ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾದ ಟ್ರೈಲರ್ ಲಾಂಚ್ (Trailer Launch) ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿತು. ಸ್ಯಾಂಡಲ್ವುಡ್ನ ಸ್ಟಾರ್ ನಟರುಗಳು ಎಲ್ಲರೂ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ 3ಡಿ ಅಲ್ಲಿ ವಿಕ್ರಾಂತ್ ರೋಣನನ್ನು ಕಣ್ತುಂಬಿಕೊಂಡರು. ಗಣ್ಯರು ಮತ್ತು ಮಾಧ್ಯಮದವರಿಗೆ (Media) ಈ ಪ್ರೀ ಟ್ರೈಲರ್ ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಟ್ರೈಲರ್ ನೋಡಿದ ಎಲ್ಲರೂ ಒಮ್ಮೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಚಿತ್ರವನ್ನು ಹಾಡಿಹೊಗಳಿದ್ದಾರೆ. ಇಂದು ಸಂಜೆ 5 ಗಂಟೆಗೆ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದ್ದು, ಕಿಚ್ಚನ ಹಾಗೂ ಕನ್ನಡ ಸಿನಿ ರಸಿಕರು ಟ್ರೈಲರ್ಗಾಗಿ ಕಾತುರರಾಗಿದ್ದಾರೆ. ಟ್ರೈಲರ್ ನಲ್ಲಿ ಇರುವ ಟ್ವೀಸ್ಟ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ದ್ವಿಪಾತ್ರದಲ್ಲಿ ಮಿಂಚಲಿದ್ದಾರಾ ಸುದೀಪ್?:
ಹೌದು, ಟ್ರೈಲರ್ ನೋಡಿದ ಎಲ್ಲರಲ್ಲಿಯೂ ಇದೊಂದು ಪ್ರಶ್ನೆ ಮೂಡಿದ್ದು, ಸುದೀಪ್ ವಿಕ್ರಾಂತ್ ರೋಣ ಚಿತ್ರದ್ಲಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಟ್ರೈಲರ್ ನಲ್ಲಿ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ಕೊನೆಯಲ್ಲಿನ ಟ್ವಿಸ್ಟ್ ಸುದೀಪ್ ಬಗ್ಗೆ ಹೊಸ ಕುತೂಹಲ ಕೆರಳಿಸುತ್ತಿದೆ. ಇದರ ಮೂಲಕ ಸುದೀಪ್ ದ್ವಿಪಾತ್ರದಲ್ಲಿ ಕಾನಿಸಿಕೊಂಡಿದ್ದಾರಾ ಎಂಬ ಕುತೂಹಲ ಮುಡುತ್ತಿದೆ. ಎಲ್ಲಾ ಕುತೂಹಲಕ್ಕೂ ಅಂತಿಮ ಉತ್ತರಕ್ಕಾಗಿ ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಲೇ ಬೇಕಿದೆ.
ಹೀರೋ - ವಿಲನ್ ಒಬ್ಬರೇನಾ?
ಟ್ರೈಲರ್ ನೋಡಿದವರಲ್ಲಿ ಸಿನಿಮಾದ ಕುರಿತು ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದು, ನಿರ್ದೇಶಕ ಅನೂಫ್ ಭಂಡಾರಿ ಚಿತ್ರವದಲ್ಲಿ ಸಖತ್ ಟ್ವೀಸ್ಟ್ ಇಟ್ಟಿರುವುದಂತೂ ಪಕ್ಕಾ ಎನ್ನುವಂತಾಗಿದೆ. ಅದರಲ್ಲಿಯೂ ಸುದೀಪ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರಾ ಎಂಬ ಒಂದು ಪ್ರಶ್ನೆಯಾದರೆ, ಇತ್ತ ಸಿನಿಮಾದ ವಿಲನಮ್ ಯಾರು ಎನ್ನುವುದು ಇನ್ನೂ ಚಿತ್ರತಂಡ ರಿವೀಲ್ ಮಾಡದಿರುವುದರಿಂದ ಸುದೀಪ್ ಅವರು ಹೀರೋನಾ ಅಥವಾ ವಿಲನ್ನಾ ಎಂಬ ಪ್ರಶ್ನೆಗಳು ಕಾಡುತ್ತಿದೆ.
ಇದನ್ನೂ ಓದಿ: Vikrant Rona: ಸ್ಯಾಂಡಲ್ವುಡ್ ಸ್ಟಾರ್ಸ್ ಜೊತೆ ಸೊಂಟ ಬಳುಕಿಸಿದ ರಕ್ಕಮ್ಮ! ಕ್ರೇಜಿಸ್ಟಾರ್, ಶಿವಣ್ಣ ಸ್ಟೆಪ್ಸ್ ಮಾತ್ರ ಟಾಪ್ ಕ್ಲಾಸ್
‘ವಿಕ್ರಾಂತ್‘ - ‘ರೋಣ‘ ಇಬ್ಬರೂ ಬೇರೆ ಬೇರೇನಾ?:
ಹೌದು, ಚಿತ್ರದ ಟ್ರೈಲರ್ ನೋಡಿದವರಲ್ಲಿ ಇದೊಂದು ದೊಡ್ಡ ಹುಳ ತಲೆಗೆ ಬಿಟ್ಟಂತಾಗಿದೆ. ಸುದೀಪ್ ಎರಡು ಪಾತ್ರದಲ್ಲಿ ಕಾಣಿಸಿಕೋಂಡಲ್ಲಿ, ವಿಕ್ರಾಂತ್ ಮತ್ತು ರೋಣ ಎಂಬ ದ್ವೀಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಹಾಗಿದ್ರೆ ಇವರಿಬ್ಬರಲ್ಲಿ ವಿಲನ್ ಯಾರು? ಹೀರೋ ಯಾರು? ಎಂಬ ಪ್ರಶ್ನೆ ಕಾಡುತ್ತಿದೆ. ಈ ಎಲ್ಲಾ ಕುತೂಹಲ ನಿಮ್ಮಲ್ಲೂ ಇಂದು ಸಂಜೆ 5 ಗಂಟೆಯ ನಂತರ ಹುಟ್ಟಿಕೊಳ್ಳಲಿದೆ. ಏಕೆಂದರೆ ಇಂದು ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Vikrant Rona: 'ವಿಕ್ರಾಂತ್ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್ವುಡ್, ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು
'ವಿಕ್ರಾಂತ್ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್ವುಡ್:
ವಿಕ್ರಾಂತ್ ರೋಣ ಪ್ರೀ- ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಸಂಪೂರ್ಣ ಸ್ಯಾಂಡಲ್ವುಡ್ ಒಂದಾಗಿದೆ. ಹೌದು, ಒರಾಯನ್ ಮಾಲ್ ನಲ್ಲಿ ನಡೆಯುತ್ತಿರುವ ಪ್ರೀ- ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಕಿಚ್ಚನಿಗೆ ಶಿವಣ್ಣ, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ, ರಮೇಶ್, ನಿರ್ದೇಶಕ ಯೋಗರಾಜ್ ಭಟ್, ಜಾಕ್ವೆಲಿನ್ ಪರ್ನಾಂಡಿಸ್, ರಾಜ್ ಬಿ ಶೆಟ್ಟಿ, ಅರ್ಜುನ್ ಜನ್ಯಾ, ನಂದ ಕಿಶೋರ್, ಸೃಜನ್ ಲೋಕೇಶ್ ಸೇರಿದಂತೆ ಅನೇಕ ತಾರೆಯರು ಪಾಲ್ಗೊಳ್ಳುವ ಮೂಲಕ ಚಿತ್ರ ರಂಗದ ಒಗ್ಗಟ್ಟನ್ನು ಪ್ರದರ್ಶಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ