ಪೈಲ್ವಾನ್ ಅಣ್ಣನಿಗೆ ಕಿಚ್ಚ ಸುದೀಪ್ ಕಡೆಯಿಂದ ಪ್ರೀತಿಯ ವಿಶಸ್

suniel shetty birthday: ಸ್ಯಾಂಡಲ್​ವುಡ್-ಬಾಲಿವುಡ್ ನಟರುಗಳ ಸಮಾಗಮದೊಂದಿಗೆ ಚಿತ್ರೀಕರಣಗೊಂಡಿರುವ ಪೈಲ್ವಾನ್ ಸಿನಿಮಾ ಮುಂದಿನ ತಿಂಗಳು 12 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದೊಂದಿಗೆ ಸುನೀಲ್ ಶೆಟ್ಟಿ ಕನ್ನಡದಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

zahir | news18-kannada
Updated:August 11, 2019, 3:17 PM IST
ಪೈಲ್ವಾನ್ ಅಣ್ಣನಿಗೆ ಕಿಚ್ಚ ಸುದೀಪ್ ಕಡೆಯಿಂದ ಪ್ರೀತಿಯ ವಿಶಸ್
suniel shetty-kiccha
  • Share this:
'ಪೈಲ್ವಾನ್' ಚಿತ್ರದ ಮೂಲಕ ಕನ್ನಡಿಗ ಸುನೀಲ್ ಶೆಟ್ಟಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿರುವುದು ಗೊತ್ತೇ ಇದೆ. ಕುಸ್ತಿ ಮಸ್ತಿ ಚಿತ್ರಕಥೆ ಹೊಂದಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಸರಿಯಾದ ಸಮಾನವಾದ ಪಾತ್ರದಲ್ಲಿ ಶೆಟ್ರು ಕಾಣಿಸಿಕೊಳ್ಳಲಿದ್ದಾರೆ.

ಅಭಿನಯ ಚಕ್ರವರ್ತಿಯ ಆಪ್ತರಲ್ಲಿ ಒಬ್ಬರಾಗಿರುವ ಸುನೀಲ್ ಶೆಟ್ಟಿ ಅವರು ಇಂದು 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಣ್ಣನ ಬರ್ತ್​ಡೆಗೆ ಪ್ರೀತಿಯ ತಮ್ಮನಿಂದ ವಿಶೇಷ ಶುಭಾಶಯ ರವಾನೆಯಾಗಿದೆ.

ತಮ್ಮ ಟ್ವಿಟರ್​ ಖಾತೆ ಬಾಲಿವುಡ್ ಅಣ್ಣನಿಗೆ ವಿಶ್ ಮಾಡಿರುವ ಕಿಚ್ಚ 'ನಿಮ್ಮನ್ನು ಭೇಟಿಯಾಗಿರುವುದು, ನಿಮ್ಮ ಪರಿಚಯ, ನಿಮ್ಮ ಜತೆಗೆ ಕೆಲಸ ಮಾಡಿರುವುದಕ್ಕೆ ನನಗೆ ತುಂಬಾ ಖುಷಿಯಿದೆ. ನೀವೊಬ್ಬ ನಿಸ್ವಾರ್ಥ ವ್ಯಕ್ತಿ. ನಿಮ್ಮ ಜೀವನದಲ್ಲಿ ನನಗೂ ಸ್ಥಾನ ನೀಡಿರುವುದಕ್ಕೆ ಧನ್ಯವಾದಗಳು. ನಿಮಗೆ ದೀರ್ಘಾಯುಷ್ಯ ಆರೋಗ್ಯ ಸಿಗಲಿ. ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ ಎಂದು ಹಾರೈಸಿದ್ದಾರೆ.
ಸ್ಯಾಂಡಲ್​ವುಡ್-ಬಾಲಿವುಡ್ ನಟರುಗಳ ಸಮಾಗಮದೊಂದಿಗೆ ಚಿತ್ರೀಕರಣಗೊಂಡಿರುವ 'ಪೈಲ್ವಾನ್' ಸಿನಿಮಾ ಮುಂದಿನ ತಿಂಗಳು 12 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದೊಂದಿಗೆ ಸುನೀಲ್ ಶೆಟ್ಟಿ ಕನ್ನಡದಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಸುನೀಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ ಸಹ ಬಾಲಿವುಡ್​ಗೆ ಪಾದರ್ಪಣೆ ಮಾಡಿದ್ದು, ಈ ವೇಳೆ ಸಹ ಕಿಚ್ಚ ಶುಭಾಶಯ ತಿಳಿಸಿದ್ದರು.

First published:August 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ