Vikranth Rona: ಜೀ5 ಓಟಿಟಿಯಲ್ಲಿ 'ವಿಕ್ರಾಂತ್ ರೋಣ' ದಾಖಲೆ; 24 ಗಂಟೆಯಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್

ಥಿಯೇಟರ್​ನಲ್ಲಿ ವಿಕ್ರಾಂತ ರೋಣ ಸಿನಿಮಾ ಮಿಸ್​ ಮಾಡಿಕೊಂಡಿದ್ದ ಪ್ರೇಕ್ಷಕರು ಓಟಿಟಿಯಲ್ಲಿ ನೋಡಲು ಮುಗಿಬಿದ್ದಿದ್ದಾರೆ. ಬರೀ 24 ಗಂಟೆಗಳಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್ ಪಡೆದುಕೊಂಡಿದೆ.

ದಾಖಲೆ ಬರೆದ ವಿಕ್ರಾಂತ್​ ರೋಣ

ದಾಖಲೆ ಬರೆದ ವಿಕ್ರಾಂತ್​ ರೋಣ

  • Share this:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣವು (Vikranth Rona) ಜೀ5 ಓಟಿಟಿಯಲ್ಲಿ (Zee 5 OTT) ಅವರ ಜನ್ಮ ದಿನದಂದೆ ತೆರೆಕಂಡು ಭರ್ಜರಿಯಾಗಿ ವೀಕ್ಷಿಸಲ್ಪಡುತ್ತಿದೆ.  ಜೀ5 ಒಟಿಟಿ ಯಲ್ಲಿ ಪ್ರಸಾರ ಶುರುವಾದ 24 ಗಂಟೆಗಳಲ್ಲಿಯೇ ಸುಮಾರು 50 ಕೋಟಿ  ನಿಮಿಷ ಜನ ಸಿನಿಮಾ ವೀಕ್ಷಿಸಿದ್ದಾರೆ ಎಂದು ಚಿತ್ರತಂಡ (Film Team) ಹೇಳಿದೆ. ವಿಕ್ರಾಂತ್ ರೋಣ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

3ಡಿಯಲ್ಲಿ ಬಿಡುಗಡೆಯಾದ ಕೆಲವೇ ಕನ್ನಡ ಚಿತ್ರಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ಕೂಡ ಒಂದು. ಈ ಚಿತ್ರವು ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿದ್ದು, ಚಿತ್ರದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಆಶೋಕ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಜಾಕ್ ಮಂಜು ಈ ಚಿತ್ರ ನಿರ್ಮಿಸಿದ್ದಾರೆ.  

ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಮುಗಿಬಿದ್ದ ಜನ

ಕಿಚ್ಚ ಹುಟ್ಟುಹಬ್ಬದ ಸಂಭ್ರಮದಲ್ಲೇ ಈ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಜೀ5 ಓಟಿಟಿ ಫ್ಲಾಟ್‌ಫಾರ್ಮ್‌ಗೆ ಬಂದಿದೆ. ಥಿಯೇಟರ್​ನಲ್ಲಿ ಸಿನಿಮಾ ಮಿಸ್​ ಮಾಡಿಕೊಂಡಿದ್ದ ಪ್ರೇಕ್ಷಕರು ಓಟಿಟಿಯಲ್ಲಿ ನೋಡಲು ಮುಗಿಬಿದ್ದಿದ್ದಾರೆ. ಬರೀ 24 ಗಂಟೆಗಳಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್ ಪಡೆದುಕೊಂಡಿದೆ.

200 ಕೋಟಿಗೂ ಅಧಿಕ ಕಲೆಕ್ಷನ್​​

ವಿಕ್ರಾಂತ್ ರೋಣ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ವಿಕ್ರಾಂತ್ ರೋಣ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಸ್ವತಃ ಜೀ5 ಸಂಸ್ಥೆ ಹೇಳಿಕೊಂಡಿತ್ತು. ಹೊಸ ಅವತಾರದಲ್ಲಿ ಕಿಚ್ಚನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿತ್ತು. ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣದ ಸಿನಿಮಾ ಉತ್ತರ ಭಾರತದಲ್ಲೂ ವಿಕ್ರಾಂತ್​ ರೋಣ ಭರ್ಜರಿ ಪ್ರದರ್ಶನ ಕಂಡಿತ್ತು. ಇದೀಗ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಭರ್ಜರಿ ಸೌಂಡ್​ ಮಾಡ್ತಿದೆ.

ಇದನ್ನೂ ಓದಿ: Rashmika Madanna: ಶಾಲಾ ಕಾರ್ಯಕ್ರಮದಲ್ಲಿ ಶ್ರೀವಲ್ಲಿ ಸಖತ್​ ಡ್ಯಾನ್ಸ್​; ಬಾಲ್ಯದ ಫೋಟೋದಲ್ಲಿ She So Cute!

[caption id="attachment_834681" align="alignnone" width="1600"]vikranth rona crosses 50 crore views in ott ದಾಖಲೆ ಬರೆದ ವಿಕ್ರಾಂತ್​ ರೋಣ[/caption]

ಇನ್ಮುಂದೆ 6 ತಿಂಗಳಿಗೊಮ್ಮೆ ನನ್ನ ಸಿನಿಮಾ 
ಕಿಚ್ಚ ಸುದೀಪ್  ಅವರು ವಿಕ್ರಾಂತ್ ರೋಣ ಚಿತ್ರಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಂಡರು. ಈ ಚಿತ್ರ ತೆರೆಗೆ ಬಂದು ಗೆದ್ದು ಬೀಗಿದೆ. ಈಗ ಸುದೀಪ್ ಅವರು ಬರ್ತ್​ಡೇ ದಿನ ಹೊಸ ಘೋಷಣೆ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಸೂಚನೆ ಅವರ ಕಡೆಯಿಂದ ಸಿಕ್ಕಿದೆ. ಇನ್ಮುಂದೆ ಆರು ತಿಂಗಳಿಗೊಮ್ಮೆ ನನ್ನ ಸಿನಿಮಾ ರಿಲೀಸ್ ಆಗುವ ರೀತಿಯಲ್ಲಿ ಪ್ಲ್ಯಾನ್ ಮಾಡುತ್ತಿದ್ದೇನೆ ಎಂದಿದ್ದಾರೆ ಸುದೀಪ್.


ಅನೂಪ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರ


ಸುದೀಪ್ ಈ ಬಾರಿ ಹುಟ್ಟುಹಬ್ಬಕ್ಕೆ ಯಾವುದೇ ಹೊಸ ಸಿನಿಮಾ ಘೋಷಿಸಲಿಲ್ಲ. ಹೊಸ ಸಿನಿಮಾ ಟೀಸರ್, ಪೋಸ್ಟರ್‌ ಕೂಡ ಗಿಫ್ಟ್ ಆಗಿ ಸಿಗಲಿಲ್ಲ. ತಮ್ಮ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣ ಸಿನಿಮಾ ಓಟಿಟಿಗೆ ಬರುತ್ತಿರುವುದೇ ದೊಡ್ಡ ಗಿಫ್ಟ್ ಎಂದು ಹೇಳಿದ್ದರು. 24 ಗಂಟೆಗಳಲ್ಲಿ ವಿಕ್ರಾಂತ್ ರೋಣ 50 ಕೋಟಿ ನಿಮಿಷಗಳ ಸ್ಟ್ರೀಮಿಂಗ್ ಕಂಡು ಸದ್ದು ಮಾಡ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ. ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲೂ ಮತ್ತೊಂದು ಸಿನಿಮಾ ಸಿದ್ಧವಾಗಲಿದೆ.




ಕಿಚ್ಚ ಸುದೀಪ್ ಅವರು ಇಂದು (ಸೆಪ್ಟೆಂಬರ್ 2) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾಟ ಜೋರಾಗಿತ್ತು. ಈ ಕಾರಣದಿಂದ ಕಿಚ್ಚನ ಬರ್ತ್​ಡೇ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಬರ್ತ್​​ಡೇ ಜೋರಾಗಿದೆ ಆಚರಿಸಿಕೊಂಡಿದ್ದಾರೆ
Published by:Pavana HS
First published: