Kiccha Sudeep: ಕಿಚ್ಚನ ಭೇಟಿಯಾಗಲು ಅಭಿಮಾನಿ ಕಣ್ಣೀರು!; ಅಭಿಮಾನಿಯ ಆಸೆಗೆ ಮಿಡಿದ ರನ್ನನ ಹೃದಯ!

Kiccha Sudeep: ಕೆಲ ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್, ತಮ್ಮ ಮನೆಯಲ್ಲಿ ತಮ್ಮ ಜೊತೆಗೇ ಇರುವ ಅಭಿಮಾನಿ ಮಹಾದೇವ್ ಹುಟ್ಟುಹಬ್ಬಕ್ಕೆ ಪಿಯಾನೋ ನುಡಿಸುವ ಮೂಲಕ ವಿಶ್ ಮಾಡಿದ್ರು. ಮಾತ್ರವಲ್ಲ ಆ ವಿಡಿಯೋ ಶೇರ್ ಮಾಡುವ ಮೂಲಕ ಅಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಶುಭಾಶಯ ತಿಳಿಸಿದ್ರು. ಇನ್ನು ಬಾದ್ಶಾ ಲಾಕ್​ಡೌನ್ ಅಂತ ಸುಮ್ಮನೇ ಮನೆಯಲ್ಲಿ ಕುಳಿತಿಲ್ಲ. ಬದಲಾಗಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ

news18-kannada
Updated:July 12, 2020, 7:06 PM IST
Kiccha Sudeep: ಕಿಚ್ಚನ ಭೇಟಿಯಾಗಲು ಅಭಿಮಾನಿ ಕಣ್ಣೀರು!; ಅಭಿಮಾನಿಯ ಆಸೆಗೆ ಮಿಡಿದ ರನ್ನನ ಹೃದಯ!
ಕಿಚ್ಚ ಸುದೀಪ್
  • Share this:
ಬಾದ್ಶಾ ಕಿಚ್ಚ ಸುದೀಪ್, ಕನ್ನಡದ ಮಾಣಿಕ್ಯ, ಸ್ಯಾಂಡಲ್​ವುಡ್​ ರನ್ನ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅವರು ಅಭಿಮಾನಿಗಳ ಪಾಲಿಗೆ ಕೋಟಿಗೊಬ್ಬ. ಅದಕ್ಕೆ ಹಲವು ಉದಾಹರಣೆಗಳಿವೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಹಾರ್ಡ್​​ಕೋರ್ ಅಭಿಮಾನಿ ಚಿತ್ರದುರ್ಗ ಮೂಲದ ಮನೋಜ್, ‘ಯರ್ರಾಬಿರ್ರಿ’ ಚಿತ್ರದ ನಟ ರೂರಲ್ ಅಂಜನ್ ಅವರಿಗೆ ಕರೆ ಮಾಡಿ ನಿಮ್ಮನ್ನು, ಸುದೀಪಣ್ಣನನ್ನು ನಾನು ಭೇಟಿಯಾಗಲೇಬೇಕು, ಅಪೆಂಡಿಕ್ಸ್ ಆಪರೇಷನ್ ಆಗಿದೆ. ಎಷ್ಟು ದಿನ ಬದುಕುತ್ತೇನೋ, ಇಲ್ಲವೋ ಗೊತ್ತಿಲ್ಲ ಅಂತ ಗೋಳಾಡಿದ್ದ. ತನ್ನ ಕೊನೆ ಆಸೆಯನ್ನು ಈಡೇರಿಸಿ ಅಂತ ಬೇಡಿಕೊಂಡಿದ್ದ.

ತಕ್ಷಣ ಹುಬ್ಬಳ್ಳಿಯಿಂದ, ಚಿತ್ರದುರ್ಗಕ್ಕೆ ಬಂದ ನಟ ಅಂಜನ್, ಮನೋಜ್​ಗೆ ಸಮಾಧಾನ ಮಾಡಿದ್ದರು. ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದರು.  ಬಾದ್ಶಾ ಕಿಚ್ಚ ಸುದೀಪ್ ಅವರ ಗಮನಕ್ಕೂ ಈ ವಿಡಿಯೋ ಬಂತು. ತಕ್ಷಣ ತಮ್ಮ ತಂಡದ ಮೂಲಕ ಆ ಯುವಕನ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿದರು ಕಿಚ್ಚ.

ಆತನ ಆರೋಗ್ಯದ ಬಗ್ಗೆ ವಿಚಾರಿಸಿದ ಕಿಚ್ಚ, ಹೆಚ್ಚು ಕಾಲ ಜೀವಹಿಸಲು ತಿಳಿಸಿದರು. ಕೊರೋನಾ ಕಾಟದಿಂದಾಗಿ ಸದ್ಯ ಅಲ್ಲದಿದ್ದರೂ ಇನ್ನು ಕೆಲವೇ ದಿನಗಳಲ್ಲಿ ಆತನನ್ನು ಭೇಟಿಯಾಗುವ ಭರವಸೆ ನೀಡಿದರು. ಮಾತ್ರವಲ್ಲದೆ, ಕಿಚ್ಚನ ವಿಡಿಯೋ ಕಾಲ್ ನೋಡಲು ಆ ಯುವಕನ ಮನೆಯವರು, ಗೆಳೆಯರು ಎಲ್ಲರೂ ಗುಂಪಾಗಿ ನಿಂತ ಕಾರಣ ಮಾಸ್ಕ್ ಧರಿಸಿ, ಸೋಷಿಯಲ್ ಡಿಸ್ಟೆನ್ಸ್ ಕಾಪಾಡಲು ಸಹ ಕಿವಿಮಾತು ಹೇಳಿದರು ಬಾದ್ಶಾ.



ಅದು ಮಾತ್ರವಲ್ಲ, ಕೆಲ ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್, ತಮ್ಮ ಮನೆಯಲ್ಲಿ ತಮ್ಮ ಜೊತೆಗೇ ಇರುವ ಅಭಿಮಾನಿ ಮಹಾದೇವ್ ಹುಟ್ಟುಹಬ್ಬಕ್ಕೆ ಪಿಯಾನೋ ನುಡಿಸುವ ಮೂಲಕ ವಿಶ್ ಮಾಡಿದ್ರು. ಮಾತ್ರವಲ್ಲ ಆ ವಿಡಿಯೋ ಶೇರ್ ಮಾಡುವ ಮೂಲಕ ಅಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಶುಭಾಶಯ ತಿಳಿಸಿದ್ರು. ಇನ್ನು ಬಾದ್ಶಾ ಲಾಕ್​ಡೌನ್ ಅಂತ ಸುಮ್ಮನೇ ಮನೆಯಲ್ಲಿ ಕುಳಿತಿಲ್ಲ. ಬದಲಾಗಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ತಮ್ಮ ಅಭಿಮಾನಿ ಸಂಘಗಳ ಮೂಲಕ ಮಾಡಿಸುತ್ತಿದ್ದಾರೆ. ಮಾತ್ರವಲ್ಲ, ಎರಡೂ ಕಿಡ್ನಿ ಫೇಲ್ಯೂರ್ ಆದ ಯುವಕನಿಗೆ ಡಯಾಲಿಸಿಸ್, ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆ, ಲಾಕ್​ಡೌನ್​​​ನಿಂದ ಆರ್ಥಿಕ ಸಮಸ್ಯೆಗೆ ಒಳಗಾಗಿ ಯುವತಿಯ ಮದುವೆಗೆ ಧನಸಹಾಯ, ಬಡತನದಿಂದಾಗಿ ಸ್ಕೂಲ್ ಫೀಸ್ ಕಟ್ಟಲಾಗದೆ ಕಷ್ಟಕ್ಕೆ ಸಿಲುಕಿದ್ದ ಬಾಲಕಿಯ ಒಂದು ವರ್ಷದ ಶಾಲಾ ಶುಲ್ಕ

ಹೀಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಮೂಲಕ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಸಿದ್ದಾರೆ ಬಾದ್ಶಾ.

ಬರೋಬ್ಬರಿ 4 ಲಕ್ಷ ಬೆಲೆಯ ಮಾಸ್ಕ್​​!; ಅಷ್ಟಕ್ಕೂ ಇದರಲ್ಲೇನಿದೆಬಾಲಿವುಡ್​ ಅಂಗಳದಲ್ಲಿ ಸಾಲು ಸಾಲು ಕೊರೋನಾ ಪ್ರಕರಣ; ಆತಂಕದಲ್ಲಿ ಅಭಿಮಾನಿಗಳು
Published by: Harshith AS
First published: July 12, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading