HOME » NEWS » Entertainment » KICHCHA SUDEEP ADOPTED 4 GOVERNMENT SCHOOLS AND MINISTER DR SUDHAKAR PRAISED ACTORS DECISION AE

Kichcha Sudeep: ಕಿಚ್ಚ ಸುದೀಪ್​ ಮಾಡಿದ ಕೆಲಸವನ್ನು ಮೆಚ್ಚಿಕೊಂಡ ಸಚಿವ ಕೆ. ಸುಧಾಕರ್​..!

Kichcha Sudeep- Sudhakar: ವಿಶ್ವದೆಲ್ಲೆಡೆ ಎಲ್ಲರೂ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುದೀಪ್​, ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮನಸಾರೆ ಹೊಗಳಿ, ಮೆಚ್ಚಿಕೊಂಡಿದ್ದಾರೆ ಸಚಿವ ಕೆ. ಸುಧಾಕರ್

Anitha E | news18-kannada
Updated:August 10, 2020, 12:29 PM IST
Kichcha Sudeep: ಕಿಚ್ಚ ಸುದೀಪ್​ ಮಾಡಿದ ಕೆಲಸವನ್ನು ಮೆಚ್ಚಿಕೊಂಡ ಸಚಿವ ಕೆ. ಸುಧಾಕರ್​..!
ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ಸಿನಿಮಾ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ತಮ್ಮದೇ ಆದ ಚಾರಿಟಬಲ್​ ಟ್ರಸ್ಟ್​ ಮಾಡಿಕೊಳ್ಳುವ ಮೂಲಕ ಸಾಕಷ್ಟು ಮಂದಿಗೆ ಸಹಾಯ ಮಾಡುತ್ತಿದ್ದಾರೆ. 

ಶಿವಮೊಗ್ಗ ಜಿಲ್ಲೆಯಲ್ಲಿರುವ ನಾಲ್ಕು ಸರ್ಕಾರಿ ಶಾಲೆಗಳನ್ನು ಸುದೀಪ್​ ತಮ್ಮ ಟ್ರಸ್ಟ್​ ಮೂಲಕ ದತ್ತು ಪಡೆದಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳನ್ನು ಇದನ್ನು ಫ್ಯಾನ್​ ಪೇಜ್​ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಟ್ರಸ್ಟ್​ ಮೂಲಕ ಸುದೀಪ್​ ಈ ನಾಲ್ಕು ಶಾಲೆಗಳನ್ನು ಅಭಿವೃದ್ಧಿ ಪಡಿಸಲಿದ್ದಾರೆ.

Kichcha Sudeep released new poster of Kotigobba 3 movie
ಕಿಚ್ಚ ಸುದೀಪ್​


ಶಿವಮೊಗ್ಗದ ಸಾಗರ ತಾಲ್ಲೂಕಿನ ಆವಿಗೆ ಗ್ರಾಮ. ಹಾಳಸಸಿ ಗ್ರಾಮ, ಎಂ.ಎಲ್​ ಹಳ್ಳಿ ಹಾಗೂ ಎಸ್​.ಎನ್​. ನಗರದಲ್ಲಿರುವ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚನ ಚಾರಿಟಬಲ್​ ಟ್ರಸ್ಟ್​ ದತ್ತು ಪಡೆದಿದ್ದು, ಅಭಿವೃದ್ಧಿ ಮಾಡಲು ಮುಂದಾಗಿದೆ.

ಇದನ್ನೂ ಓದಿ: Phantom: ಕಿಚ್ಚನ ಖದರ್​ಗೆ ಅಭಿಮಾನಿಗಳು ಫಿದಾ: ರಿಲೀಸ್​ ಆಯ್ತು ವಿಕ್ರಾಂತ್​ ರೋಣನ ಫಸ್ಟ್​ಲುಕ್​ ಪೋಸ್ಟರ್​..!

ವಿಶ್ವದೆಲ್ಲೆಡೆ ಎಲ್ಲರೂ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುದೀಪ್​, ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮನಸಾರೆ ಹೊಗಳಿ, ಮೆಚ್ಚಿಕೊಂಡಿದ್ದಾರೆ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​.

Kichcha Sudeep adopted 4 government schools and minister dr sudhakar praised actors decision
ಸುದೀಪ್​ ಕೆಲಸವನ್ನು ಮೆಚ್ಚಿಕೊಂಡು ಟ್ವೀಟ್​ ಮಾಡಿದ ಸಚಿವ ಸುಧಾಕರ್​
ಸಚಿವ ಸುಧಾಕರ್ ಅವರ ಟ್ವೀಟ್​ ನೋಡಿದ ಕಿಚ್ಚ ಸಹ ಅದಕ್ಕೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಕಿಚ್ಚನ ಕೆಲಸ ಮೆಚ್ಚಿಕೊಂಡು ಸಚಿವರು ಮಾಡಿರುವ ಟ್ವೀಟ್​ ಅನ್ನು ಅಭಿಮಾನಿಗಳು ವೈರಲ್​ ಮಾಡುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಕನಸಿನ ರಾಣಿ ಮಾಲಾಶ್ರೀ: ಇಲ್ಲಿವೆ ಬಾಲ್ಯದ ಅಪರೂಪದ ಫೋಟೋಗಳು..!ಈ ಹಿಂದೆಯೂ ಸುದೀಪ್​ ಅವರ ಟಾರಿಟಬಲ್​ ಟ್ರಸ್ಟ್​, ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಮೂರು ಹಾಗೂ ಹಿರಿಯೂರಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು. ಈ ಹಿಂದೆ, ಪ್ರಜ್ವಲ್​ ದೇವರಾಜ್​, ಪ್ರಣೀತಾ ಸುಭಾಷ್​ ಸಹ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸುದ್ದಿಯಾಗಿದ್ದರು.

Kichcha Sudeep Starrer Phantom Movie team released the First look poster of Vikranth Rona
ವಿಕ್ರಾಂತ್​ ರೋಣ ಪಾತ್ರದ ಫಸ್ಟ್​ಲುಕ್​ ಪೋಸ್ಟರ್​


ಕೆಲವೇ ಗಂಟೆಗಳ ಹಿಂದೆಯಷ್ಟೆ ಕಿಚ್ಚ ಸುದೀಪ್​ ಅಭಿನಯದ ಫ್ಯಾಂಟಮ್​ ಸಿನಿಮಾದ ವಿಕ್ರಾಂತ್​ ರೋಣ ಪಾತ್ರದ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಆಗಿದೆ. ಕಿಚ್ಚನ ಖದರ್​ ಹಾಗೂ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದು, ಟ್ರಿಟರ್​ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ​
Published by: Anitha E
First published: August 10, 2020, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories