Dabangg 3: ಕನ್ನಡದಲ್ಲಿ ಚುಲ್​ಬುಲ್​ ಹುಡ್​ ಹುಡ್​ ದಬಾಂಗ್...​ ಟೈಟಲ್​ ಟ್ರ್ಯಾಕ್​..!

Chulbul Dabangg Kannada Song: ಹಿಂದಿ ಜೊತೆಗೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ದಬಾಂಗ್ 3 ಇದೇ ಮೊದಲ ಬಾರಿಗೆ ತೆರೆಗೆ ಅಪ್ಪಳಿಸುತ್ತಿದೆ. ಇನ್ನು ಸಲ್ಮಾನ್​ ಕನ್ನಡದಲ್ಲಿ ಮಾತನಾಡಿರುವ ಮೋಷನ್​ ಪೋಸ್ಟರ್​ ಹಾಗೂ ಟ್ರೈಲರ್​​ ನೋಡಿದ ಮೇಲಂತೂ ಕನ್ನಡಿಗರಲ್ಲೂ ಈ ಚಿತ್ರದ ಮೇಲೆ ಕುತೂಹಲ ಹೆಚ್ಚಾಗಿದೆ. ಈಗ ಕನ್ನಡದ ಟೈಟಲ್​ ಹಾಡು ಬಿಡುಗಡೆಯಾಗಿದೆ.

news18-kannada
Updated:December 2, 2019, 5:20 PM IST
Dabangg 3: ಕನ್ನಡದಲ್ಲಿ ಚುಲ್​ಬುಲ್​ ಹುಡ್​ ಹುಡ್​ ದಬಾಂಗ್...​ ಟೈಟಲ್​ ಟ್ರ್ಯಾಕ್​..!
ಕಿಚ್ಚ ಸುದೀಪ್​ ಹಾಗೂ ಸಲ್ಮಾನ್​ ಖಾನ್​
  • Share this:
ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್‍ವುಡ್ ಪೈಲ್ವಾನ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಚಿತ್ರ 'ದಬಾಂಗ್ 3'. ಜೊತೆಗೆ ಡ್ಯಾನ್ಸ್ ಕಿಂಗ್ ಪ್ರಭುದೇವಾ ಆ್ಯಕ್ಷನ್ ಕಟ್ ಹೇಳುತ್ತಿರುವ ಕಾರಣ 'ದಬಾಂಗ್ 3' ಬಗ್ಗೆ ಎಲ್ಲಿಲ್ಲದ ನಿರೀಕ್ಷೆಗಳಿವೆ.

ಹಿಂದಿ ಜೊತೆಗೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ 'ದಬಾಂಗ್ 3' ಇದೇ ಮೊದಲ ಬಾರಿಗೆ ತೆರೆಗೆ ಅಪ್ಪಳಿಸುತ್ತಿದೆ. ಇನ್ನು ಸಲ್ಮಾನ್​ ಕನ್ನಡದಲ್ಲಿ ಮಾತನಾಡಿರುವ ಮೋಷನ್​ ಪೋಸ್ಟರ್​ ಹಾಗೂ ಟ್ರೈಲರ್​​ ನೋಡಿದ ಮೇಲಂತೂ ಕನ್ನಡಿಗರಲ್ಲೂ ಈ ಚಿತ್ರದ ಮೇಲೆ ಕುತೂಹಲ ಹೆಚ್ಚಾಗಿದೆ. ಇನ್ನು ಈಗಾಗಲೇ ರೀಲೀಸ್​ ಆಗಿರುವ ಟ್ರೈಲರ್ ಸಖತ್ ವೈರಲ್ ಆಗಿದೆ.ಅದರ ಬೆನ್ನಲ್ಲೇ 'ದಬಾಂಗ್3' ಸಿನಿಮಾದ ಟೈಟಲ್ ಟ್ರ್ಯಾಕ್​ನ ಕನ್ನಡ ವರ್ಷನ್ ಲಾಂಚ್ ಆಗಿದ್ದು, ಸದ್ಯ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿದೆ.ಈ ಹಿಂದೆ ಹಿಂದಿ ಟೈಟಲ್​ ಟ್ರ್ಯಾಕ್​ ಬಿಡುಗಡೆಯಾದಾಗ ಸಲ್ಮಾನ್​ ಬಾಯಿಯಲ್ಲಿ ಬೆಂಕಿ ಉಗುಳಿದ್ದ ದೃಶ್ಯದಿಂದಾಗಿ ಟ್ರೋಲ್​ ಆಗಿದ್ದರು. ಆದರೆ  ಕನ್ನಡ ಹಾಡಿಗೆ ಮಾತ್ರ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಿವ್ಯಾ ಕೆ, ಶಬಾಬ್​ ಹಾಗೂ ಸಾಜಿದ್​ಈ ಹಾಡಿಗೆ ಕಂಠದಾನ ಮಾಡಿದ್ದಾರೆ. ' ದಬಾಂಗ್ 3' ಇದೇ ತಿಂಗಳ 20ರಂದು ರಿಲೀಸ್ ಆಗಲಿದೆ.

Pranutan Bahl: ಸಿಕ್ಕಾಪಟ್ಟೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಕಾಜೋಲ್​ ಕುಟುಂಬದ ಉಯೋನ್ಮುಖ ನಟಿ..!
Loading...

First published:December 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...