Kiccha Sudeep: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್, ಹೂ ಮಳೆ ಸುರಿಸಿದ ಅಭಿಮಾನಿಗಳು

Vikrant Rona: ಇನ್ನು ಸುದೀಪ್ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಹೂ ಮಳೆ ಸುರಿಸಿದ್ದು, ಕಿಚ್ಚನನ್ನ ನೋಡಿ ಸಂಭ್ರಮ ಪಟ್ಟಿದ್ದಾರೆ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

  • Share this:
ಕಿಚ್ಚ ಸುದೀಪ್ (Kiccha Sudeep) ವಿಕ್ರಾಂತ್ ರೋಣ (Vikrant Rona) ಸಿನಿಮಾದ ಸಕ್ಸಸ್​ನ ಸಂತಸದಲ್ಲಿದ್ದಾರೆ. ಜುಲೈ 28ರಂದು ಬಿಡುಗಡೆಯಾದ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ (Pan India) ಸಿನಿಮಾ ಎಲ್ಲೆಡೆ ಭಾರೀ ಕಲೆಕ್ಷನ್ ಮಾಡಿದ್ದಲ್ಲದೇ, ಉತ್ತಮ ಪ್ರತಿಕ್ರಿಯೆ ಸಹ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಟ ಮೈಸೂರಿನ (Mysuru)  ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡಿದ್ದು, ಚಾಮುಂಡೇಶ್ವರಿ ತಾಯಿಗೆ  ನಟ ಸುದೀಪ್ ಪೂಜೆ ಸಲ್ಲಿಸಿದ್ದಾರೆ.

ಹೂವಿನ ಮಳೆ ಸುರಿಸಿದ ಅಭಿಮಾನಿಗಳು

ವಿಕ್ರಾಂತ್ ರೋಣ ಸಿ‌ನಿಮಾ ದೊಡ್ಡ ಸಕ್ಸಸ್ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿರುವ ನಟನನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಸುದೀಪ್ ಭಾವ ಚಿತ್ರ ಇರುವ ಧ್ವಜ ಹಿಡಿದು ಅಭಿಮಾನಿಗಳು ಬೆಟ್ಟಕ್ಕೆ ಬಂದಿದ್ದಾರೆ. ಇನ್ನು ಸುದೀಪ್ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಹೂ ಮಳೆ ಸುರಿಸಿದ್ದು, ಕಿಚ್ಚನನ್ನ ನೋಡಿ ಸಂಭ್ರಮ ಪಟ್ಟಿದ್ದಾರೆ.


ಬಿಡುಗಡೆಗೂ ಮೊದಲೇ ವಿಕ್ರಾಂತ್ ರೋಣ ಸಿನಿಮಾ ಬಹಳ ಹೈಪ್ ಕ್ರಿಯೇಟ್​ ಮಾಡಿತ್ತು, ಪ್ಯಾನ್​ ಇಂಡಿಯಾ ಸಿನಿಮಾವಾಗಿರುವುದರಿಂದ ಅಭಿಮಾನಿಗಳ ನಿರೀಕ್ಷೆ ತುಸು ಹೆಚ್ಚಿತ್ತು. ಹಾಗೆಯೇ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇದ್ದು, ಕಿಚ್ಚನ ಅಭಿನಯಕ್ಕೆ ಫುಲ್​ ಮಾರ್ಕ್ಸ್ ಕೊಡಬಹುದು. ಸಾಮಾನ್ಯವಾಗಿ ಕಿಚ್ಚನ ಸಿನಿಮಾ ಎಂದರೆ ವಿಶೇಷತೆಯಿಂದ ಕೂಡಿರುತ್ತದೆ. ಅವರ ಮ್ಯಾನರಿಸಂ, ಸ್ಟೈಲ್​, ಫೈಟಿಂಗ್ ನೋಡುವುದು ಒಂದು ರೀತಿ ಚೆಂದ. ಈ ಸಿನಿಮಾದಲ್ಲಿ ಸಹ ಅವರು ಬಹಳ ಇಷ್ಟವಾಗುತ್ತಾರೆ.

ಇದನ್ನೂ ಓದಿ: ಇಂದು ಕಿಶೋರ್ ಕುಮಾರ್ ಜನ್ಮದಿನ, ಸ್ವರಮಾಂತ್ರಿಕನ ಹಾಡುಗಳು ಎಂದಿಗೂ ಅಜರಾಮರ

ಸಿನಿಮಾ ಕಥೆ ಏನು?

ಕರಾವಳಿ ಭಾಗದಲ್ಲಿರುವ ಒಂದು ಕಾಲ್ಪನಿಕ ಊರು ಕಮರೊಟ್ಟು. ಈ ಊರಿನಲ್ಲಿ ನಡೆಯುವ ಕಥೆಯೇ ಈ ಸಿನಿಮಾದ ಜೀವಾಳ. ಈ ಊರಿನಲ್ಲಿ ಬಹಳಷ್ಟು ಜನ ಭೂತರಾಧಕರಿರುತ್ತಾರೆ. ಅಲ್ಲಿ ಮಕ್ಕಳ ಕೊಲೆಯಾಗುತ್ತಿರುತ್ತದೆ. ಇದರ ಹಿಂದೆ ಕಮರೊಟ್ಟು ಮನೆಯಲ್ಲಿರುವ ಬ್ರಹ್ಮರಾಕ್ಷಸನೊಬ್ಬ ಕಾರಣ ಎಂದು ಜನ ನಂಬಿರುತ್ತಾರೆ. ಆದರೆ ಅಲ್ಲಿ ನಡೆಯುತ್ತಿರುವ ಕೊಲೆಗೆ ಕಾರಣ ಏನು ಎಂಬುದು ಮಾತ್ರ ಗೌಪ್ಯವಾಗಿರುತ್ತದೆ. ಈ ಸಮಯದಲ್ಲಿಯೇ ಆ ಊರಿಗೆ ಸಂಜು (ನಟ ನಿರೂಪ್ ಭಂಡಾರಿ) ಮತ್ತು ವಿಕ್ರಾಂತ್ ರೋಣ (ಕಿಚ್ಚ ಸುದೀಪ್) ಬರುತ್ತಾರೆ. ಈ ಊರಿಗೆ ಅವರಿಬ್ಬರು ಏಕೆ ಬರುತ್ತಾರೆ? ಅವರಿಗೂ ಆ ಕೊಲೆಗೂ ಏನು ಸಂಬಂಧ ಎಂಬುದು ಕುತೂಹಲ ಮೂಡಿಸುತ್ತದೆ.

ಈ ಸಿನಿಮಾದಲ್ಲಿ  ಸುದೀಪ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದು, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ಲೀನ್​ ಫರ್ನಾಂಡೀಸ್ ಮತ್ತು ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಅನುಪ್ ಭಂಡಾರಿ ಮತ್ತು ಸುದೀಪ್ ಪತ್ನಿಯಾಗಿ ಮಿಲನಾ ನಾಗರಾಜ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಸುಮಾರು 325 ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಉಳಿದಂತೆ 325 ಥಿಯೇಟರ್, 65 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ‌ 2500ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲೆ 1200 ಶೋ ನೀಡಲಾಗಿದೆ. ಈಗಾಗಲೇ ಈ ಸಿನಿಮಾ 150 ಕೋಟಿ ಕಲೆಕ್ಷನ್ ಮಾಡುವಂತ ಹೆಜ್ಜೆ ಹಾಕಿದೆ.

ಇದನ್ನೂ ಓದಿ: ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿಧನ, ಸಿನಿತಾರೆಯರಿಂದ ಸಂತಾಪ

ಸ್ಯಾಂಡಲ್​ವುಡ್​ನ ಪ್ಯಾನ್​ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಕೆಜಿಎಫ್​ ಹಾಗೂ ಕೆಜಿಎಫ್​ 2 ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿದ್ದವು. ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿತ್ತು ಕೆಜಿಎಫ್​ ಚಾಪ್ಟರ್ 2 ಸಿನಿಮಾ. ಅಲ್ಲದೇ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಸಹ 150 ಕೋಟಿ ಕಲೆಕ್ಷನ್ ಮಾಡಿತ್ತು.
Published by:Sandhya M
First published: