ಕಿಚ್ಚನ ಕೈಯಲ್ಲಿದೆ ದುಬಾರಿ ವಾಚ್​; ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ!

ಪೈಲ್ವಾನನ ಕೈಯಲ್ಲಿರುವ ದುಬಾರಿ ವಾಚ್​ವೊಂದು ಕೆಳದಿನಗಳಿಂದ ಸುದ್ದಿಯಾಗುತ್ತಿದೆ. ಸಾಕಷ್ಟು ಜನರು ಕಿಚ್ಚ ಧರಿಸಿರುವ ವಾಚ್ ಕಂಪೆನಿ?, ಅದರ ವಿಶೇಷತೆ? ಮತ್ತು ಅದರ ಬೆಲೆಯ? ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡುತ್ತಿದ್ದಾರೆ.

Kiccha sudeep

Kiccha sudeep

 • Share this:
  ಬಾದ್ ​ಷಾ ಕಿಚ್ಚ ಸುದೀಪ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ವಿಕ್ರಾಂತ್​ ರೋನಾ ಸಿನಿಮಾದ ನಾನಾ ವಿಚಾರವಾಗಿ ಸುದ್ದಿಯಾದರೆ. ಆ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ತುಂಬಿದ ಸಲುವಾಗಿ ಸುದ್ದಿಯಾಗಿದ್ದರು. ಮಾತ್ರವಲ್ಲದೆ, ಎಲ್ಲರೂ ಈ ಸಡಗರವನ್ನು ಸಂಭ್ರಮಿಸಿದ್ದರು. ಆ ನಂತರ ಕಿಚ್ಚ ಬಿಗ್ ಬಾಸ್ ಸೀಸನ್ 8ನೇ ಪ್ರಾರಂಭದ ಕುರಿತಾಗಿ ಸುದ್ದಿಯಾದರು. ಹೀಗೆ ಒಂದಲ್ಲಾ ಒಂದು ವಿಚಾರದಲ್ಲಿ ಕಿಚ್ಚ ಸುದ್ದಿಯಾಗುತ್ತಿರುತ್ತಾರೆ. ಆದರೀಗ ಕಿಚ್ಚನ ಕೈಯಲ್ಲಿರುವ ವಾಚ್​ಬೊಂದು ಸುದ್ದಿ ಮಾಡಿದೆ..

  ಹೌದು… ಪೈಲ್ವಾನನ ಕೈಯಲ್ಲಿರುವ ದುಬಾರಿ ವಾಚ್​ವೊಂದು ಕೆಳದಿನಗಳಿಂದ ಸುದ್ದಿಯಾಗುತ್ತಿದೆ. ಸಾಕಷ್ಟು ಜನರು ಕಿಚ್ಚ ಧರಿಸಿರುವ ವಾಚ್ ಕಂಪೆನಿ?, ಅದರ ವಿಶೇಷತೆ? ಮತ್ತು ಅದರ ಬೆಲೆಯ? ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡುತ್ತಿದ್ದಾರೆ. ಅಷ್ಟೇ ಏಕೆ ಟ್ರೋಲ್ ಪೇಜ್​ಗಳು ಮತ್ತು ಫ್ಯಾನ್ಸ್ ಪೇಜ್​ನಲ್ಲೂ ಕಿಚ್ಚ ಧರಿಸಿರುವ ವಾಚ್ ಬಗ್ಗೆ ಸುದ್ದಿಯಾಗುತ್ತಿದೆ. ಇನ್ನು ಕೆಲವರು ವಾಚ್​ ಬಗ್ಗೆ ತಿಳಿದುಕೊಂಡು ಆಗಿದೆ.

  ಇತ್ತೀಚೆಗೆ ಕನ್ನಡ ಸಂಘಟನೆಗಳಲ್ಲವು ಸೇರಿ ಬಾದ್​ಷಾಗೆ ಸನ್ಮಾನ ಮಾಡಿದ್ದರು. ಈ ವೇಳೆ ಎಲ್ಲರ ಕಣ್ಣು ಕಿಚ್ಚ ಧರಿಸಿರುವ ವಾಚ್ ಮೇಲೆ ಬಿದ್ದಿದೆ.  ಹೌದು. ಕಿಚ್ಚನ ಒಂದೂವರೆ ಕೋಟಿ ಬೆಲೆ ಬಾಳುವ ವಾಚ್ ಕಟ್ಟಿಕೊಂಡಿದ್ದರು. ಅದನ್ನು ನೋಡಿದ ಫ್ಯಾನ್ಸ್ ಕಿಚ್ಚನ ವಾಚ್ ಕ್ರೇಜ್ ಬಗ್ಗೆ ತಿಳಿದುಕೊಂಡಿದ್ದಾರೆ. ರಿಚರ್ಡ್ ಮಿಲ್ಲೆ ಆರ್​ಎಂ 011 ವಾಚ್ ಇದಾಗಿದ್ದು ದುಬಾರಿ ವಾಚ್​ಗಳಲ್ಲಿ ಇದು ಕೂಡ ಒಂದು.

  ವಿಶೇಷವೆಂದರೆ ಈ ವಾಚ್​ ಡಯಲ್​ನಲ್ಲಿ ಡೈಮಂಡ್ ಸ್ಟೋನ್​ಗಳಿವೆ. ಅದಕ್ಕಾಗಿ ಒಂದೂವರೆ ಕೋಟಿ ಬೆಲೆಯನ್ನು ಹೊಂದಿದೆ. ಕಿಚ್ಚ ಬಲಗೈನಲಗ್ಲಿ ಈ ವಾಚ್​ ಕಟ್ಟಿಕೊಂಡಿದ್ದರು.

  ಸುದೀಪ್​ಗೆ ಕಾರು, ಬೈಕ್ ಕ್ರೇಜ್ ಇದೆ ಎಂಬುದು ಎಲ್ಲರಿಗೂ ಗೊತ್ತು. ಅದರ ಜೊತೆಗೆ ವಾಚ್ ಕ್ರೇಜ್ ಇದೆ ಎಂಬುದು ಅಭಿಮಾನಿಗಳಿಗೆ ತಿಳಿದಿದೆ.
  First published: