ರವಿ ಬೋಪಣ್ಣ ಚಿತ್ರದಲ್ಲಿ ಕಿಚ್ಚ-ಕ್ರೇಜಿ ಜೋಡಿ: ಈ ಪಾತ್ರದಲ್ಲಿ ಕಾಣಿಸಲಿದ್ದಾರೆ ಅಭಿನಯ ಚಕ್ರವರ್ತಿ

Pailwaan kiccha sudeep: ಇಂತಹದೊಂದು ಪಾತ್ರವಿದೆ ಎಂದು ಸುದೀಪ್​ಗೆ ನಾನು ಕರೆ ಮಾಡಿ ತಿಳಿಸಿದ್ದೆ. ಆದರೆ ಒಂದೇ ಒಂದು ಮರುಪ್ರಶ್ನೆ ಯಾವಾಗ ಚಿತ್ರೀಕರಣಕ್ಕೆ ಬರಬೇಕು ಎಂದು ನನ್ನ ದೊಡ್ಮಗ ಕೇಳಿದ್ದರು ಎಂದು ಕಿಚ್ಚನ ಸ್ನೇಹವನ್ನು ರವಿಚಂದ್ರನ್ ಕೊಂಡಾಡಿದರು.

zahir | news18-kannada
Updated:August 18, 2019, 5:43 PM IST
ರವಿ ಬೋಪಣ್ಣ ಚಿತ್ರದಲ್ಲಿ ಕಿಚ್ಚ-ಕ್ರೇಜಿ ಜೋಡಿ: ಈ ಪಾತ್ರದಲ್ಲಿ ಕಾಣಿಸಲಿದ್ದಾರೆ ಅಭಿನಯ ಚಕ್ರವರ್ತಿ
Ravichandran-sudeep
  • Share this:
ಸ್ಯಾಂಡಲ್​ವುಡ್​ ಸಕ್ಸಸ್ ಜೋಡಿ ಕಿಚ್ಚ ಸುದೀಪ್ ಹಾಗೂ ರವಿಚಂದ್ರನ್ 'ರವಿ ಬೋಪಣ್ಣ' ಸಿನಿಮಾದಲ್ಲಿ ಜೊತೆಯಾಗಿರುವುದು ಗೊತ್ತಿರುವ ವಿಷಯ. ಇದೀಗ ಅಭಿನಯ ಚಕ್ರವರ್ತಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಕ್ರೇಜಿಸ್ಟಾರ್ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

'ಮಾಣಿಕ್ಯ' ಮತ್ತು 'ಹೆಬ್ಬುಲಿ'ಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಕಿಚ್ಚ-ಕ್ರೇಜಿ ಜೋಡಿ 'ರವಿ ಬೋಪಣ್ಣ'ದಲ್ಲಿ ಮತ್ತೆ ಒಂದಾಗಿರುವುದು ಚಿತ್ರದ ಮೇಲೆ ನಿರೀಕ್ಷೆ ಹುಟ್ಟುಹಾಕಿದೆ. ಆದರೀಗ ತಿಳಿದು ಬಂದ ಮಾಹಿತಿ ಪ್ರಕಾರ ಚಿತ್ರದಲ್ಲಿ ಸುದೀಪ್ ಹಾಗೂ ರವಿಮಾಮ ಯಾವುದೇ ಸೀನ್​ನಲ್ಲಿ ಒಟ್ಟಿಗೆ ಕಾಣಿಸುವುದಿಲ್ಲ.

ಬದಲಾಗಿ ಕಿಚ್ಚ ವಿಶೇಷ ಪಾತ್ರವೊಂದರ ಮೂಲಕ ಎಂಟ್ರಿ ಕೊಡಲಿದ್ದಾರೆ. ಚಿತ್ರತಂಡದ ಮೂಲಗಳಿಂದ ತಿಳಿದಂತೆ ಸುದೀಪ್ 'ರವಿ ಬೋಪಣ್ಣ' ಚಿತ್ರದಲ್ಲಿ ಲಾಯರ್ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಕಿಚ್ಚ ಕರಿಕೋಟಿನಲ್ಲಿ ಕಾಣಿಸಲಿದ್ದಾರೆ. ಈ ಇದುವೇ ಸಿನಿಮಾದ ಪ್ರಮುಖ ಘಟ್ಟವಾಗಿರಲಿದೆ.

'ಇಂತಹದೊಂದು ಪಾತ್ರವಿದೆ ಎಂದು ಸುದೀಪ್​ಗೆ ನಾನು ಕರೆ ಮಾಡಿ ತಿಳಿಸಿದ್ದೆ. ಆದರೆ ಒಂದೇ ಒಂದು ಮರುಪ್ರಶ್ನೆ ಯಾವಾಗ ಚಿತ್ರೀಕರಣಕ್ಕೆ ಬರಬೇಕು ಎಂದು ನನ್ನ ದೊಡ್ಮಗ ಕೇಳಿದ್ದರು' ಎಂದು ಕಿಚ್ಚನ ಸ್ನೇಹವನ್ನು ರವಿಚಂದ್ರನ್ ಕೊಂಡಾಡಿದರು.

'ರವಿ ಬೋಪಣ್ಣ' ಚಿತ್ರವನ್ನು ರವಿಚಂದ್ರನ್ ನಿರ್ದೇಶಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್​ನಂತಹ ಅದ್ಭುತ ನಟನಿಗೆ ಡೈರೆಕ್ಷನ್ ಮಾಡುವುದು ಖುಷಿ ಕೊಡುವ ವಿಚಾರ. ಆದರೆ ಏನು ಮಾಡೋದು ಅವರದು ವಿಶೇಷ ಪಾತ್ರ. ಅವರನ್ನು ಬಿಟ್ಟುಕೊಡಲೇಬೇಕು ಎಂದು ಅಭಿನಯ ಚಕ್ರವರ್ತಿಯ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದರು.

ದೇಹಾಂಗಗಳ​ ಮಾಫಿಯಾ ಜಾಲದ ಸುತ್ತ ಹೆಣೆಯಲಾಗಿರುವ ಈ ಚಿತ್ರದಲ್ಲಿ ರವಿಚಂದ್ರನ್ ಪೊಲೀಸ್ ಕಾನ್​ಸ್ಟೇಬಲ್ ಪಾತ್ರದಲ್ಲಿ ನಟಿಸಲಿದ್ದಾರೆ. ಮಲಯಾಳಂನಲ್ಲಿ ಸೂಪರ್ ಡೂಪರ್ ಆಗಿದ್ದ 'ಜೋಸೆಫ್' ಚಿತ್ರದ ರಿಮೇಕ್ ಇದಾಗಿದ್ದು, ಚಿತ್ರವನ್ನು ಕೊಡಗಿನ ಸುತ್ತ ಮುತ್ತ ಚಿತ್ರೀಕರಿಸಲು 'ರವಿ ಬೋಪಣ್ಣ' ಟೀಂ ಪ್ಲ್ಯಾನ್ ಹಾಕಿಕೊಂಡಿದೆ.

ಈ ಹಿಂದೆ ಮೋಹನ್ ಲಾಲ್ ಅಭಿನಯದ ಮಲಯಾಳಂನ 'ದೃಶ್ಯಂ' ರಿಮೇಕ್​ನಲ್ಲಿ ರವಿಚಂದ್ರನ್ ನಟಿಸಿದ್ದರು. ಈ ಚಿತ್ರವು ಸ್ಯಾಂಡಲ್​ವುಡ್​ ಬಾಕ್ಸಾಫೀಸ್​ನಲ್ಲೂ ಸದ್ದು ಮಾಡಿತ್ತು. ಹೀಗಾಗಿ ಮತ್ತೊಂದು ಸಸ್ಪೆನ್ಸ್ ಕಥೆಯೊಂದಿಗೆ ಬಾಕ್ಸಾಫೀಸ್​ ಮೇಲೆ ಕ್ರೇಜಿಸ್ಟಾರ್ ಕಣ್ಣಿಟ್ಟಿದ್ದಾರೆ.
First published: August 18, 2019, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading