news18-kannada Updated:August 16, 2020, 2:55 PM IST
ಧೋನಿ-ಕಿಚ್ಚ ಸುದೀಪ್
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅದ್ಭುತ ಫಿನಿಶರ್, ಕೂಲ್ ಕ್ಯಾಪ್ಟನ್ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಟೀಂ ಇಂಡಿಯಾಗೆ ನಿವೃತ್ತಿ ಘೋಷಿಸಿದ್ದಾರೆ. ಧೋನಿಯ ಈ ದಿಢೀರ್ ನಿರ್ಧಾರ ಅನೇಕರಿಗೆ ಶಾಕ್ ನೀಡಿದೆ. ಧೋನಿಯ ಕ್ರಿಕೆಟ್ ವಿದಾಯಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ . ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಕೂಡ ಮಾಹಿ ಬಗ್ಗೆ ಟ್ವೀಟ್ ಮಾಡಿದ್ದಾರೆ.
‘ಅದ್ಭುತ ಕ್ರಿಕೆಟ್ ಆಗಿ ಬಂದವರು, ಶ್ರೇಷ್ಠ ನಾಯಕರಾಗಿ ನಿವೃತ್ತಿಯಾಗಿದ್ದಾರೆ. ದಿಢೀರ್ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ನಾವು ನೀವೆಲ್ಲರು ಧೋನಿ ಆಟವನ್ನು ನೋಡಿದ್ದೇವೆ. ಎಂಜಾಯ್ ಮಾಡಿದ್ದೇವೆ. ಆದರೆ ಆ ಆಟವೇ ಕೊನೆ ಎಂದು ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಈ ನಿವೃತ್ತಿ ಸಲುವಾಗಿಯೇ ಅದ್ಧೂರಿ ಬೀಳ್ಕೊಡುಗೆ ಮಾಡಲೇಬೇಕು’ ಎಂದು ಕಿಚ್ಚ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕಿಚ್ಚ ಸಿನಿಮಾದಷ್ಟೇ ಕ್ರಿಕೆಟ್ ಅನ್ನು ಇಷ್ಟ ಪಡುತ್ತಾರೆ. ಬಿಡುವು ಸಿಕ್ಕಾಗ ಕ್ರಿಕೆಟ್ ಆಡುತ್ತಾರೆ. ಸಿನಿಮಾ ರಂಗದವರೆಲ್ಲರನ್ನು ಸೇರಿಸಿಕೊಂಡು ಕ್ರಿಕೆಟ್ ಪಂದ್ಯವನ್ನು ಆಡಿದ್ದಾರೆ. ಇದೀಗ ಎಲ್ಲರ ನೆಚ್ಚಿನ ಟೀಂ ಇಂಡಿಯಾದ ಕ್ರಿಕೆಟಿಗ ಧೋನಿ ದಿಢೀರ್ ನಿವೃತ್ತಿ ಬಗ್ಗೆ ಕೊಂಚ ಬೇಸರದಿಂದ ಟ್ವೀಟ್ ಮಾಡಿದ್ದಾರೆ ಕಿಚ್ಚ.
ಸದ್ಯ ಕಿಚ್ಚ ಸುದೀಪ್ ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ತಮ್ಮ ನಿರೂಪ್ ಭಂಡಾರಿ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಮುನ್ನೆಚ್ಚರಿಕೆಯನ್ನುವಹಿಸಿಕೊಂಡು ಫ್ಯಾಂಟಮ್ ಚಿತ್ರತಂಡ ಶೂಟಿಂಗ್ ನಡೆಸುತ್ತಿದೆ.
ಇತ್ತೀಚೆಗೆ ಕಿಚ್ಚ ಸುದೀಪ್ ಫ್ಯಾಂಟಮ್ ಚಿತ್ರದ ಶೂಟಿಂಗ್ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆನಂತರ ಕಿಚ್ಚ ಸುದೀಪ್ ಅವರ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಅಭಿಮಾನಿಗಳು ಕಿಚ್ಚನ ಹೊಸ ಲುಕ್ಗೆ ಫೀದಾ ಆಗಿದ್ದರು.
Published by:
Harshith AS
First published:
August 16, 2020, 2:50 PM IST