ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ನೋಡಿದ ಕನ್ನಡ ಸಿನಿ ರಸಿಕರು ಇದು ಸ್ಯಾಂಡಲ್ ವುಡ್ನ್ನು ಇನ್ನೊಂದು ಲೇವಲ್ಗೆ ತೆಗೆದುಕೊಂಡು ಹೋಗುವುದು ಪಕ್ಕಾ ಎನ್ನುತ್ತಿದ್ದಾರೆ. ಈಗಾಗಲೇ ಟ್ರೈಲರ್ ಲಾಂಚ್ (Trailer Launch) ಕಾರ್ಯಕ್ರಮದಲ್ಲಿ ವಿಕ್ರಾಂತ್ ರೋಣನನ್ನು ಕಣ್ಣುತುಂಬಿಸಿಕೊಂಡಿದ್ದ ಗಣ್ಯರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗುವ ಮೂಲಕ ಹೊಸ ಸಂಚಲನವನ್ನೇ ಮೂಡಿಸಿದೆ. ಟ್ರೈಲರ್ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ ಆಗಿದ್ದು, ಎಲ್ಲಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.
ನಿರೀಕ್ಷೆ ದುಪ್ಪಟ್ಟು ಮಾಡಿದ ಟ್ರೈಲರ್:
ಬಿಡುಗಡೆಯಾಗಿರು ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನಯು ದುಪ್ಪಟ್ಟು ಮಾಡಿದೆ. ಕಥೆಯಲ್ಲಿನ ಟ್ವಿಸ್ಟ್ ಗಳು ಸಿನಿ ಪ್ರೇಮಿಗಳಲ್ಲಿ ಸಿನಿಮಾ ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ನಿರ್ದೇಶಕ ಅನುಫ್ ಭಂಡಾರಿ ಸಖತ್ ಟ್ವಿಸ್ಟ್ ನೀಡಿದ್ದು, ಟ್ರೈಲರ್ ನೋಡಿದವರಲ್ಲಿ ಸುದೀಪ್ ಚಿತ್ರದಲ್ಲಿ ಡಬಲ್ ರೋಲ್ ನಲ್ಲಿ ನಟಿಸಿದ್ದಾರಾ ಎಂಬ ಸಂಶಯ ಮೂಡುವಂತಿದೆ.
ಗುಮ್ಮಾ ಇಸ್ ಬ್ಯಾಕ್ ಎಂದ ಕಿಚ್ಚ:
ಹೌದು, ಟ್ರೈಲರ್ ನ ಪ್ರಾರಂಭದಲ್ಲಿಯೇ ಒಂದು ಹಳ್ಳಿಯ ಚಿತ್ರಣ ತೋರಿಸಲಾಗಿದ್ದು, ಒಮದು ಭಯಾನಕ ಕತೆ ಅಲ್ಲಿ ಇಲ್ಲಿಯವರೆಗೂ ಚಾಲ್ತಿಯಲ್ಲಿದೆ ಎನ್ನುತ್ತಾ ನಿರೂಪ್ ಭಂಡಾರಿ ಆ ಹಳ್ಳಿಗೆ ಎಂಟ್ರಿ ನೀಡುತ್ತಾರೆ. ಚಕ್ರವ್ಯೂಹದಂತಹ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿಯಾಗಿ ಕಿಚ್ಚ ಸುದೀಪ್ ಬರುವ ಮೂಲಕ ಸುದೀಪ್ ಇಲ್ಲಿ ಓರ್ವ ಪೊಲೀಸ್ ಎಂಬ ಅಂಶವನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ. ಈ ಜಾಗದಲ್ಲಿನ ನಿಗೂಡವನ್ನು ಬೆದಿಸುವ ಅಧಿಕಾರಿಯಾಗಿ ಕಿಚ್ಚ ಕಾಣಿಸಕೊಮಡಂತಿದೆ. ಆದರೆ ಇಲ್ಲಿ ವಿಕ್ರಾಂತ್ ರೊನನಿಗೆ ವಿಲನ್ ಯಾರು ಎಂಬುದನ್ನು ಟ್ರೈಲರ್ ನಲ್ಲಿ ಬಿಟ್ಟು ಕೊಟ್ಟಿಲ್ಲ.
ಇದನ್ನೂ ಓದಿ: Vikrant Rona: ದ್ವಿಪಾತ್ರದಲ್ಲಿ ಕಿಚ್ಚ, ‘ವಿಕ್ರಾಂತ್ ರೋಣ‘ ಹೀರೋನಾ? ವಿಲನ್ನಾ?
5 ಭಾಷೆಗಳಲ್ಲಿ ಟ್ರೈಲರ್ ಲಾಂಚ್ ಮಾಡಿದ ಸ್ಟಾರ್ಗಳು:
ವಿಕ್ರಾಂತ್ ರೋಣ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದ್ದು, ತೆಲುಗು ಟ್ರೈಲರ್ ಅನ್ನು ರಾಮ್ಚರಣ್ ರಿಲೀಸ್ ಮಾಡಿದ್ದಾರೆ. ಅದರಂತೆ ಹಿಂದಿಯಲ್ಲಿ ಕಿಚ್ಚನ ಸ್ನೇಹಿತರಾದ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ಮಲೆಯಾಳಂ ನಲ್ಲಿ ದುಲ್ಖರ್ ಸಲ್ಮಾನ್ ಚಿತ್ರದ ಟ್ರೈಲರ್ ನ್ನು ಡಿಜಿಟಲ್ ಆಗಿ ಬಿಡುಗಡೆ ಮಾಡಿದ್ದಾರೆ. ಆದರೆ ಇಂಗ್ಲಿಷ್ ಟ್ರೈಲರ್ ಅನ್ನು ಯಾರು ರಿಲೀಸ್ ಮಾಡಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ದ್ವಿಪಾತ್ರದಲ್ಲಿ ಮಿಂಚಲಿದ್ದಾರಾ ಸುದೀಪ್?:
ಹೌದು, ಟ್ರೈಲರ್ ನೋಡಿದ ಎಲ್ಲರಲ್ಲಿಯೂ ಇದೊಂದು ಪ್ರಶ್ನೆ ಮೂಡಿದ್ದು, ಸುದೀಪ್ ವಿಕ್ರಾಂತ್ ರೋಣ ಚಿತ್ರದ್ಲಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಟ್ರೈಲರ್ ನಲ್ಲಿ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ಕೊನೆಯಲ್ಲಿನ ಟ್ವಿಸ್ಟ್ ಸುದೀಪ್ ಬಗ್ಗೆ ಹೊಸ ಕುತೂಹಲ ಕೆರಳಿಸುತ್ತಿದೆ. ಇದರ ಮೂಲಕ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಾ ಎಂಬ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Vikrant Rona: 'ವಿಕ್ರಾಂತ್ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್ವುಡ್, ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು
ವಿಲನ್ ಯಾರು?:
ಟ್ರೈಲರ್ ನೋಡಿದವರಲ್ಲಿ ಸಿನಿಮಾದ ಕುರಿತು ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದು, ನಿರ್ದೇಶಕ ಅನೂಫ್ ಭಂಡಾರಿ ಚಿತ್ರವದಲ್ಲಿ ಸಖತ್ ಟ್ವೀಸ್ಟ್ ಇಟ್ಟಿರುವುದಂತೂ ಪಕ್ಕಾ ಎನ್ನುವಂತಾಗಿದೆ. ಅದರಲ್ಲಿಯೂ ಸುದೀಪ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರಾ ಎಂಬ ಒಂದು ಪ್ರಶ್ನೆಯಾದರೆ, ಇತ್ತ ಸಿನಿಮಾದ ವಿಲನ್ ಯಾರು ಎನ್ನುವುದು ಇನ್ನೂ ಚಿತ್ರತಂಡ ರಿವೀಲ್ ಮಾಡದಿರುವುದರಿಂದ ಸುದೀಪ್ ಅವರು ಹೀರೋನಾ ಅಥವಾ ವಿಲನ್ನಾ ಎಂಬ ಪ್ರಶ್ನೆಗಳು ಕಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ