ಇದೊಂದು ಫೋಟೋಗಾಗಿ 36 ವರ್ಷ ಕಾದಿದ್ರಂತೆ ಸುದೀಪ್​​: ಕೊನೆಗೂ ನನಸಾಯ್ತು ಕಿಚ್ಚನ ಕನಸು!

ಕಪಿಲ್​ ದೇವ್​ ಜೊತೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್​ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಾಗಿ 36 ವರ್ಷಗಳಿಂದ ಕಾಯುತ್ತಿದ್ದೇನೆ. ಇದನ್ನು ನನಸು ಮಾಡಿದ್ದಕ್ಕೆ ಕಪಿಲ್​ ದೇವ್​ ಧನ್ಯವಾದ ಎಂದು ಕಿಚ್ಚ ಸುದೀಪ್​ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್, ಕಪಿಲ್​ ದೇವ್​

ಕಿಚ್ಚ ಸುದೀಪ್, ಕಪಿಲ್​ ದೇವ್​

  • Share this:
ಕಿಚ್ಚ ಸುದೀಪ್(Kiccha Sudeep)​ ಸ್ಯಾಂಡಲ್​ವುಡ್​ಗೆ ಆಲ್​ರೌಂಡರ್(All-Rounder)​ ಇದ್ದಂತೆ. ನಟನೆ(Acting)ಗೂ ಸೈ, ನಿರ್ದೇಶನ(Direction)ಕ್ಕೂ ಸೈ, ವಿಲನ್​ ಪಾತ್ರಕ್ಕೂ ಸೈ, ನಿರೂಪಣೆ(Anchoring)ಗೂ ಸೈ. ಆಡು ಮುಟ್ಟದ ಸೊಪ್ಪಿಲ್ಲ. ಕಿಚ್ಚ ಕಾಲಿಡದ ಕ್ಷೇತ್ರವಿಲ್ಲ ಅಂದರೆ ತಪ್ಪಾಗಲಾರದು. ಕಿಚ್ಚ ಸುದೀಪ್ ಸದಾ ಹೇಳುತ್ತಿರುತ್ತಾರೆ. ನಾನು ಸಿನಿಮಾರಂಗಕ್ಕೆ ಬರದೇ ಇದ್ದಿದ್ದರೆ ಕ್ರಿಕೆಟರ್​(Cricketer)​ ಆಗುತ್ತಿದೆ ಅಂತ. ಅಭಿನಯ ಚಕ್ರವರ್ತಿಗೆ ಕ್ರಿಕೆಟ್​ ಅಂದರೆ ಅಷ್ಟು ಅಚ್ಚುಮೆಚ್ಚು. ಈಗಲೂ ಕ್ರಿಕೆಟ್​ ಆಡುತ್ತಿರುತ್ತಾರೆ. ಸಿಸಿಎಲ್(CCL)​ ಪಂದ್ಯಾವಳಿ ಸೇರಿದಂತೆ ಅನೇಕ ಬಾರಿ ಅವರು ಬ್ಯಾಟ್​ ಬೀಸಿದ್ದಾರೆ. ಕಿಚ್ಚ ಸುದೀಪ್​​ರವರು ಒಳ್ಳೆಯ ಬ್ಯಾಟ್ಸ್​ಮ್ಯಾನ್​(Batsman) ಹಾಗೂ ವಿಕೆಟ್ ಕೀಪರ್(Wicket Keeper)​ ಎಂಬುಂದು ಎಲ್ಲರಿಗೂ ಗೊತ್ತಿದೆ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ (83 Movie) ತಯಾರಾಗಿದೆ. ಆ ಸಿನಿಮಾವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್​ ಪ್ರಸ್ತುತಪಡಿಸುತ್ತಿದ್ದಾರೆ. ‘83’ ಚಿತ್ರದಲ್ಲಿ ಕಪಿಲ್​ ದೇವ್​ (Kapil Dev) ಪಾತ್ರವನ್ನು ರಣವೀರ್​ ಸಿಂಗ್​ ಮಾಡಿದ್ದಾರೆ. ಕಪಿಲ್​ ದೇವ್​ ಎಂದರೆ ಸುದೀಪ್​ ಅವರಿಗೆ ಸಖತ್​ ಅಭಿಮಾನ. ಅವರ ಜತೆ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಬಾಲ್ಯದಲ್ಲೇ ಸುದೀಪ್​ ಅವರ ಮನದಲ್ಲಿ ಚಿಗುರಿತ್ತು. ಆದರೆ ಸಾಧ್ಯವಾಗಿರಲಿಲ್ಲ, 36 ವರ್ಷಗಳ ಬಳಿಕ ಆ ಕ್ಷಣ ಬಂತು ಎಂದು ಸುದೀಪ್​ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. 

ಕಪಿಲ್ ದೇವ್​ ಜೊತೆ ಇರುವ ಫೋಟೋ ಶೇರ್ ಮಾಡಿದ ಕಿಚ್ಚ!

ನಿನ್ನೆ 83 ಚಿತ್ರತಂಡ ಬೆಂಗಳೂರಿನಲ್ಲಿ ಜಬರ್​ದಸ್ತ್​ ಪ್ರಚಾರ ಮಾಡಿದೆ. ಒಂದೇ ವೇದಿಕೆಯಲ್ಲಿ ಘಟಾನುಘಟಿ ದಿಗ್ಗಜರ ಸಮಾಗಮವಾಗಿದೆ. ಕಿಚ್ಚ ಸುದೀಪ್(​, ರಣವೀರ್​ ಸಿಂಗ್​, ಕಪೀಲ್​ ದೇವ್​ ಸೇರಿ ಹಲವು ಕ್ರಿಕೆಟ್​ ದಿಗ್ಗಜರ ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ರಣವೀರ್​ ಸಿಂಗ್​ ಇದಾರೆ ಅಂದರೆ ಅಲ್ಲಿ ಮನರಂಜನೆಗೆ ಕೊರತೆ ಇಲ್ಲ. ಜೊತೆಗೆ ಕಿಚ್ಚ ಸುದೀಪ್​ ಸೇರಿದ್ದಾರೆ ಅಂದರೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಬೆಂಗಳೂರಿನಲ್ಲಿ ನಡೆದ 83 ಸಿನಿಮಾ ಪ್ರಚಾರ ಸಖತ್​ ಥ್ರಿಲ್​ ಆಗಿತ್ತು. ಇದೇ ವೇಳೆ ಕಪಿಲ್​ ದೇವ್​ ಜೊತೆ ಕಿಚ್ಚ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಇದೀಗ ಅಪ್​ಲೋಡ್​ ಮಾಡಿದ್ದಾರೆ.ಇದನ್ನು ಓದಿ : ಬೆಂಗಳೂರಿನಲ್ಲಿ `83’ ಜಬರ್​ದಸ್ತ್​ ಪ್ರಚಾರ : ದ್ರಾವಿಡ್​ ಬಯೋಪಿಕ್​ನಲ್ಲಿ ನಟಿಸ್ತಾರಾ ಕಿಚ್ಚ ಸುದೀಪ್​?

36 ವರ್ಷದ ಕನಸು ನನಸಾಯ್ತು ಎಂದ ಸುದೀಪ್​!

ಹೌದು, ಕಪಿಲ್​ ದೇವ್​ ಜೊತೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್​ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಾಗಿ 36 ವರ್ಷಗಳಿಂದ ಕಾಯುತ್ತಿದ್ದೇನೆ. ಇದನ್ನು ನನಸು ಮಾಡಿದ್ದಕ್ಕೆ ಕಪಿಲ್​ ದೇವ್​ ಧನ್ಯವಾದ ಎಂದು ಕಿಚ್ಚ ಸುದೀಪ್​ ಬರೆದುಕೊಂಡಿದ್ದಾರೆ. ಕರ್ನಾಟಕದ ಸಿನಿ‌ ಪ್ರೇಕ್ಷಕರಿಗೆ  83 ಸಿನಿಮಾವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅರ್ಪಿಸುತ್ತಿದ್ದಾರೆ. 1983ರಲ್ಲಿ ವಿಶ್ವಕಪ್ ಗೆದ್ದ ರೋಚಕ ಸ್ಟೋರಿಯ 83 ಸಿನಿಮಾವನ್ನು ಕನ್ನಡದಲ್ಲಿ ಸುದೀಪ್ ರಿಲೀಸ್ ಮಾಡುತ್ತಿದ್ದಾರೆ.

ಇದನ್ನು ಓದಿ : ರಾಮಾಚಾರಿ, ಕೆಂಪೇಗೌಡ ಸಿನಿಮಾ ಡೈಲಾಗ್ ಹೊಡೆದ ವಿಶ್ವಕಪ್ ಹೀರೋ ಕೃಷ್ಣಮಾಚಾರಿ

ಬಾಲ್ಯದ ಕತೆ ತೆರೆದಿಟ್ಟ ಅಭಿನಯ ಚಕ್ರವರ್ತಿ!

''1987 ರ ಸಮಯ ಇರಬಹುದು, ವೆಸ್ಟ್ ಇಂಡೀಸ್ ತಂಡ ಬೆಂಗಳೂರಿಗೆ ಟೆಸ್ಟ್ ಆಡಲು ಬಂದಿತ್ತು. ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಬೆಂಗಳೂರಿಗೆ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ನಾನು ಕಪಿಲ್ ಅವರನ್ನು ನೋಡುವ ಆಸೆಯಿಂದ ಹೋಟೆಲ್‌ಗೆ ಹೋಗಿದ್ದೆ'' ಎಂದು ನೆನಪಿನ ಬುತ್ತಿ ತೆರೆದಿಟ್ಟರು ಸುದೀಪ್.''ನನ್ನ ಬಳಿ ಆಗ ಫಿಜಿ ಕ್ಯಾಮೆರಾ ಇತ್ತು. ಅಕ್ಕ ಅದರಲ್ಲಿ ನಮ್ಮ ಫೋಟೊ ತೆಗೆಯಲು ಯತ್ನಿಸಿದರು ಆದರೆ ಫೊಟೊ ತೆಗೆಯಲು ಆಗಲಿಲ್ಲ. ಕ್ಯಾಮೆರಾ ಕೆಲಸ ಮಾಡಲಿಲ್ಲ. ನನಗೆ ಅಳು ಬಂದು ಬಿಟ್ಟಿತು. ಆದರೆ ಕಪಿಲ್ ದೇವ್ ನನ್ನನ್ನು ಎತ್ತಿಕೊಂಡು ಸಮಾಧಾನ ಮಾಡಿದರು. ಅಳಬೇಡವೆಂದು ನನ್ನ ಕಣ್ಣೀರು ಒರೆಸಿದರು'' ಎಂದು ಹಳೆಯ ಘಟನೆ ನೆನಪು ಮಾಡಿಕೊಂಡರು.
Published by:Vasudeva M
First published: