2 ದಿನ ಮೊದಲೇ ಗಣಿ ಹುಟ್ಟುಹಬ್ಬ ಆಚರಿಸಿದ ಕಿಚ್ಚ!; ಗೋಲ್ಡನ್ ಸ್ಟಾರ್​​​​ಗೆ ಬಾದ್​​​​ಶಾ ಬಿಂದಾಸ್ ವಿಶ್!

ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರೂ ಒಳ್ಳೆಯ ಫ್ರೆಂಡ್ಸ್, ಅವರ ಸಿನಿಮಾಗೆ ಇವರು, ಇವರ ಸಿನಿಮಾಗೆ ಅವರು ಸಪೋರ್ಟ್ ಮಾಡುವುದು ಕೂಡ ಕಾಮನ್. ಇನ್ನು ಇದೇ ಜುಲೈ 2ರಂದು ಸ್ಯಾಂಡಲ್​​ವುಡ್​​ ಗೋಲ್ಡನ್ ಸ್ಟಾರ್ ಗಣೇಶ್ 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅವರ ನಿವಾಸಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಖುದ್ದು ಗಣಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಯಾರೂ ಮನೆ ಬಳಿ ಬರಬೇಡಿ ಎಂದು ಓಪನ್ ಲೆಟರ್ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು.

news18-kannada
Updated:June 30, 2020, 6:05 PM IST
2 ದಿನ ಮೊದಲೇ ಗಣಿ ಹುಟ್ಟುಹಬ್ಬ ಆಚರಿಸಿದ ಕಿಚ್ಚ!; ಗೋಲ್ಡನ್ ಸ್ಟಾರ್​​​​ಗೆ ಬಾದ್​​​​ಶಾ ಬಿಂದಾಸ್ ವಿಶ್!
ಕಿಚ್ಚ ಸುದೀಪ್​- ಗಣೇಶ್​
  • Share this:
ಹಿಂದಷ್ಟೇ ನಟ​ ಗಣೇಶ್​​ ಮನವಿ ಮಾಡಿಕೊಂಡಿದ್ದರು.ಇದರ ನಡುವೆಯೇ ಸ್ಯಾಂಡಲ್​​ವುಡ್ ಬಾದ್​​​ಶಾ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್​​​ಗೊಂದು ಸಡನ್ ಸರ್ಪ್ರೈಸ್ ಕೊಟ್ಟಿದ್ದಾರೆ. ಎರಡು ದಿನ ಮುನ್ನವೇ ಅರ್ಥಾತ್ ಇವತ್ತೇ ಗಣಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಹಾಗಂತ ಇದು ಅಡ್ವಾನ್ಸ್ ವಿಶ್ ಅಲ್ಲ, ಬದಲಾಗಿ ಕಿಚ್ಚ ಡೇಟ್ ಮಿಸ್ ಮಾಡಿಕೊಂಡು ಕೋರಿರುವ ಶುಭಾಶಯ.

ಹೌದು, ಹಾಗಂತ ಖುದ್ದು ಕಿಚ್ಚ ಸುದೀಪ್​​ ಟ್ವಿಟರ್​​ನಲ್ಲಿ ಟ್ವೀಟಿಸಿದ್ದಾರೆ. ನಿನ್ನ ಹುಟ್ಟುಹಬ್ಬದ ದಿನಾಂಕದ ಬಗ್ಗೆ ಗೊಂದಲವಿದ್ದ ಕಾರಣ ಇಂದೇ ಶುಭಾಶಯ ಹೇಳಿಬಿಟ್ಟೆ. ಇದನ್ನು ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿಬಿಡು ಗೆಳೆಯ. ವಿಶ್ ಅಂತೂ ಮಾಡಿದ್ದಾಗಿದೆ. ಹುಟ್ಟುಹಬ್ಬವನ್ನು ತುಂಬ ಸರಳವಾಗಿ ಆಚರಿಸಲು ನಿರ್ಧರಿಸಿರುವುದು ತುಂಬಾ ಒಳ್ಳೆಯ ನಿರ್ಧಾರ ಗೆಳೆಯ, ಎಂದು ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್​​​​ಗೆ ಎರಡು ದಿನ ಮುಂಚೆಯೇ ಹುಟ್ಟುಹಬ್ಬದ ಶುಭಾಶಯ ಕೋರಿದ ಬಗ್ಗೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರೂ ಒಳ್ಳೆಯ ಫ್ರೆಂಡ್ಸ್, ಅವರ ಸಿನಿಮಾಗೆ ಇವರು, ಇವರ ಸಿನಿಮಾಗೆ ಅವರು ಸಪೋರ್ಟ್ ಮಾಡುವುದು ಕೂಡ ಕಾಮನ್. ಇನ್ನು ಇದೇ ಜುಲೈ 2ರಂದು ಸ್ಯಾಂಡಲ್​​ವುಡ್​​ ಗೋಲ್ಡನ್ ಸ್ಟಾರ್ ಗಣೇಶ್ 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅವರ ನಿವಾಸಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಖುದ್ದು ಗಣಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಯಾರೂ ಮನೆ ಬಳಿ ಬರಬೇಡಿ ಎಂದು ಓಪನ್ ಲೆಟರ್ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು.
ದಿ ಸ್ಟೋರಿ ಆಫ್ ರಾಯಗಢ

ಈ ವರ್ಷ ಎಂದಿನಂತಿಲ್ಲ. ಕೊರೋನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ, ಬಡಜನರು ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟ ಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹುಟ್ಟುಹಬ್ಬದ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ. ಹೊರ ಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು, ಅದೇ ದಿನ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ. ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೇ ನನಗೆ ಶುಭಕೋರಿ ಆಶೀರ್ವದಿಸಿ… ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್.

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೂ 2 ದಿನ ಮುನ್ನವೇ ’ದಿ ಸ್ಟೋರಿ ಆಫ್ ರಾಯಗಢ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಹಾಗೇ ಗಾಳಿಪಟ- 2 ಹಾಗೂ ಸಖತ್ ಸಿನಿಮಾ ಟೀಂಗಳಿಂದಲೂ ಭರ್ಜರಿ ಉಡುಗೊರೆಗಳು ದೊರೆಯುವ ನಿರೀಕ್ಷೆಯಿದೆ.

Chingari: ಟಿಕ್​ಟಾಕ್​ ಬ್ಯಾನ್ ಆದರೇನಂತೆ; ದೇಶಿಯ ಚಿಂಗಾರಿ ಮತ್ತು ಮಿತ್ರೋ ಆ್ಯಪ್​​ ಇದೆಯಲ್ಲ!

First published: June 30, 2020, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading