Kiccha Sudeep: ಮೌತ್ ಆರ್ಟ್ ಮೂಲಕ ಸುದೀಪ್ ಚಿತ್ರ ಬಿಡಿಸಿದ ಕಲಾವಿದ, ಎಲ್ಲೆಡೆ ರಾ ರಾ ರಕ್ಕಮ್ಮ ಅಂತಿದ್ದಾರೆ ಫ್ಯಾನ್ಸ್

Vikrant Rona: ವಿಕ್ರಾಂತ್ ರೋಣ ಯಾವ ಮಟ್ಟಿಗೆ ಟ್ರೆಂಡ್ ಹುಟ್ಟು ಹಾಕಿದೆ ಎಂದರೆ ಅದರ ಹಾಡು ರಾ ರಾ ರಕ್ಕಮ್ಮ ಎಲ್ಲೆಡೆ ಕೇಳಿ ಬರುತ್ತಿದೆ. ಮಣ್ಣು ಸಂರಕ್ಷಣಾ ಅಭಿಯಾನದಲ್ಲೂ ರಾ ರಾ ರಕ್ಕಮ್ಮ ಸಾಂಗ್ ಕೇಳಿ ಬಂದಿದೆ.

 ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ನಟ ಕಿಚ್ಚ ಸುದೀಪ್​ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಎಲ್ಲೆಡೆ ಸದ್ದು ಮಾಡುತ್ತಿದೆ. ಅದರ ಹಾಡು (Song) , ಟ್ರೈಲರ್ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಸದ್ಯ ದಾವಣಗೆರೆಯಲ್ಲಿ ಕಲಾವಿದರೊಬ್ಬರು ಈ ಸಿನಿಮಾದ ಚಿತ್ರವನ್ನು (Painting) ಬಿಡಿಸಿದ್ದಾರೆ. ಇದೀಗ ಆ ವಿಡಿಯೋ ಫುಲ್  (Video Viral) ವೈರಲ್ ಆಗುತ್ತಿದೆ. ಮೌತ್ ಆರ್ಟ್ ಮೂಲಕ ಸುದೀಪ ಅವರ ಟೀಸರ್ ಲೂಕ್ ನ ಚಿತ್ರವನ್ನು ಕಲಾವಿದ ಬಿಡಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಕಲಾವಿದ ಜಯಕುಮಾರ್ ಈ ಚಿತ್ರವನ್ನು ಸತತ ಮೂರು ಗಂಟೆಗಳ ಸಮಯದಲ್ಲಿ ಬಾಯಿಯಿಂದ 5.5 ಅಡಿ ಸುದೀಪ್ ಭಾವಚಿತ್ರ ಬಿಡಿಸಿದ್ದು, ಎಲ್ಲರ ಗಮನ ಸೆಳೆದಿದೆ.

ಮೌತ್ ಆರ್ಟ್ ಮೂಲಕ ಚಿತ್ರ ಬಿಡಿಸಿದ ಕಲಾವಿದ

ಈ ಚಿತ್ರ ಬಹಳ ವಿಶೇಷವಾಗಿದ್ದು ಕಲಾವಿದ ಜಯಕುಮಾರ್ ಕೈ ಬಳಸದೆ ಬಾಯಿಯಿಂದ ಬ್ರೆಷ್ ಹಿಡಿದು ಚಿತ್ರ ಬಿಡಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಡಿಸಿದ್ದು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರ ಬಿಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ವ್ಹಾವ್ ಅಂತ ಬರೆದುಕೊಂಡಿದ್ದಾರೆ. ಕೇವಲ ಕಿಚ್ಚನ ಅಕೌಂಟ್ ಮಾತ್ರವಲ್ಲದೇ, ಸುದೀಪ್ ಮಗಳು ಸಾನ್ವಿ ಇನ್ಸ್ಟಾಗ್ರಾಂ ನಲ್ಲೂ ಜಯಕುಮಾರ್ ಅವರ ಮೌತ್ ಆರ್ಟ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ಸುದೀಪ್ ಅವರ ಮೆಚ್ಚುಗೆಗೆ ಕಲಾವಿದ ಜಯಕುಮಾರ್ ಫುಲ್ ಖುಷಿಯಾಗಿದ್ದಾರೆ.ವಿಕ್ರಾಂತ್ ರೋಣ ಯಾವ ಮಟ್ಟಿಗೆ ಟ್ರೆಂಡ್ ಹುಟ್ಟು ಹಾಕಿದೆ ಎಂದರೆ ಅದರ ಹಾಡು ರಾ ರಾ ರಕ್ಕಮ್ಮ ಎಲ್ಲೆಡೆ ಕೇಳಿ ಬರುತ್ತಿದೆ. ಮಣ್ಣು ಸಂರಕ್ಷಣಾ ಅಭಿಯಾನದಲ್ಲೂ ರಾ ರಾ ರಕ್ಕಮ್ಮ ಸಾಂಗ್ ಕೇಳಿ ಬಂದಿದೆ. ಮಣ್ಣು ಸಂರಕ್ಷಣೆ ಅಭಿಯಾನದಲ್ಲಿ ಏಕಕಾಲಕ್ಕೆ ನೂರಾರು ವಿದ್ಯಾರ್ಥಿಗಳು ರಾ ರಾ ರಕ್ಕಮ್ಮ ಸಾಂಗ್ ಗೆ ಸಖತ್ ಸ್ಟೆಪ್ ಹಾಕಿದ್ದು, ಮುಧೋಳ ನಗರದಲ್ಲಿ ರಾ ರಾ ರಕ್ಕಮ್ಮ ಸಾಂಗ್ ಗೆ ಸಾಮೂಹಿಕವಾಗಿ ಮಕ್ಕಳು, ಯುವಕರು ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಅನುಶ್ರೀಗೆ ಶಿವಣ್ಣ ಕೊಟ್ರು ಸೂಪರ್ ಗಿಫ್ಟ್, ಭಾವುಕರಾಗಿ ಹೀಗಂದ್ರು ನಿರೂಪಕಿ!ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಕ್ರೀಡಾಂಗಣದಲ್ಲಿ ರಾ ರಾ ರಕ್ಕಮ್ಮ ಹವಾ ಹೆಚ್ಚಿದ್ದು, ವಿಶ್ವ ಮಣ್ಣು ಸಂರಕ್ಷಣೆ ಜಾಗೃತಿ ಹಿನ್ನೆಲೆ ನಡೆದ ಮಣ್ಣು ಉಳಿಸಿ ಅಭಿಯಾನದಲ್ಲಿ ವಿಕ್ರಾಂತ ರೋಣ ಸಿನಿಮಾ ಹಾಡು ಸದ್ದು ಮಾಡಿದೆ. ಸದ್ಗುರು ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವ ಈ ವಿಶ್ವ ಮಣ್ಣು ಸಂರಕ್ಷಣಾ ಅಭಿಯಾನಕ್ಕೆ ಮುಧೋಳದಲ್ಲಿ ಕಿಚ್ಚ ಅಭಿಮಾನಿಗಳು ಸಾಥ್ ನೀಡಿದ್ದು, ಈ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದೆ.

ಎಲ್ಲೆಲ್ಲೂ ರಾ ರಾ ರಕ್ಕಮ್ಮ ಹವಾ

ಇದೊಂದು ಕೇವಲ ಉದಾಹರಣೆ ಅಷ್ಟೇ, ಇದೇ ರಾ ರಾ ರಕ್ಕಮ್ಮ ಹಾಡನ್ನು ವಿಷ್ಣು ದಾದಾ ಅಭಿನಯದ ಹಾಡೊಂದಕ್ಕೆ ಎಡಿಟ್ ಮಾಡಿ ಸೆಟ್ ಮಾಡಲಾಗಿದೆ. ಆಗಿನ ಕಾಲದ ಡ್ಯಾನ್ಸ್ ಗೆ ಈ ಹಾಡು ಬಹಳ ಚೆಂದವಾಗಿ ಹೊಂದಿಕೊಂಡಿದೆ. ಈ ಹಾಡಿಗೂ ಈ ನೃತ್ಯಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ ಎಂದು ಅನಿಸುವುದಿಲ್ಲ, ಎರಡು ಒಂದೇ ಅನಿಸುವಷ್ಟು ಸುಂದರವಾಗಿ ಎಡಿಟ್ ಮಾಡಲಾಗಿದೆ.

ಇದನ್ನೂ ಓದಿ: ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದಾ ಸ್ಟೆಪ್, ಫ್ಯಾನ್ಸ್ ಮಾಡಿರುವ ಈ ವಿಡಿಯೋ ಫುಲ್ ವೈರಲ್​

ಈ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದ್ದು, ಯಾವುದೇ ಸೋಶಿಯಲ್ ಮೀಡಿಯಾ ನೋಡಿದ್ರು ಈ ಸಾಂಗ್ ಕೇಳಿ ಬರುತ್ತದೆ. ಜನರಿಗಂತೂ ಈ ವಿಡಿಯೋ ಬಹಳ ಇಷ್ಟವಾಗಿದ್ದು, ಈಗಾಗಲೇ 4 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಇದೊಂದೇ ಹಾಡಿಗೆ ಮಾತ್ರವಲ್ಲದೇ, ಇನ್ನೂ ಅನೇಕ ಹಳೆಯ ಹಾಡುಗಳಿಗೆ ರಕ್ಕಮ್ಮ ಹಾಡನ್ನು ರಿಮಿಕ್ಸ್ ಹಾಗೂ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು, ಫ್ಯಾನ್ಸ್ ಕೂಡ ಎಂಜಾಯ್ ಮಾಡುತ್ತಿದ್ದಾರೆ.
Published by:Sandhya M
First published: