ಇದೇ ಮೊದಲ ಬಾರಿಗೆ ಬಿಗ್ ಬಾಸ್‌ನ ಈ ಸ್ಪರ್ಧಿಯನ್ನು ಮನಃಪೂರ್ವಕವಾಗಿ ಹೊಗಳಿದರು ಕಿಚ್ಚ ಸುದೀಪ್!

Bigg boss: ಜೀವನದಲ್ಲಿ ಇದೇ ಮೊದಲ ಬಾರಿಗೆ ಅಪ್ಪ ಬರೆದಿದ್ದ ಪತ್ರವನ್ನು ಓದಿ ಕಿಶನ್ ತುಂಬಾ ಭಾವುಕರಾಗಿದ್ದರು. ಒಬ್ಬಂಟಿಯಾಗಿ ಚೇಂಜಿಂಗ್ ರೂಂನಲ್ಲಿ ಅಳುತ್ತಿದ್ದರು.

news18-kannada
Updated:December 9, 2019, 6:29 PM IST
ಇದೇ ಮೊದಲ ಬಾರಿಗೆ  ಬಿಗ್ ಬಾಸ್‌ನ ಈ ಸ್ಪರ್ಧಿಯನ್ನು ಮನಃಪೂರ್ವಕವಾಗಿ ಹೊಗಳಿದರು ಕಿಚ್ಚ ಸುದೀಪ್!
ಕಿಶನ್, ಕಿಚ್ಚ ಸುದೀಪ್​
  • Share this:
ಬಿಗ್​​ಬಾಸ್​ ಸೀಸನ್ 7ರ 50 ದಿನಗಳು ಪೂರ್ಣಗೊಂಡಿವೆ. ದಿನಕಳೆದಂತೆ ನೂರನೇ ದಿನ ಹತ್ತಿರವಾಗುತ್ತಿರುವಂತೆಯೇ ವಿನ್ನರ್ ಯಾರಾಗಬಹುದು ಅನ್ನೋ ಕುತೂಹಲಗಳೂ ಹೆಚ್ಚುತ್ತಿವೆ.  ಇದರ ನಡುವೆ ಕೆಲ ಸ್ಪರ್ಧಿಗಳು ಹೊರ ಹೋಗಿದ್ದರೆ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಕೆಲವರು ಬಿಗ್​​​ಬಾಸ್​​ ಮನೆ ಸೇರಿದ್ದಾರೆ.  ಸದ್ಯ 12 ಸ್ಪರ್ಧಿಗಳು ಬಿಗ್ ಮನೆಯಲ್ಲಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮುಂದಿನ ವಾರ ಯಾರು ಹೊರಹೋಗಬಹುದು, ನಾವು ಹೇಗೆ ಸೇಫ್ ಆಗಬಹುದು ಅನ್ನೋ ಲೆಕ್ಕಾಚಾರಗಳೂ ಭರ್ಜರಿಯಾಗಿಯೇ ನಡೀತಿವೆ.

ಮನಮುಟ್ಟಿದ ಮನೆಯವರ ಪತ್ರ !

ಕಳೆದ ವಾರ ಬಿಗ್​ಬಾಸ್​​ ಸ್ಪರ್ಧಿಗಳಿಗೆ ಬಿಗ್​ಬಾಸ್​​ ಒಂದು ವಿಶೇಷ ಸರ್ಪ್ರೈಸ್ ನೀಡಿದ್ದರು. ಆ ಪ್ರಕಾರ  ಮನೆಯಲ್ಲಿರುವ ಕೆಲ ಸ್ಪರ್ಧಿಗಳಿಗೆ ಅವರ ಮನೆಯವರಿಂದ ಪತ್ರಗಳನ್ನು ಬರೆಸಿಕೊಟ್ಟಿದ್ದರು. ಅದನ್ನು ಎಲ್ಲರೂ ಉಳಿದ ಸ್ಪರ್ಧಿಗಳು ಹಾಗೂ ಕ್ಯಾಮರಾ ಮುಂದೆಯೇ ಓದಿದರು. ಅಂದು ಎಲ್ಲರೂ ಒಂದಾದ್ರು, ಭಾವುಕರಾದರು, ತಮ್ಮ ತಮ್ಮ ಮನೆಯವರನ್ನು, ಕುಟುಂಬದವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ರು.

ಕಿಶನ್​ಗೆ ಅಪ್ಪನ ಮೊದಲ ಪತ್ರ !

ಇನ್ನು ನ್ಯಾಷನಲ್ ಟಿವಿಯೊಂದು ನಡೆಸಿದ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟಿಷನ್ ಡ್ಯಾನ್ಸ್ ದೀವಾನೆ ಗೆದ್ದಿರುವ ಸೆಲೆಬ್ರಿಟಿ ಡ್ಯಾನ್ಸರ್, ಕೊರಿಯೋಗ್ರಾಫರ್​, ಕಿಶನ್ ಅವರಿಗೆ ಬಂದಿದ್ದ ಪತ್ರ ಎಲ್ಲರನ್ನೂ ಕಂಬನಿ ಮಿಡಿಯುವಂತೆ ಮಾಡಿತ್ತು. ಯಾಕಂದರೆ, ಕಿಶನ್ ತಂದೆ ಅಶೋಕ್ ಬಿಳಗಲಿ ಅದೇ ಮೊದಲ ಬಾರಿಗೆ ಕಾಗದ ಬರೆದಿದ್ದರು. ಅಪ್ಪನ ಮೊದಲ ಪತ್ರ ನೋಡಿ ಕಿಶನ್ ಗದ್ಗದಿತರಾದರು. ಅಮ್ಮನ ನೆನಪು ಅವರನ್ನು ಮತ್ತೆ ಕಾಡಲಾರಂಭಿಸಿತ್ತು. ಪತ್ರ ಓದು ಮುಗಿದರು ಕಿಶನ್ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಅಪ್ಪನ ಪತ್ರದಲ್ಲೇನಿತ್ತು ?

ಪುಟ್ಟ ಹಳ್ಳಿಯ ಹುಡುಗನಾಗಿದ್ದರೂ, ನಿನ್ನ ಶ್ರಮ ಹಾಗೂ ಛಲಗಳಿಂದ ಇವತ್ತು ಇಂತಹ ಒಂದು ಅತ್ಯುತ್ತಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀಯಾ. ನಿನ್ನಿಂದ ಯಾರಿಗೆ ಏನಾದರು ತೊಂದರೆಯಾದಾಗ ನೀನೇ ಹೋಗಿ ಅವರ ಬಳಿ ಕ್ಷಮೆ ಕೇಳುವ ಗುಣ ಇಷ್ಟವಾಯಿತು. ಅಮ್ಮನ ಆಶೀರ್ವಾದ ನಿನ್ನ ಮೇಲಿದೆ. ಚೆನ್ನಾಗಿ ಆಡುತ್ತಿದ್ದೀಯ, ಹೀಗೆ ನಿನ್ನ ಆಟವನ್ನು ಮುಂದುವರಿಸು. ಒಳ್ಳೆಯದಾಗಲಿ ಎಂದು ಕಿಶನ್ ತಂದೆ ಅಶೋಕ್ ಮಗನಿಗೆ ಪತ್ರದ ಮೂಲಕ ಶುಭಕೋರಿದ್ದರು. 
ಒಬ್ಬಂಟಿಯಾಗಿ ಅಳುತ್ತಿದ್ದ ಕಿಶನ್ ?

ಜೀವನದಲ್ಲಿ ಇದೇ ಮೊದಲ ಬಾರಿಗೆ ಅಪ್ಪ ಬರೆದಿದ್ದ ಪತ್ರವನ್ನು ಓದಿ ಕಿಶನ್ ತುಂಬಾ ಭಾವುಕರಾಗಿದ್ದರು. ಒಬ್ಬಂಟಿಯಾಗಿ ಚೇಂಜಿಂಗ್ ರೂಂನಲ್ಲಿ ಅಳುತ್ತಿದ್ದರು. ಆಗ ಅಲ್ಲಿಗೆ ಬಂದ ಚೈತ್ರಾ ಕೋಟೂರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಬಳಿಕ ಅಲ್ಲಿಗೆ ಚಂದನ್, ಚಂದನ ಸೇರಿದಂತೆ ಉಳಿದ ಕೆಲ ಸ್ಪರ್ಧಿಗಳೂ  ಬಂದು ಕಿಶನ್​​​ರನ್ನು ಅಪ್ಪಿ ಸಂತೈಸಿದರು. ನೀನು ಎಲ್ಲರನ್ನೂ ಇಷ್ಟು ಪ್ರೀತಿಸ್ತೀಯಾ, ಎಲ್ಲರೂ ಒಟ್ಟಿಗೆ ನಿನ್ನ ಊರಿಗೆ ಬರ್ತೀವಿ.

ಬಿಗ್​ಬಾಸ್​​  ಮನೆಯ ಕಿಚ್ಚು ಈ ಹುಡುಗ !

ರಾಜ್ಯದ ಜನರಿಗೆ ಸುದೀಪ್ ಹೇಗೆ ಕಿಚ್ಚ ಆಗಿದ್ದಾರೋ, ಅದೇ ರೀತಿ ತಮ್ಮ ಕುಟುಂಬದವರಿಗೆ, ಸಂಬಂಧಿಕರಿಗೆ, ಗೆಳೆಯರಿಗೆ ಕಿಶನ್ ಕಿಚ್ಚು. ಯಾಕೆಂದರೆ, ಕಿಶನ್ ಅವರ ಪೆಟ್​​ನೇಮ್​ ಕಿಚ್ಚು. ಕಿಚ್ಚು ಅಂತಲೇ ಅಪ್ಪ ಕೂಡ ಪತ್ರವನ್ನು ಪ್ರಾರಂಭಿಸಿದ್ದರಿಂದ, ಬಿಗ್​ಬಾಸ್​​ ಸ್ಪರ್ಧಿಗಳಿಗೂ ಕಿಶನ್​​ ಅವರನ್ನ ಈ ಮತ್ತೊಂದು ಹೆಸರಿನ ಬಗ್ಗೆ ಗೊತ್ತಾಯ್ತು. ಸದ್ಯ ಈ ಕಿಚ್ಚು ಕಿಡಿಯಾಗಿ ಬಿಗ್​​ಬಾಸ್​​ ಮನೆಯಲ್ಲಿ ಮಿಂಚುತ್ತಿದೆ.

ಕಿಶನ್​​​ಗೆ ಕಿಚ್ಚನ ಚಪ್ಪಾಳೆ !

13 ಸ್ಪರ್ಧಿಗಳಿದ್ದರೂ ಕಳೆದ ವಾರ ಎಲ್ಲರಿಗಿಂತ ಹೆಚ್ಚು ಟಾಸ್ಕ್​​​​ಗಳಲ್ಲಿ ಪಾಲ್ಗೊಂಡು, ನೂರಕ್ಕೆ ನೂರು ಪರ್ಸೆಂಟ್ ನೀಡಿದ ಬಿಗ್​​ಬಾಸ್​​​ ಏಕೈಕ ಸ್ಪರ್ಧಿ ಅಂದರೆ ಅದು ಕಿಶನ್. ಹೀಗಾಗಿಯೇ ಬಿಗ್​ಬಾಸ್​​ ಸೀಸನ್ 7ರ ಗೆಲ್ಲುವ ಕುದುರೆ ಅಂತಲೇ ಬಿಗ್​​ಬಾಸ್​ ಪ್ರಿಯರು ಮಾತನಾಡಿಕೊಳ್ತಿದ್ದಾರೆ. ಜೊತೆಗೆ ಉಳಿದ ಸ್ಪರ್ಧಿಗಳಿಗೂ ಕಿಶನ್​​ ಸ್ಟ್ರಾಂಗ್ ಕಂಟೆಸ್ಟೆಂಟ್​​​ ಎಂಬುದರ ಅರಿವಾಗಿದೆ. ತಮ್ಮ ಶ್ರದ್ಧೆ ಹಾಗೂ ಪರಿಶ್ರಮಗಳ ಮೂಲಕ ಟಾಸ್ಕ್​​ಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಕಿಶನ್ ಅಲ್ಲಿನ ಸ್ಪರ್ಧಿಗಳ ಹೃದಯವನ್ನು ಮಾತ್ರವಲ್ಲ, ಖುದ್ದು ಬಿಗ್​ಬಾಸ್​​ ಕಿಚ್ಚ ಸುದೀಪ್ ಅವರ ಮನಸ್ಸನ್ನು ಗೆದ್ದಿದ್ದಾರೆ. ಕಳೆದ ವಾರದ ಅತ್ಯುತ್ತಮ ಸ್ಪರ್ಧಿ ಅಂತ ಸುದೀಪ್​​ ಕಿಶನ್​​ ಅವರಿಗೆ ಚಪ್ಪಾಳೆ ಹೊಡೆದಿದ್ದಾರೆ.

ಇದನ್ನೂ ಓದಿ: ಏರ್​​ಟೆಲ್​​ಗೆ ಟಕ್ಕರ್​ ನೀಡಲು ಹಳೆಯ ಪ್ರಿಪೇಯ್ಡ್ ಯೋಜನೆಯನ್ನು ವಾಪಾಸ್ ಬಿಡುಗಡೆ ಮಾಡಿದ ಜಿಯೋ

ಇದನ್ನೂ ಓದಿ:  ಸೋಲಿನ ಹೊಣೆ ಹೊತ್ತು ಗುಂಡೂರಾವ್​​ ರಾಜೀನಾಮೆ; ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆಶಿ ಸೇರಿದಂತೆ ಹಲವರು ಲಾಬಿ
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ