ಸುದೀಪ್​​ ಅಭಿನಯದ ಪೈಲ್ವಾನ್ ಪೋಸ್ಟರ್​ ರಿಲೀಸ್: ಕಿಚ್ಚನ ಬಾಡಿ ಫೇಕ್​​ ಎಂದು ಅಭಿಮಾನಿಗಳ ಬಿಸಿ ಚರ್ಚೆ!​

ಮೊದಲೇ ನಟ ಸುದೀಪ್​ ಅಭಿಮಾನಿಗಳ ಅಭಿಮಾನಿ ಅನ್ನೋದು ಎಲ್ಲರಿಗೂ ಗೊತ್ತು. ತಮ್ಮ ನೆಚ್ಚಿನ ಫ್ಯಾನ್ಸ್​ಗಳ ಬಯಕೆ ಈಡೇರಿಸುವುದು ನನ್ನ ಮೊದಲ ಆದ್ಯತೆಯೆಂದು ಭಾವಿಸಿರುವ ಸುದೀಪ್​, ಇಂದು ತಮ್ಮ ಚಿತ್ರದ ನ್ಯೂ ಲುಕ್ ರಿಲೀಸ್ ಮಾಡಿದ್ದಾರೆ.

G Hareeshkumar | news18
Updated:November 17, 2018, 11:03 PM IST
ಸುದೀಪ್​​ ಅಭಿನಯದ ಪೈಲ್ವಾನ್ ಪೋಸ್ಟರ್​ ರಿಲೀಸ್: ಕಿಚ್ಚನ ಬಾಡಿ ಫೇಕ್​​ ಎಂದು ಅಭಿಮಾನಿಗಳ ಬಿಸಿ ಚರ್ಚೆ!​
ಮತ್ತೆ ಕಿರಿತೆರೆಗೆ ಕಿಚ್ಚ ಸುದೀಪ್​
  • News18
  • Last Updated: November 17, 2018, 11:03 PM IST
  • Share this:
- ಆನಂದ ಸಾಲುಂಡಿ

ಬೆಂಗಳೂರು (ನ.17) : ಕಿಚ್ಚ  ಸುದೀಪ್  ಅಭಿನಯದ ಮುಂದಿನ ಚಿತ್ರ 'ಫೈಲ್ವಾನ್'  ಚಿತ್ರದ ನ್ಯೂ ಲುಕ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಒಂದೆಡೆ ನಟ ಸುದೀಪ್​ ಅಭಿಮಾನಿಗಳ ಪ್ರತಿಕ್ರಿಯೆಗೆ ಸಿನಿಮಾ ತಂಡ ಖಷಿಕೊಟ್ಟರೇ, ಮತ್ತೊಂದೆಡೆ ಕೆಲವರ ಕಾಮೇಟುಂಗಳಿಂದ ಬೇಸರ ತರಿಸುತ್ತಿದೆ.

ಕಿಚ್ಚ ಸುದೀಪ್ ನಟಿಸಿರುವ ಪೈಲ್ವಾನ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾದ ಸುದೀಪ್ ಲುಕ್​​​ಗೆ ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ. ಆದರೆ, ಇನ್ನೊಂದೆಡೆ ಪೈಲ್ವಾನ್ ಪೋಸ್ಟರಿನಲ್ಲಿರೋದು ಕಿಚ್ಚ ಸುದೀಪ್ ಬಾಡಿ ಅಲ್ಲ? ಎಂಬ ಬಿಸಿ ಬಿಸಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೀತಿದೆ.ಇನ್ನು ಯಾರದ್ದೋ ಬಾಡಿಗೆ ಸುದೀಪ್ ಫೇಸ್ ಹಾಕಿ‌ ಎಡಿಡ್ ಮಾಡಲಾಗಿದೆ ಎಂದು ಕೆಲ ಚಿತ್ರಪ್ರೇಮಿಗಳು ಕಾಮೇಂಟು ಮಾಡಿದ್ದಾರೆ. ಅಲ್ಲದೇ ನೈಸ್ ಎಡಿಟಿಂಗ್, ನೈಸ್ ಫೋಟೋಶಾಪ್ ಅಂತ ಕಮೆಂಟುಗಳ ಸುರಿಮಳೆಗೈದಿದ್ದಾರೆ ನೆಟ್ಟಿಗರು. ಇದೀಗ ಅಧಿಕೃತವಾಗಿ ಚಿತ್ರತಂಡವೇ ಬಿಡುಗಡೆ ಮಾಡಿರುವ ಪೋಸ್ಟರ್ ಫೇಕ್ ಆಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.ಚಿತ್ರದಲ್ಲಿ ತಮ್ಮ ನೆಚ್ಚಿನ ಫ್ಯಾನ್ಸ್​ಗಳ ಬಯಕೆ ಈಡೇರಿಸುವುದು ನನ್ನ ಮೊದಲ ಆದ್ಯತೆಯೆಂದು ಭಾವಿಸಿರುವ ಸುದೀಪ್​, ಇಂದು ತಮ್ಮ ಚಿತ್ರದ ನ್ಯೂ ಲುಕ್ ರಿಲೀಸ್ ಮಾಡಿದ್ದಾರೆ. ಈ ನ್ಯೂ ಲುಕ್​ನಲ್ಲಿ ಸುದೀಪ್ ಥೇಟ್​ ಕುಸ್ತಿ ಪಟುವಿನಂತೆ ಕಾಣಿಸಿಕೊಂಡಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. 

ಇದನ್ನು ಓದಿ :  ಹೆಚ್ಚಿದ ಕಿಚ್ಚನ ‘ಪೈಲ್ವಾನ್’ ಬಲ!; ಒಂದೇ ಬಾರಿಗೆ ಏಳು ಭಾಷೆಗಳಲ್ಲಿ ರಿಲೀಸ್!

ಇನ್ನೊಂದು ವಿಶೇಷ ಏನಂದ್ರೆ ಇದುವರೆಗೆ ಸಾಕಷ್ಟು ಬಿರುದುಗಳಿಂದ ಕರೆಯಿಸಿಕೊಳ್ಳುತ್ತಿರುವ ಸುದೀಪ್​ಗೆ ಈಗ ಚಿತ್ರತಂಡ ಬಾದ್​ ಷಾ ಎನ್ನುವ ಹೊಸ ಬಿರುದು ನೀಡಿದೆ.  ಹೆಬ್ಬುಲಿ ನಂತರ ಕೃಷ್ಣ ನಿರ್ದೇಶಿಸುತ್ತಿರುವ ಭಾರೀ ಬಜೆಟ್ ನ ಸಿನಿಮಾ ಪೈಲ್ವಾನ್ ಆಗಿದೆ. First published: November 17, 2018, 9:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading