ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​: ಸುದೀಪಿಯನ್ಸ್​ಗೆ ಸಿಕ್ತು ಸುದೀಪ್​-ಪ್ರಿಯಾ ಕಡೆಯಿಂದ ಯುಗಾದಿ ಗಿಫ್ಟ್​

ಸಾಮಾಜಿಕ ಜಾಲತಾಣದ ಮೂಲಕ ಸದಾ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸುದೀಪ್​ ಈಗ ಅವರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದೂ ಸಹ ತಮ್ಮದೇ ಆದ ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​ ಮೂಲಕ.

Anitha E | news18
Updated:April 6, 2019, 12:50 PM IST
ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​: ಸುದೀಪಿಯನ್ಸ್​ಗೆ ಸಿಕ್ತು ಸುದೀಪ್​-ಪ್ರಿಯಾ ಕಡೆಯಿಂದ ಯುಗಾದಿ ಗಿಫ್ಟ್​
ಅಭಿಮಾನಿಗಳಿಗಾಗಿ ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​ ಆರಂಭಿಸಿದ ಕಿಚ್ಚ ಸುದೀಪ್​ ಹಾಗೂ ಪ್ರಿಯಾ ಸುದೀಪ್​
  • News18
  • Last Updated: April 6, 2019, 12:50 PM IST
  • Share this:
- ಅನಿತಾ ಈ, 

ಯುಗಾದಿ ಹಬ್ಬಕ್ಕೆ ಸುದೀಪ್​ ಅಭಿಮಾನಿಗಳಾದ ಸುದೀಪಿಯನ್ಸ್​ಗೆ ಒಂದು ಭರ್ಜರಿ ಉಡುಗೊರೆ ನೀಡುವುದಾಗಿ ಕಿಚ್ಚನ ಮಡದಿ ಪ್ರಿಯಾ ಸುದೀಪ್​ ಟ್ವೀಟ್​ ಮೂಲಕ ಸಿಹಿ ಸುದ್ದಿ ನೀಡಿದ್ದರು.

ಇದನ್ನೂ ಓದಿ: ಒಮರ್​ ಅಬ್ದುಲ್ಲಾ ವ್ಯಂಗ್ಯ: ಏರ್​ ಕೂಲರ್​ಗಳೊಂದಿಗೆ ಟ್ರ್ಯಾಕ್ಟರ್​ ಓಡಿಸಿದರಾ ಕನಸಿನ ಕನ್ಯೆ ಹೇಮಾ..?

ಪ್ರಿಯಾ ತಮ್ಮ ಮಾತಿನಂತೆ ಇಂದು ಸುದೀಪಿಯನ್ಸ್​ಗೆ ಹಬ್ಬದ ಗಿಫ್ಟ್​ ಕೊಟ್ಟಿದ್ದಾರೆ. ಅಂದು ಟ್ವೀಟ್​ ಮೂಲಕ ಅಭಿಮಾನಿಗಳು ಹಾಗೂ ಸ್ನೇಹಿತರಲ್ಲಿ ಮೂಡಿಸಿದ್ದ ಕುತೂಹಲಕ್ಕೆ ಪ್ರಿಯಾ ಇಂದು ತೆರೆ ಏಳೆದಿದ್ದಾರೆ.

ಕಿಚ್ಚನನ್ನು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಮಾಡುವ ಸಲುವಾಗಿ ಕಿಚ್ಚ ಕ್ರಿಯೇಷನ್ಸ್​ ಎಂಬ ಯೂಟ್ಯೂಬ್​ ಚಾನೆಲ್​ ಅನ್ನು ಆರಂಭಿಸಲಾಗಿದೆ. ಇದರಲ್ಲಿ ಕಿಚ್ಚ ಸುದೀಪ್​ ಅವರ ಸಿನಿಮಾಗಳ ಕುರಿತಾದ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಪ್ರಿಯಾ ತಿಳಿಸಿದ್ದಾರೆ.

Ugadi gift to all Kichcha’s friends,bringing him much more closer to you. Watch & subscribe to the official YouTube channel of Kichcha Creatiions. A small video of my personal admiration. "Kichha Andre Krishna” alwa!!ಇಲ್ಲಿದೆ ಕಿಚ್ಚ ಕ್ರಿಯೇಷನ್​ನ ಆರಂಭದಂದು  ಮಾಡಲಾಗಿರುವ ಪುಟ್ಟ ವಿಡಿಯೋ...ಅಜಾನಬಾಹು, ಆರಡಿಯ ಅಸ್ತ್ರ, ಸಿಂಹಕಂಠ, ಬಿಲ್ಲನೋಟ, ಆಕಾಶ ಮುಟ್ಟಿದರೂ ಭೂಸ್ಪರ್ಶ, ಬಿಡದೇ ಆಡುವನಿವನಾಟ, ಸದ್ದಿಲ್ಲದೆ ಕತ್ತಲ ಬೆಳಗುವ ದೀಪದಂಚಿಬಿನ ಕಪ್ಪು ಇವನ ಮೌನ, ಕಪ್ಪಾದರೂ ಜಗಕೇ ಬೆಳಕನೀವ ಪರಮ ಸುದೀಪನು, ಕೃಷ್ಣ ಎಂದೆಲ್ಲ ಕಿಚ್ಚನ್ನು ಹಾಡಿ ಹೊಗಳಿರುವ ಪದಗಳ ಸಾಲು ಸುದೀಪ್​ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ. ಇದರ ಜೊತೆಗೆಯೂಟ್ಯೂನ್​ ಚಾನಲ್​ನ  ಕೃಷ್ಣನ ಲೋಗೋವನ್ನೂ ಈ ವಿಡಿಯೋದಲ್ಲೇ ಲಾಂಚ್​ ಮಾಡಲಾಗಿದೆ.

'ಈ ಚಾನಲ್​ ಅನ್ನು ಕೇವಲ ಸುದೀಪ್​ ಅವರ ಸಿನಿಮಾಗಳ ಪ್ರಚಾರ ಹಾಗೂ ಮಾಹಿತಿ ಪಸರಿಸಲು ಮಾತ್ರ ಬಳಸಲಾಗುವುದಿಲ್ಲ. ಜೊತೆಗೆ ಹೊಸ ಹಾಗೂ ಯುವ ಪ್ರತಿಭೆಗಳ ಪ್ರದರ್ಶನಕ್ಕೂ ಅವಕಾಶ ನೀಡಲಾಗುವುದು' ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.ಇನ್ನೂ ಈ ಚಾನಲ್​ ಆರಂಭಿಸಲು ಶ್ರಮಿಸಿದ ತಮ್ಮ ಪತ್ನಿ ಪ್ರಿಯಾಗೂ ಟ್ವೀಟ್​ ಮೂಲಕ ದನ್ಯವಾದ ತಿಳಿಸಿದ್ದಾರೆ ಕರುನಾಡ ಕಿಚ್ಚ. ಇನ್ನೂ ಡಿಜಿಟಲ್​ ಯುಗದಲ್ಲಿ ಅದನ್ನು ತಮ್ಮ ಅನುಕೂಲಕ್ಕೆ ಹೇಗೆಲ್ಲ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೂ ಸಾಕ್ಷಿಯಾಗಿದೆ.

PHOTOS: ಮಥುರಾದಲ್ಲಿ ಚುನಾವಣಾ ಪ್ರಚಾರದ ವೇಳೆ ಟ್ರ್ಯಾಕ್ಟರ್​ ಓಡಿಸಿದ ಹೇಮಾ ಮಾಲಿನಿ..!
First published:April 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ