Kiccha Sudeep: ಸುಶಾಂತ್ ಆತ್ಮಹತ್ಯೆಯ ಬಗ್ಗೆ ಸುದೀಪ್ ಅನುಮಾನ!; ಜೋರಾಯಿತು ಅಭಿಮಾನಿಗಳ ಸಿಬಿಐ ತನಿಖೆಗೆ ಒತ್ತಡ!

Sushant Singh Rajput: ಕಿಚ್ಚ ಸುದೀಪ್ ಅವರೂ ಸುಶಾಂತ್ ಸಿಂಗ್ ನಟನೆಯನ್ನು ಮೆಚ್ಚಿಕೊಂಡಿದ್ದರಂತೆ. ಸುಶಾಂತ್ ಆಗಲೇ ತುಂಬಾ ಸಕ್ಸಸ್​​​ಫುಲ್ ಆಗಿದ್ದರು. ಇಲ್ಲದಿದ್ದರೆ ನಮಗೆ ಯಾರಿಗೆ ತಾನೇ ಅವರ ಬಗ್ಗೆ ತಿಳಿದಿರುತ್ತಿತ್ತು. ಅಲ್ಲಿ ಕೇವಲ ಸೋಲಿನಿಂದ ಆಗಿರೋದಲ್ಲ ಬೇರೇನೋ ಸ್ಟ್ರಾಂಗ್ ಕಾರಣವಿದೆ ಎಂಬುದು ಕಿಚ್ಚ ಸುದೀಪ್ ಅಭಿಮತ.

news18-kannada
Updated:July 10, 2020, 5:03 PM IST
Kiccha Sudeep: ಸುಶಾಂತ್ ಆತ್ಮಹತ್ಯೆಯ ಬಗ್ಗೆ ಸುದೀಪ್ ಅನುಮಾನ!; ಜೋರಾಯಿತು ಅಭಿಮಾನಿಗಳ ಸಿಬಿಐ ತನಿಖೆಗೆ ಒತ್ತಡ!
ಸುಶಾಂತ್ ಸಿಂಗ್-ಕಿಚ್ಚ ಸುದೀಪ್​
  • Share this:
ಸಮಸ್ಯೆ ಎದುರಾದಾಗ ಅದನ್ನ ಎದುರಿಸಿ ನಿಲ್ಲಬೇಕು.. ಗೆಲ್ಲಬೇಕು.. ಅದರ ಹೊರತು ಸಾವಿಗೆ ಶರಣಾಗೋದು ಪರಿಹಾರವಲ್ಲ.  ಹೀಗಂತ  ಛಿಚ್ಛೋರೆ ಸಿನಿಮಾದ ತನ್ನ ಪಾತ್ರದ  ಮೂಲಕ ಸಂದೇಶ ಸಾರಿದ್ದರು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್. ಆದರೆ ಅವರೇ ನಿಜಜೀವನದಲ್ಲಿ ನೇಣಿಗೆ ಶರಣಾಗಿಬಿಟ್ಟರು. ಸುಶಾಂತ್ ದೂರಾಗಿ ಒಂದು ತಿಂಗಳಾಗಿದೆ. ಸದ್ಯ ಅವರ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಹುಟ್ಟಿಕೊಂಡಿವೆ.

ಇದು ಆತ್ಮಹತ್ಯೆಯಲ್ಲ ಪ್ರೀ ಪ್ಲ್ಯಾನ್ಡ್ ಕೋಲ್ಡ್ ಬ್ಲಡ್ ಮರ್ಡರ್ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಜತೆಗೆ ಸಿಬಿಐ ತನಿಖೆಯಾಗಬೇಕು ಅಂತ ಸುಶಾಂತ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದೀಗ ಹಿಂದಿ ವೆಬ್​ಸೈಟ್​ವೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ ಕಿಚ್ಚ ಸುದೀಪ್​​​ ಸುಶಾಂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಅವಕಾಶಗಳಿಲ್ಲ ಅಥವಾ ಸೋಲು ಸುಶಾಂತ್ ಸಾವಿಗೆ ಕಾರಣ ಅನ್ನೋದನ್ನ ನಾನು ಒಪ್ಪೋದಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ಹೌದು, ಕಿಚ್ಚ ಸುದೀಪ್ ಅವರೂ ಸುಶಾಂತ್ ಸಿಂಗ್ ನಟನೆಯನ್ನು ಮೆಚ್ಚಿಕೊಂಡಿದ್ದರಂತೆ. ಸುಶಾಂತ್ ಆಗಲೇ ತುಂಬಾ ಸಕ್ಸಸ್​​​ಫುಲ್ ಆಗಿದ್ದರು. ಇಲ್ಲದಿದ್ದರೆ ಯಾರಿಗೆ ತಾನೇ ಅವರ ಬಗ್ಗೆ ತಿಳಿದಿರುತ್ತಿತ್ತು. ಅಲ್ಲಿ ಕೇವಲ ಸೋಲಿನಿಂದ ಆಗಿರೋದಲ್ಲ ಬೇರೇನೋ ಸ್ಟ್ರಾಂಗ್ ಕಾರಣವಿದೆ ಎಂಬುದು ಕಿಚ್ಚ ಸುದೀಪ್ ಅಭಿಮತ.

ನಾನು ಕುಟುಂಬ ಸಮೇತ ಒಮ್ಮೆ ಬ್ಯಾಂಕಾಕ್​ಗೆ ಹೋಗಿದ್ದಾಗ, ಏರ್​ಪೋರ್ಟ್​ನಲ್ಲಿ ಸುಶಾಂತ್ ಸಿಕ್ಕಿದ್ದರು. ಯಾವಾಗಲೂ ನಗುತ್ತಿದ್ದ ವ್ಯಕ್ತಿ ಸುಶಾಂತ್. ಅವರನ್ನು ನೋಡಿದಾಕ್ಷಣ ನನ್ನ ಕುಟುಂಬದವರೆಲ್ಲರೂ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡೆವು. ಆತ ಸಕ್ಸಸ್​​ಫುಲ್ ಆಗಿರದಿದ್ದರೆ, ಜನ ಗುರುತಿಸಲ್ಲ ಅಂದ್ರೆ, ಪ್ರೀತಿಸಲ್ಲ ಅಂದ್ರೆ ಯಾರಾದ್ರೂ ಯಾಕೆ ಹೋಗಿ ಅವರ ಜತೆ ಫೋಟೋ ತೆಗೆದುಕೊಳ್ತಾರೆ? ಎಲ್ಲ ನಟರ ಜತೆಗೂ ಹಾಗೆ ಹೋಗಿ ಮಾತನಾಡಿಸಲು ಸಾಧ್ಯವಿಲ್ಲ, ನಮಗೆ ಅವರು ಇಷ್ಟವಿರಬೇಕು, ಆಗ ಮಾತ್ರ ಅವರ ಬಳಿ ಹೋಗಿ ಮಾತನಾಡುತ್ತೇವೆ, ಫೋಟೋ ತೆಗೆದುಕೊಳ್ತೇವೆ ಎಂದಿದ್ದಾರೆ ಕಿಚ್ಚ ಸುದೀಪ್.

ಪ್ರತಿದಿನ ನೂರಾರು ಮಂದಿ ಬಾಲಿವುಡ್​ಗೆ ಬರುತ್ತಾರೆ. ಆದರೆ ಸಕ್ಸಸ್ ಆಗಿರುವವರು ಕೆಲವರಷ್ಟೇ. ಅಂಥವರಿಗೆ ಹೋಲಿಸಿದರೆ ಸುಶಾಂತ್ ಕೊಂಚ ಹೆಚ್ಚೇ ಯಶಸ್ಸು ಗಳಿಸಿದ್ದರು ಅನ್ನೋದು ನನ್ನ ನಂಬಿಕೆ. ಹೀಗಾಗಿಯೇ ಸಕ್ಸಸ್ ಹ್ಯಾಂಡಲ್ ಮಾಡಲಾಗದೇ ಅಥವಾ ಸೋಲಿನಿಂದ ಕಂಗೆಟ್ಟು ಅವರು ಈ ನಿರ್ಧಾರ ಮಾಡಿದ್ದಾರೆ ಅಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದೂ ಸಹ ಬಾದ್ಶಾ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಹಾಗೆಯೇ ಸೋಲು, ಗೆಲುವುಗಳ ಬಗ್ಗೆಯೂ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಮ್ಮ ಜೀವನದಲ್ಲಿ ಎಲ್ಲದರ ಆಯ್ಕೆಗಳನ್ನೂ ನಾವೇ ಮಾಡಿಕೊಳ್ಳುತ್ತೇವೆ. ನಾವು ಆಯ್ಕೆ ಮಾಡಿಕೊಳ್ಳುವ ಸಂಬಂಧ, ಕರಿಯರ್ ಎಲ್ಲದಕ್ಕೂ ನಾವೇ ಕಾರಣ. ಸೋಲು ಎಂಬುದನ್ನು ನಾವು ಯಾವಾಗಲೂ ಹೊತ್ತುಕೊಂಡೇ ಇರುತ್ತೇವೆ ಎಂದು ಹೇಳಿಕೊಂಡಿದ್ದಾರೆ ಬಾದ್ಶಾ. ಅವರ ಪ್ರಕಾರ ಸೋಲಿಗಿಂತ ಹೆಚ್ಚಾಗಿ ಸಕ್ಸಸ್ ಹ್ಯಾಂಡಲ್ ಮಾಡೋದು ಕಷ್ಟವಂತೆ. ಆದರೆ ಪ್ರತಿಯೊಬ್ಬರೂ ಅವರದೇ ರೀತಿಯಲ್ಲಿ ಸಕ್ಸಸ್ ಮತ್ತು ಫೇಲ್ಯೂರ್​​ಗಳನ್ನ ನೋಡುತ್ತಾರೆ ಎಂಬುದು ಬಾದ್ಶಾ ಕಿಚ್ಚ ಸುದೀಪ್ ನಂಬಿಕೆ.

ಎಲ್ಲ ಸಿನಿಮಾಗಳಿಗೂ ಒಂದೇ ರೀತಿ ಸಮಯ, ಫ್ಯಾಷನ್, ಎಫರ್ಟ್ ಹಾಕಿರುತ್ತೇವೆ. ಒಂದು ಸಿನಿಮಾ ಸೋತಾಗ ಬೇಸರವಾಗೇ ಆಗುತ್ತೆ. ಯಾರಿಗೂ ಸೋಲನ್ನು ಒಪ್ಪಿಕೊಳ್ಳಲು ಇಷ್ಟವಿರಲ್ಲ. ಆದರೆ ಒಬ್ಬೊಬ್ಬರು ಸೋಲು, ಗೆಲುವುಗಳನ್ನು ನೋಡುವ ದೃಷ್ಟಿಕೋನ ಬೇರೆ ಬೇರೆ ಇರುತ್ತೆ ಎಂಬುದು ಕಿಚ್ಚನ ಅಭಿಪ್ರಾಯ.ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಮಾದರಿ ಹೋಲುವ ವ್ಯಕ್ತಿಯ ವಿಡಿಯೋ
Published by: Harshith AS
First published: July 10, 2020, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading