುತ್ತಿರುತ್ತಾರೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಬಿಗ್​ಬಾಸ್​ ಮನೆಯಲ್ಲಿ ನಡೆಯುತ್ತಿರುವ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಮನೆಯಲ್ಲಿರುವ ಇತರೆ ಸ್ಪರ್ಧಿಗಳು ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಧು ಪ್ರಶಾಂತ್​ ಸಂಬರಗಿ ಆರೋಪಿಸುತ್ತಿದ್ದಾರೆ. ಗುಂಪುಗಾರಿಕೆಯಿಂದ  ನಿಜವಾದ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅದನ್ನು ನಿನ್ನೆ ರಾತ್ರಿ ನಡೆದ ಟಾಸ್ಕ್​ನಲ್ಲಿ ತನಗೆ ಅನ್ಯಾಯವಾಗಿದೆ ಎಂದು ಪ್ರಶಾಂತ್​ ಬಿಗ್​ ಬಾಸ್​ ಮನೆಯಲ್ಲಿರು ಕ್ಯಾಮೆರಾದಲ್ಲಿ ಹೇಳಿಕೊಂಡಿದ್ದಾರೆ. 

ಪ್ರತಿ ಬಾರಿ ತನಗೆ ಅನ್ಯಾಯವಾಗುತ್ತಿದೆ ಅಥವಾ ಯಾರಾದರೂ ತನ್ನನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದೆನಿಸಿದ ಕೂಡಲೇ ಪ್ರಶಾಂತ್​ ಸಂಬರಗಿ ಅಲ್ಲೇ ಏರು ದನಿಯಲ್ಲಿ ಮಾತನಾಡಿ ಮನಸ್ಸಿಗೆ ಅನಿಸಿದ್ದನ್ನು ಹೇಳಿ ಬಿಡುತ್ತಿದ್ದರು. ಆದರೆ ಈಗ ಪ್ರಶಾಂತ್​ ಸಂಬರಗಿ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿದೆ.

Prashanth sambargi BBK8, Bigg Boss 8 Kannada, Aravind, Manju Pavagada, Divya Uruduga, Nidhi Subbaiah, Prashanth Sambargi Fighting in BBK8, Prashanth Sambargi, Anushree, Sandalwood Drug Scandal, Loose mada yogi, Actor Yogish, Neravanda Aiyappa, Cricketer Aiyappa, Drug mafia, Sandalwood drug case, Ragini Dwivedi, Sanjjana Galrani, Drug case, CCB, FSL, drugs mafia in sandalwood, ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಡ್ರಗ್ಸ್​ ಪ್ರಕರಣ, ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ಮಾಫಿಯಾ, ಪ್ರಶಾಂತ್ ಸಂಬರಗಿ, Kannada Bigg Boss 8 Prashanth Sambargi once again started fighting while performing in a new task ae
ಪ್ರಶಾಂತ್ ಸಂಬರಗಿ


ಕೆಲ ಸ್ಪರ್ಧಿಗಳು ತನ್ನನ್ನು ಬೇಕಂತಲೇ ಟಾರ್ಗೆಟ್​ ಮಾಡಿ ಮೋಸ ಮಾಡಿದ್ದಾರೆ. ಕೆಲವರ ಪಿತೂರಿಯಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಸಾಲದಕ್ಕೆ 36 ಗಂಟೆ ಊಟ ಮಾಡುವುದಿಲ್ಲ ಎಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಮಂಜು ಪಾವಗಡ ಹಾಗೂ ವೈಷ್ಣವಿ ಮಾಡಿರುವ ಪಿತೂರಿಯಿಂದಾಗಿ ತನಗೆ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅನ್ಯಾಯವಾಗಿದೆ ಎಂದು ಬಿಗ್​ ಬಾಸ್​ ಬಳಿ ದೂರಿದ್ದಾರೆ ಪ್ರಶಾಂತ್​. ಈ ಕುರಿತಾಗಿ ಬಿಗ್​ ಬಾಸ್​ ಮಾತನಾಡುವರೆಗೂ ತಾನು ಮನೆಯಲ್ಲಿ ಊಟ ಮಾಡುದಿಲ್ಲ ಎಂದಿರುವ ಸಂಬರಗಿ 36 ಗಂಟೆ ಉಪವಾಸ ಮಾಡುವ ಮೂಲಕ ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Arjun Gowda: ಕೊರೋನಾ ಸೋಂಕಿತರಿಗಾಗಿ ಆಂಬ್ಯುಲೆನ್ಸ್​ ಚಾಲಕನಾದ ಸ್ಯಾಂಡಲ್​ವುಡ್​ ನಟ

ಬಿಗ್​ ಬಾಸ್​ ಮನೆಯಲ್ಲಿ ಮೂರು ದಿನಗಳಿಂದ ನಡೆದ ಕ್ಯಾಪ್ಟನ್ಸಿ ಟಾಸ್ಕ್​ ನಿನ್ನೆ ಮುಕ್ತಾಯಗೊಂಡಿದೆ. ಇದರಲ್ಲಿ ಕೊನೆಯದಾಗಿ ಆಡಿದ ಆಟ ಚೆಂಡನ್ನು ತಲೆಯಿಂದ ತಳ್ಳುವ ಆಟದಲ್ಲಿ ತಾನು ಗೆದ್ದರೂ ಅರವಿಂದ್​ ವಿಜೇತರಾಗಿದ್ದಾರೆ ಎಂದು ಮಂಜು ಘೋಷಿಸಿದ್ದಾರೆ ಎಂದು ಪ್ರಶಾಂತ್​ ಆರೋಪಿಸಿದ್ದಾರೆ.

ಇನ್ನು ಇದೇ ಟಾಸ್ಕ್​ನಲ್ಲಿ ತನಗೂ ಅನ್ಯಾಯವಾಗಿದೆ ಎಂದು ಸ್ಪರ್ಧಿ ಪ್ರಿಯಾಂಕಾ ಸಹ ನ್ಯಾಯ ಬೇಕೆಂದು ಪಟ್ಟು ಹಿಡಿದಿದ್ದರು. ಚೆಂಡನ್ನು ತಲೆಯಲ್ಲಿ ತಳ್ಳುವ ಆಟದಲ್ಲಿ ಅರವಿಂದ್​ ಟ್ರ್ಯಾಕ್​ ಬಿಟ್ಟು ಬಂದು ತನ್ನ ಆಟಕ್ಕೆ ತೊಂದರೆ ಮಾಡಿದರು ಎಂದು ಆರೋಪಿಸಿರುವ ಪ್ರಿಯಾಂಕಾ ನ್ಯಾಯಕ್ಕಾಗಿ ಕಣ್ಣೀರಿಟ್ಟರು. ಒಂದೇ ಟಾಸ್ಕ್​ನಲ್ಲಿ ಪ್ರಿಯಾಂಕಾ ಹಾಗೂ ಸಂಬರಗಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.


ಇನ್ನು ಇದೇ ಟಾಸ್ಕ್​ ಅನ್ನು ಮತ್ತೆ ಆಡೋಣ ಬಾ ಎಂದರೆ ಅರವಿಂದ್​ ಬರಲಿಲ್ಲ. ತನ್ನನ್ನು ತಾನು ಕ್ರೀಡಾಪಟು ಎಂದು ಹೇಳಿಕೊಳ್ಳುವ ಅರವಿಂದ್​ ಅವರಿಗೆ ಕ್ರೀಡಾ ಸ್ಪೂತಿಯೇ ಇಲ್ಲ ಎಂದಿದ್ದಾರೆ ಪ್ರಶಾಂತ್​ ಸಂಬರಗಿ.

ಉಪವಾಸ ಮಾಡುತ್ತಿರುವ ಪ್ರಶಾಂತ್​ ಸಂಬರಗಿ ಇವತ್ತು ಊಟ ಮಾಡುತ್ತಾರಾ..? ಪ್ರಶಾಂತ್​ಗೆ ಊಟ ಮಾಡಿಸುವಲ್ಲಿ ಸಹ ಸ್ಪರ್ಧಿಗಳು ಯಶಸ್ವಿಯಾಗುತ್ತಾರಾ..? ಅಥವಾ ಬಿಗ್​ ಬಾಸ್​ ಮಧ್ಯಪ್ರವೇಶಿಸುತ್ತಾ ಎಂದು ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ: ಮತ್ತು ಬರಿಸುವಂತಿದೆ ನಟಿ ಪ್ರಿಯಾ ವಾರಿಯರ್​ರ ಈ ಮಾದಕ ನೋಟ​..!

ಇನ್ನು ನಿನ್ನೆ ನಡೆದ ಕ್ಯಾಪ್ಟನ್ಸಿಯ ಕೊನೆಯ ಟಾಸ್ಕ್​ನಲ್ಲಿ ಅರವಿಂದ್​ ಆಡಿದ ರೀತಿಯ ಹಾಗೂ ಫಲಿತಾಂಶ ಪ್ರಕವಾದ ನಂತರ ಅವರು ನಡೆದು ಕೊಂಡ ರೀತಿಗೆ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕ್ರೀಡಾಪಟುವಾಗಿರುವ ಅರವಿಂದ್​ ಮತ್ತೊಮ್ಮೆ ಆ ಟಾಸ್ಕ್​ ಮಾಡಬಹುದಿತ್ತು ಎಂದೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.
Published by: Anitha E
First published: April 30, 2021, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories