ಕಿಚ್ಚ ಸುದೀಪ್, (Kiccha Sudeep) ಒಂದೆಲ್ಲಾ ಒಂದು ವಿಚಾರವಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ (Pan India) ಸಿನಿಮಾ ವಿಕ್ರಾಂತ್ ರೋಣ (Vikranth Rona) ಬಿಡುಗಡೆಗೆ ಸಜ್ಜಾಗಿದೆ. ಅದರ ಲಿರಿಕಲ್ ಹಾಡು (Lyrical Song) ಧೂಳೆಬ್ಬಿಸಿದೆ. ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನ (Sandalwood) ದೊಡ್ಡ ತಾರೆಗಳಲ್ಲಿ ಒಬ್ಬರು. ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗೆ ವಿಕ್ರಾಂತ್ ರೋಣಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಹಿಂದಿಯಲ್ಲಿ ಸಹ ಈ ಸಿನಿಮಾ ಬಿಡುಗಡೆಯಾಗಲಿದ್ದು, ಸಲ್ಮಾನ್ ಖಾನ್ (Salman Khan) ಉತ್ತರ ಭಾರತದಲ್ಲಿ ಆ ಚಿತ್ರದ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ. ಇದೀಗ ಕಿಚ್ಚ ಸುದೀಪ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಬಾಲಿವುಡ್ ತಾರೆ ಕಾಜೋಲ್ ವಿಚಾರವಾಗಿ.
ಕಾಜೋಲ್ ಜೊತೆ ಕೆಲಸ ಮಾಡಬೇಕಂತೆ ಕಿಚ್ಚ
ಹೌದು, ಕಿಚ್ಚ ಸುದೀಪ್ಗೆ ಕಾಜೋಲ್ ಜೊತೆ ಕೆಲಸ ಮಾಡುವ ಆಸೆಯಂತೆ. ಕಾಜೋಲ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಅವರು ಸಿನಿರಂಗದಲ್ಲಿ ಕೆಲಸ ಮಾಡಿದ ಅಷ್ಟೂ ವರ್ಷಗಳಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆಕೆಗೆ ಅಪಾರ ನಿಷ್ಠಾವಂತ ಅಭಿಮಾನಿಗಳಿದ್ದಾರೆ ಎಂದರೆ ತಪ್ಪಲ್ಲ. ಇದಲ್ಲದೆ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಎಂದರೆ ಕಾಜಾಲ್ ಎನ್ನುವ ಮಟ್ಟಿಗೆ ಫೇಮಸ್ ಆಗಿರುವ ಈ ನಟಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಅವರು ಯಾವಾಗಲೂ ತಮ್ಮ ಜೀವನದ ಬಗ್ಗೆ ವಿಚಾರಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಸುದ್ದಿ ಏನೆಂದರೆ ಕಾಜೋಲ್ ಪತಿ ಅಜಯ್ ದೇವಗನ್ ಜೊತೆ ಟ್ವೀಟ್ ವಾರ್ ಆದರು ಸಹ ಕಿಚ್ಚ, ಕಾಜೋಲ್ ಜೊತೆ ಆಕ್ಟ್ ಮಾಡುವ ಆಸೆಯನ್ನು ಬಿಟ್ಟಿಲ್ಲವಂತೆ.
ಕಿಚ್ಚ ಸುದೀಪ್ ಅವರು ರಾಷ್ಟ್ರವ್ಯಾಪಿ ಭಾಷಾ ಚರ್ಚೆಯನ್ನು ಪ್ರಾರಂಭಿಸಿದ್ದರು. ಅದು ಇಂಟರ್ನೆಟ್ ಬಿರುಗಾಳಿ ಸೃಷ್ಟಿಸಿತ್ತು. ಭಾಷಾ ಚರ್ಚೆಯ ನಂತರ ಅದು ಶೀಘ್ರದಲ್ಲೇ ಹಿಂದಿ ಮತ್ತು ದಕ್ಷಿಣ ಚಲನಚಿತ್ರಗಳತ್ತ ತಿರುಗಿತ್ತು. ಆ ಚರ್ಚೆಗೆ ಕಿಚ್ಚ ಸುದೀಪ್ ಅವರಿಗೆ ಅಜಯ್ ದೇವಗನ್ ಟ್ವೀಟ್ ಮಾಡಿದ್ದರು. ಒಂದು ರೀತಿಯ ಟ್ವಿಟ್ಟರ್ ವಾರ್ ನಡೆದಿತ್ತು. ನಂತರ, ಇಬ್ಬರೂ ಸಮಾಧಾನ ಮಾಡಿಕೊಂಡು ಇಡೀ ವಿವಾದವನ್ನು ತಣ್ಣ ಮಾಡಲಾಗಿತ್ತು.
ಇದನ್ನೂ ಓದಿ: Trivikrama ಸಿನಿಮಾ ನೋಡಿದ್ರೆ ಪರೀಕ್ಷೆಯಲ್ಲಿ 5 ಗ್ರೇಸ್ ಮಾರ್ಕ್ಸ್, ಬೆಳಗಾವಿ ಕಾಲೇಜಿನಲ್ಲಿ ಹೊಸಾ ಆಫರ್
ಇತ್ತೀಚೆಗೆ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್, ಅಜಯ್ ದೇವಗನ್ ಅವರ ಪತ್ನಿ ಕಾಜೋಲ್ ಅವರೊಂದಿಗೆ ಕೆಲಸ ಮಾಡುವ ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ. ನನ್ನ ಮತ್ತು ಅಜಯ್ ಅವರ ನಡುವೆ ಟ್ವೀಟ್ ಔಆರ್ ನಡೆದಿರಬಹುದು ಆದರೆ, ನಾನು ಕಾಜೋಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಂದರ್ಶನದಲ್ಲಿ ಆಸೆ ವ್ಯಕ್ತಪಡಿಸಿದ ಕಿಚ್ಚ
ಅವರ ಸಂದರ್ಶನದಲ್ಲಿ ಅವರು ಮಾಡಿದ್ದ, ಟ್ವೀಟ್‌ಗಳು ವೈರಲ್ ಆದ ಮೇಲೆ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ನಡೆಸಿದ ಚಾಟ್ ಅನ್ನು ನೆನಪಿಸಿಕೊಂಡಿದ್ದಾರೆ. ಅಜಯ್ ದೇವಗನ್‌ಗೆ ಪ್ರತಿಕ್ರಿಯಿಸಿದ ಸುದೀಪ್ ಘನತೆಯನ್ನು ಕಾಪಾಡಿಕೊಂಡ ರೀತಿಯನ್ನು ನಿರ್ದೇಶಕರು ಶ್ಲಾಘಿಸಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧರಣಿ ಮಂಡಲದೊಳಗೆ ಐಶಾನಿ ಶೆಟ್ಟಿ, ಫುಲ್ ಕ್ರೇಜ್ ಹುಟ್ಟಿಸಿದೆ ಸಿನಿಮಾದ ಟೀಸರ್
ಅಲ್ಲದೇ ಸುದೀಪ್, ವರ್ಮಾ ಅವರಿಗೆ “ಇಲ್ಲ ಸರ್, ನಾನು ಕಾಜೋಲ್ ಮೇಡಮ್ ಅವರೊಂದಿಗೆ ಕೆಲಸ ಮಾಡುವ ಈ ದೊಡ್ಡ ಕನಸನ್ನು ಹೊಂದಿದ್ದೇನೆ. ಅದು ಎಂದಾದರೂ ಆಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎನ್ನುವ ಮೂಲಕ ಕಾಜೋಲ್ ಜೊತೆ ಕೆಲಸ ಮಾಡುವ ನನ್ನ ಆಸೆಯನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ