ಕಿಚ್ಚೋತ್ಸವಕ್ಕೆ ಭರ್ಜರಿ ಗಿಫ್ಟ್ ಮೂಲಕ ಕಿಚ್ಚು ಹಚ್ಚಿದ​ ಕಿಚ್ಚ ಸುದೀಪ್

news18
Updated:September 2, 2018, 12:07 PM IST
ಕಿಚ್ಚೋತ್ಸವಕ್ಕೆ ಭರ್ಜರಿ ಗಿಫ್ಟ್ ಮೂಲಕ ಕಿಚ್ಚು ಹಚ್ಚಿದ​ ಕಿಚ್ಚ ಸುದೀಪ್
twitter:Kiccha Sudeep 24x7
news18
Updated: September 2, 2018, 12:07 PM IST
-ನ್ಯೂಸ್ 18 ಕನ್ನಡ

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರಿಗೆ ಇಂದು 45ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟ ಹುಟ್ಟುಹಬ್ಬವನ್ನು ಆಚರಿಸಲು ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಕರುನಾಡ ಕಿಚ್ಚನ ಮನೆಯ ಮುಂದೆ ಜಮಾಯಿಸಿದ್ದರು. ಯಾವುದೇ ಆಡಂಬರವಿಲ್ಲದೆ ಸರಳವಾಗಿ ಜನ್ಮದಿನವನ್ನು ಆಚರಿಸಬೇಕೆಂದು ಕೋರಿಕೊಂಡಿದ್ದ ಕಿಚ್ಚನ ಮಾತನ್ನು ಅಭಿಮಾನಿಗಳು ಚಾಚು ತಪ್ಪದೆ ಪಾಲಿಸಿದ್ದರು.

ಅಭಿಮಾನಿ ದೇವರುಗಳಿಂದ ಯಾವುದೇ ಗಿಫ್ಟ್​ ಪಡೆಯಲು ಇಚ್ಛಿಸದ ಕಿಚ್ಚ ಸುದೀಪ್ ಮಾತ್ರ ತಮ್ಮ ಫ್ಯಾನ್ಸ್​ಗಳಿಗೆ ಭರ್ಜರಿ ಗಿಫ್ಟ್​ಗಳನ್ನೇ ನೀಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಸುದೀಪ್ ಅಭಿನಯಿಸಿರುವ 3 ಚಿತ್ರಗಳ ಟೀಸರ್​ಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲೇ ಕಿಚ್ಚೋತ್ಸವ ಸಂಭ್ರಮದಲ್ಲಿದ್ದ ಸುದೀಪ್ ಅಭಿಮಾನಿಗಳ ಖುಷಿ ಇದರಿಂದ ಇಮ್ಮಡಿಗೊಂಡಿದೆ.

'ಸೈರಾ ನರಸಿಂಹ ರೆಡ್ಡಿ'

ತೆಲುಗಿನ ಐತಿಹಾಸಿಕ ಚಿತ್ರವಾದ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಸುದೀಪ್ ಫಸ್ಟ್​ ಲುಕ್​ನ್ನು ಚಿತ್ರತಂಡ ನಿನ್ನೆಯೇ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದರೆ, ಇಂದು ಚಿತ್ರದ ಮೋಷನ್​ ಟೀಸರನ್ನು ಬಿಡುಗಡೆ ಮಾಡಲಾಯಿತು. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಕಿಚ್ಚ ಚಿರಂಜೀವಿಗೆ ನೆರವಾಗುವ ರಾಜನ ಪಾತ್ರದಲ್ಲಿ ಅಭಿನಯಿಸಿದ್ದಾರೆ.


'ಪೈಲ್ವಾನ್'
Loading...

ಹಾಗೆಯೇ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತಿದ್ದ 'ಪೈಲ್ವಾನ್' ಸಿನಿಮಾದ ಟೀಸರನ್ನು ಕೂಡ ಕಿಚ್ಚನ ಬರ್ತ್​ಡೆ ಗೆ ರಿಲೀಸ್ ಮಾಡಲಾಗಿದೆ. 'ಹೆಬ್ಬುಲಿ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಕಮಾಲ್ ಮಾಡಿದ್ದ ನಿರ್ದೇಶಕ ಕೃಷ್ಣ ಮತ್ತು ಸುದೀಪ್ 'ಪೈಲ್ವಾನ್​'ನಲ್ಲೂ ಒಂದಾಗಿರುವುದು ನಿರೀಕ್ಷೆಗೆ ಕಾರಣವಾಗಿತ್ತು. ಆ ನಿರೀಕ್ಷೆಯನ್ನು ಉಳಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿರುವುದು ಟೀಸರ್​ನಲ್ಲೇ ಗೊತ್ತಾಗಿದೆ. ಚಿತ್ರದಲ್ಲಿ ಬಾಕ್ಸರ್ ಅವತಾರದಲ್ಲಿ ಕಾಣಿಸಲಿರುವ ಸುದೀಪ್ ಅವರು ಈ ಟೀಸರ್​ನಲ್ಲಿ ಮಸಲ್​ಮ್ಯಾನ್​ ಗೆಟಪ್​ನಲ್ಲಿರುವುದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಖಡಕ್ ಲುಕ್​ ಮೂಲಕ 'ಪೈಲ್ವಾನ್'​ನಲ್ಲಿ ಮರಳಿರುವ ಕಿಚ್ಚನ ಈ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.


'ಕೋಟಿಗೊಬ್ಬ-3'

ಸಾಹಸ ಸಿಂಹನ ಹೆಜ್ಜೆಯನ್ನು ಹಿಂಬಾಲಿಸುತ್ತಿರುವ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಚಿತ್ರದ ಟೀಸರ್ ಕೂಡ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಳಿಸಲಾಗಿದೆ. 'ಕೋಟಿಗೊಬ್ಬ-2' ಚಿತ್ರದ ಮೂಲಕ ಸಿಂಹ ಘರ್ಜನೆ ಪ್ರಾರಂಭಿಸಿದ್ದ ಕಿಚ್ಚ 'ಕೋಟಿಗೊಬ್ಬ- 3'ನಲ್ಲಿ ಅಭಿಮಾನಿಗಳ ನಿರೀಕ್ಷೆಯನ್ನು ಮೀರಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಹಳೆಯ ಬೇರು ಹೊಸ ಚಿಗುರು ಎನ್ನುವಂತೆ 'ಕೋಟಿಗೊಬ್ಬ-2' ಸಿನಿಮಾದ ಸಂಗೀತಕ್ಕೆ ಹೊಸ ಟಚ್ ನೀಡಿರುವ ಅರ್ಜುನ್ ಜನ್ಯ ಎಲ್ಲರನ್ನು ಮೋಡಿ ಮಾಡಿದ್ದಾರೆ. ಇನ್ನೂ ಈ ಸಿನಿಮಾವನ್ನು ನಿರ್ದೇಶಕ ಶಿವಕಾರ್ತಿಕ್ ಯಾವುದೇ ಬಿಗ್ ಬಜೆಟ್ ಚಿತ್ರಗಳಿಗೆ ಕಡಿಮೆ ಇಲ್ಲವೆಂಬಂತೆ ಚಿತ್ರಿಸಿರುವುದು ಪ್ರತಿ ಫ್ರೇಮ್​ನಲ್ಲೂ ಕಾಣ ಸಿಗುತ್ತದೆ. ಈಗಾಗಲೇ 'ಕೋಟಿಗೊಬ್ಬ-3' ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿಕೊಂಡಿದೆ. ಈ ಟೀಸರ್​ ಮೂಲಕ ಕಿಚ್ಚ ಸುದೀಪ್ 'ಕೋಟಿಗೊಬ್ಬ-3'ನಲ್ಲಿ ಕಿಲಾಡಿ ಕಿಚ್ಚನ ಅವತಾರದಲ್ಲಿ ಅಬ್ಬರಿಸಲಿದ್ದಾರೆ ಎನ್ನುವುದು ಪಕ್ಕಾ ಆದಂತಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ