ಪೈಲ್ವಾನ್ ಆಡಿಯೋ ಬಿಡುಗಡೆಗೆ ಬ್ರೇಕ್: ಕ್ಷಮೆಯೊಂದಿಗೆ ಮಿಡಿದ ಕಿಚ್ಚನ ಮನ

pailwaan: ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕರುನಾಡ ಯುವರತ್ನ ಪುನೀತ್ ರಾಜ್ ಕುಮಾರ್ ಸಹ ಆಗಮಿಸುತ್ತಿದ್ದರು.

zahir | news18-kannada
Updated:August 8, 2019, 7:10 PM IST
ಪೈಲ್ವಾನ್ ಆಡಿಯೋ ಬಿಡುಗಡೆಗೆ ಬ್ರೇಕ್: ಕ್ಷಮೆಯೊಂದಿಗೆ ಮಿಡಿದ ಕಿಚ್ಚನ ಮನ
Kiccha sudeep
zahir | news18-kannada
Updated: August 8, 2019, 7:10 PM IST
ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅದರಲ್ಲೂ ಉತ್ತರ ಕರ್ನಾಟಕ ವರುಣನ ಆರ್ಭಟಕ್ಕೆ ಸಂಪೂರ್ಣ ನಲುಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್​ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ 'ಪೈಲ್ವಾನ್' ಚಿತ್ರದ ಆಡಿಯೋ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಇಂದು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾತನಾಡಿದ ಅಭಿನಯ ಚಕ್ರವರ್ತಿ, ಎಲ್ಲರೂ ನನ್ನ ಕ್ಷಮಿಸಬೇಕು. ಆಡಿಯೋ ಬಿಡುಗಡೆಯನ್ನು ನಾವು ಮುಂದೂಡಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮಕ್ಕಾಗಿ ನೀವು ಹಾಕಬೇಕಿದ್ದ ಎನರ್ಜಿಯನ್ನು ನೆರೆ ಸಂತ್ರಸ್ತರ ನೆರವಿಗೆ ಬಳಸಬೇಕೆಂದು ಮನವಿ ಮಾಡಿದ್ದಾರೆ.

ಇದು ಸಂಭ್ರಮದ ಸಮಯವಲ್ಲ ಎಂಬುದು ಎಲ್ಲರಿಗೂ ಗೊತ್ತು. ಚಿತ್ರದುರ್ಗದ ಸ್ನೇಹಿತರು ನನ್ನನ್ನು ಕ್ಷಮಿಸಿ. ಎಲ್ಲರೂ ಕಾರ್ಯಕ್ರಮದ ಪಾಸ್ ಹಾಗೂ ಇತೆರೆ ಕೆಲಸಗಳಿಗಾಗಿ ಶ್ರಮವಹಿಸಿದ್ದೀರಿ. ಆದರೆ ಈ ಒಂದು ವಿಚಾರಕ್ಕೆ ನನ್ನನ್ನು ಕ್ಷಮಿಸಿ. ಆಡಿಯೋ ಕಾರ್ಯಕ್ರಮವನ್ನು ರದ್ದು ಪಡಿಸಲಾಗುತ್ತಿಲ್ಲ. ಮುಂದೂಡಲಾಗುತ್ತಿದೆ ಎಲ್ಲರೂ ಸಹಕರಿಸಬೇಕೆಂದು ಪೈಲ್ವಾನ್ ನಟ ಕೇಳಿಕೊಂಡಿದ್ದಾರೆ.

ಎಲ್ಲವೂ ಅಂದು ಕೊಂಡಂತೆ ನಡೆದಿದ್ದರೆ ನಾಳೆ (ಆ.9) ಪಾಳೆಗಾರರ ನಾಡಿನಲ್ಲಿ 'ಪೈಲ್ವಾನ್' ಚಿತ್ರದ ಅದ್ದೂರಿ ಆಡಿಯೋ ಕಾರ್ಯಕ್ರಮ ನಡೆಯಬೇಕಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕರುನಾಡ 'ಯುವರತ್ನ' ಪುನೀತ್ ರಾಜ್ ಕುಮಾರ್ ಸಹ ಆಗಮಿಸುತ್ತಿದ್ದರು. ಇದೀಗ ಧ್ವನಿ ಸುರಳಿ ಬಿಡುಗಡೆಯನ್ನು ಮುಂದೂಡಲಾಗಿದ್ದು, ಪ್ರವಾಹ ಪರಿಸ್ಥಿತಿ ಹತೋಟಿಗೆ ಬಂದ ಬಳಿಕ ಕಾರ್ಯಕ್ರಮವನ್ನು ಆಯೋಜಿಸಲು ಚಿತ್ರತಂಡ ಯೋಜನೆ ಹಾಕಿದೆ.

ಈಗಾಗಲೇ ಧಾರಾಕಾರ ಮಳೆಯಿಂದ ನಲುಗಿರುವ ಉತ್ತರ ಕರ್ನಾಟಕದ ಜನರ ಸಹಾಯಕ್ಕೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಮುಂದೆ ಬಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಉತ್ತರ ಕರ್ನಾಟಕ ಸಂತ್ರಸ್ತರಿಗಾಗಿ 5 ಲಕ್ಷ ರೂ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.ಇನ್ನು ಚಾಲೆಂಜಿಂಗ್‍ಸ್ಟಾರ್ ದರ್ಶ ನ್, ಶಿವಣ್ಣ, ಸುದೀಪ್​, ಜಗ್ಗೇಶ್, ಗಣೇಶ್, ಪ್ರಜ್ವಲ್ ದೇವರಾಜ್, ರಶ್ಮಿಕಾ ಮಂದಣ್ಣ, ಅಕುಲ್ ಬಾಲಾಜಿ, ಶ್ರೀಮುರಳಿ ಸೇರಿದಂತೆ ಹಲವು ನಟರು ಟ್ವಿಟ್ಟರ್ ಮೂಲಕ ಸಂತ್ರಸ್ತರಿಗಾಗಿ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...