Vikrant Rona: ಪತಿಯ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟ ಪತ್ನಿ, ವಿಕ್ರಾಂತ್ ರೋಣ ಬಗ್ಗೆ ಪ್ರಿಯಾ ಸುದೀಪ್ ಮೆಚ್ಚುಗೆ

Priya Sudeep: ನಮ್ಮ ಕನ್ನಡದಲ್ಲಿ ಇನ್ನೂ ಒಳ್ಳೆಯ ಸಿನಿಮಾಗಳು ಬರಲಿ. ಇದನ್ನ ತ್ರಿಡಿಯಲ್ಲೇ ನೋಡಬೇಕು. ಇನ್ನು ಈ ಸಿನಿಮಾದಲ್ಲಿ ಅಪ್ಪ ಮಗಳ ಸಂಬಂಧ ತುಂಬ ಖುಷಿ ಕೊಟ್ಟ ಸೀನ್ ಎಂದು ಸಿನಿಮಾದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಪ್ರಿಯಾ ಸುದೀಪ್

ಪ್ರಿಯಾ ಸುದೀಪ್

  • Share this:
ವಿಕ್ರಾಂತ್ ರೋಣ (Vikrant Rona), ಈ ಹೆಸರು ಬಹಳ ದಿನಗಳಿಂದ ಸ್ಯಾಂಡಲ್​ವುಡ್​ (sandalwood) ಮಾತ್ರವಲ್ಲದೇ ಭಾರತ ಸಿನಿಮಾರಂಗದಲ್ಲಿ (Indian Film Industry) ಕೇಳಿ ಬಂದಿರುವ ಹೆಸರು. ಕಿಚ್ಚ ಸುದೀಪ್ (Kiccha Sudeep) ಅಭಿನಯದ ಈ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅಭಿಮಾನಿಗಳು ಎಲ್ಲೆಡೆ ಸಿನಿಮಾ ನೋಡಿದ್ದು, ಕಿಚ್ಚನ ನಟನೆಗೆ ಜೈಕಾರ ಹಾಕಿದ್ದಾರೆ. ಅಲ್ಲದೆ, ಬೆಂಗಳೂರಿನ ಊರ್ವಶಿ ಥಿಯೇಟರ್​ನಲ್ಲಿ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ (Priya Sudeep), ನಟಿ ನೀತಾ ಅಶೋಕ್ ಹಾಗೂ ನಟ ನಿರೂಪ್ ಭಂಡಾರಿ ಸಿನಿಮಾ ನೋಡಿದ್ದು, ಶೋ ನಂತರ ಮಾಧ್ಯಮಗಳ ಜೊತೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಗಂಡನಿಗೆ ಫುಲ್​  ಮಾರ್ಕ್ಸ್ ಕೊಟ್ಟ ಪ್ರಿಯಾ ಸುದೀಪ್

ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾ ಸುದೀಪ್, ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಾನು ಪ್ರತಿ ಸಿನಿಮಾವನ್ನ ಪ್ಯಾನ್ಸ್ ಜೊತೆಗೆ ನೋಡಿರೋದು.ಮೊದಲ ದಿನ, ಮೊದಲ ಶೋ ನೋಡ್ತಿನಿ. ಪ್ರತಿ ಸೀನ್ ತುಂಬಾ ಚೆನ್ನಾಗಿ ಬಂದಿದೆ. ಸುದೀಪ್ ಪ್ರತಿ ಸಿನಿಮಾದಲ್ಲೂ ನನ್ನ ಸರ್ಪ್ರೈಸ್ ಮಾಡಿದ್ದಾರೆ ಎಂದು ಗಂಡನ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಲ್ಲದೇ, ಅನೂಪ್ ಭಂಡಾರಿಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು. ಈ ಸಿನಿಮಾ ತುಂಬ ಡಿಫರೆಂಟ್ ಆಗಿದೆ. ಎಲ್ಲರೂ ನೋಡಬೇಕು. ನಾನು ಒಳಗಡೆ ಕಣ್ಣೀರು ಹಾಕಿದ್ದೀನಿ. ಹಾಗೆಯೇ ಅವರು ನೋಡೊಕೆ ತುಂಬ ಚೆನ್ನಾಗಿ ಕಾಣ್ತಾರೆ ಎಂದು ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ.

ನಮ್ಮ ಕನ್ನಡದಲ್ಲಿ ಇನ್ನೂ ಒಳ್ಳೆಯ ಸಿನಿಮಾಗಳು ಬರಲಿ. ಇದನ್ನ ತ್ರಿಡಿಯಲ್ಲೇ ನೋಡಬೇಕು. ಇನ್ನು ಈ ಸಿನಿಮಾದಲ್ಲಿ ಅಪ್ಪ ಮಗಳ ಸಂಬಂಧ ತುಂಬ ಖುಷಿ ಕೊಟ್ಟ ಸೀನ್ ಎಂದು ಸಿನಿಮಾದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾದ ನಟ ನಿರೂಪ್ ಭಂಡಾರಿ ಮಾತನಾಡಿ, ನನಗೆ ಏನು ಹೇಳಬೇಕು ಗೊತ್ತಿಲ್ಲ. ಜನರ ಜೊತೆ ಸಿನಿಮಾ ನೋಡಿದ್ದೇನೆ.ಅವರು ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದಾರೆ. ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದು ವಿಕ್ರಾಂತ್ ರೋಣ ಅಲ್ಲ, ವಿಕ್ಟರಿ ರೋಣ ಎಂದಿದ್ದಾರೆ.

ಇದನ್ನೂ ಓದಿ: ರಿಲೀಸ್​ ಆಯ್ತು ವಿಕ್ರಾಂತ್ ರೋಣ, ಫ್ಯಾಂಟಮ್​ ಲೋಕದಲ್ಲಿ ಕಿಚ್ಚನ ಮೋಡಿ

ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ

ಸಿನಿಮಾದ ಮತ್ತೊಬ್ಬ ನಟಿ ನೀತಾ ಅಶೊಕ್ ಸಹ ಸಿನಿಮಾ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಈ ಪಾತ್ರ ನನಗೆ ತುಂಬ ಖುಷಿ ಕೊಟ್ಟಿದೆ. ಇದೇ ಮೊದಲು ಸಿನಿಮಾ ನೋಡಿದ್ದು. ಜನರ ಜೊತೆ ಸಿನಿಮಾ ನೋಡಿದ್ದು ಸಖತ್ ಖುಷಿ ಕೊಟ್ಟಿದ್ದೆ. ಸಿನಿಮಾ ಎಲ್ಲರಿಗೂ ಇಷ್ಟವಾಗಿದೆ. ಮೂರು ವರ್ಷ ಈ ಸಿನಿಮಾಗಾಗಿ ಕೆಲಸ ಮಾಡಿದ್ದೀವಿ. ಸುದೀಪ್ ಮತ್ತು ಅನೂಪ್ ಅವರಿಗೆ ಧನ್ಯವಾದ ಎಂದಿದ್ದಾರೆ.

ಇದನ್ನೂ ಓದಿ: ವಿಕ್ರಾಂತ್ ರೋಣನ ಖದರ್, ತೆರೆ ಮೇಲೆ ಕಿಚ್ಚನ ಪವರ್! ಫಸ್ಟ್ ಡೇ ಫಸ್ಟ್ ಶೋ ಸೂಪರೋ ಸೂಪರ್

ವಿಕ್ರಾಂತ್ ರೋಣಾ 147 ನಿಮಿಷಗಳ ಸಿನಿಮಾವಾಗಿದ್ದು, ಅದ್ಭುತ ಘಟನೆಗಳು, ಊಹಿಸಲಾಗದ ಟ್ವಿಸ್ಟ್​ಗಳ ಜೊತೆ ಉತ್ತಮ ಅದರ ಛಾಯಾಗ್ರಹಣಕ್ಕಾಗಿ ಜನರಿಗೆ ಬಹಳ ಇಷ್ಟವಾಗಿದ್ದು, ವಿಶ್ವದಾದ್ಯಂತ ಅಭಿಮಾನಿಗಳು ಕಿಚ್ಚನ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.
Published by:Sandhya M
First published: