• Home
  • »
  • News
  • »
  • entertainment
  • »
  • Vikrant Rona Release: ರಿಲೀಸ್​ ಆಯ್ತು ವಿಕ್ರಾಂತ್ ರೋಣ, ಫ್ಯಾಂಟಮ್​ ಲೋಕದಲ್ಲಿ ಕಿಚ್ಚನ ಮೋಡಿ

Vikrant Rona Release: ರಿಲೀಸ್​ ಆಯ್ತು ವಿಕ್ರಾಂತ್ ರೋಣ, ಫ್ಯಾಂಟಮ್​ ಲೋಕದಲ್ಲಿ ಕಿಚ್ಚನ ಮೋಡಿ

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

Kiccha Sudeep: ಗಲ್ಫ್​ ದೇಶಗಳಲ್ಲಿ ಈಗಾಗಲೇ ಸಿನಿಮಾ ಬಿಡುಗಡೆ ಆಗಿ ಭರ್ಜರಿ ರೆಸ್ಪಾನ್ಸ್​ ಪಡೆಯುತ್ತಿದ್ದು, ಕರ್ನಾಟಕದಲ್ಲಿ ಸಹ ವಿಕ್ರಾಂತ್ ರೋಣ ಅಬ್ಬರ ಶುರುವಾಗಿದೆ.  

  • Share this:

ಸ್ಯಾಂಡಲ್​ವುಡ್​ನ (Sandalwood) ಬಹು ನಿರೀಕ್ಷಿತ ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ತೆರೆಗೆ ಬಂದಿದ್ದು, ಎಲ್ಲೆಡೆ ಅಭಿಮಾನಿಗಳು (Fans) ಸಂಭ್ರಮ ಆಚರಿಸಿದ್ದಾರೆ. ಏಳು ಗಂಟೆಗೆ ಊರ್ವಶಿ ಥಿಯೇಟರ್ ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗಿದ್ದು, ಥಿಯೇಟರ್ ಸುತ್ತ ಸುದೀಪ್ ಕಟೌಟ್​ಗಳು ರಾರಾಜಿಸುತ್ತಿವೆ. ಥಿಯೇಟರ್ ಬಳಿ ಸುದೀಪ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ವಿಆರ್ ಫ್ಲಾಗ್ ಹಿಡಿದು ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾವನ್ನು ಸ್ವಾಗತಿಸಿದ್ದಾರೆ.  


ಸಿನಿಮಾ ನೋಡಿದ ಪ್ರಿಯಾ ಸುದೀಪ್


ಇನ್ನು ಸುದೀಪ್ ಪತ್ನಿ ಪ್ರಿಯಾ, ನಿರ್ದೇಶಕ ಅನೂಪ್ ಭಂಡಾರಿ ಉರ್ವಶಿ ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡುತ್ತಿದ್ದು, ಎಲ್ಲೆಡೆ ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾ ನೋಡಲು ಮುಗಿ ಬಿದ್ದಿದ್ದಾರೆ  ಜಗತ್ತಿನಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನ 2500 ಅಧಿಕ ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಕಾಣುತ್ತಿದೆ.


ರಾಜ್ಯದ ವಿವಿಧ ಭಾಗದಲ್ಲಿ ಸಹ ಸಿನಿಮಾ ಬಿಡುಗಡೆಯ ಸಂಭ್ರಮ ಮನೆ ಮಾಡಿದ್ದು, ಶಿವಮೊಗ್ಗದಲ್ಲಿ ಸುದೀಪ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದು, ನಗರದ ಹೆಚ್.ಪಿ.ಸಿ. ಚಲನಚಿತ್ರ ಮಂದಿರದಲ್ಲಿ ಅಭಿಮಾನಿಗಳ ದಂಡೇ ಸೇರಿದೆ. ಇಂದು ಫ್ಯಾನ್ಸ್​ ಶೋ ಆಯೋಜಿಸಲಾಗಿದ್ದು, ಅಭಿಮಾನಿಗಳು ಡೊಳ್ಳು ಕುಣಿತ ಮಾಡಿದ್ದಾರೆ.


ದೇಶದಾದ್ಯಂತ ವಿಕ್ರಾಂತ್ ರೋಣ ರಿಲೀಸ್​


ಚಿತ್ರದುರ್ಗದಲ್ಲಿ ಸಹ ಥಿಯೇಟರ್​ ಬಳಿ ಅಭಿಮಾನಿಗಳು ಜಮಾಯಿಸಿದ್ದು, ವೆಂಕಟೇಶ್ವರ ಚಿತ್ರಮಂದಿರ ಬಳಿ ಟಿಕೆಟ್ ಗಾಗಿ  ಸುದೀಪ್ ಫ್ಯಾನ್ಸ್ ಪರದಾಡಿದ್ದಾರೆ. ಹಾಗಾಗಿ ಚಿತ್ರದುರ್ಗದ ವೆಂಕಟೇಶ್ವರ ಥೇಟರ್ ಬಳಿ ನೂಕು ನುಗ್ಗಲಾಗಿದ್ದು, ಅಭಿಮಾನಿಗಳು ಟಿಕೆಟ್ ಕೌಂಟರ್ ಕಟ್ಟಡದ ಮೇಲೆ ಹತ್ತಿದ ಘಟನೆ ನಡೆದಿದೆ.


ಇದನ್ನೂ ಓದಿ: ಮಾಲಿವುಡ್​ನ ರೊಮ್ಯಾಂಟಿಕ್ ಹೀರೋಗೆ ಬರ್ತ್​ ಡೇ ಸಂಭ್ರಮ, ದುಲ್ಕರ್ ಸಲ್ಮಾನ್​ ಟಾಪ್​ ಸಿನಿಮಾಗಳಿವು


ಕಲಬುರಗಿಯ ಸಂಗಮ್ ಥಿಯೇಟರ್ ಬಳಿ ಟಿಕೆಟ್​ ಪಡೆಯ ಜನ ಪರದಾಡಿದ್ದು,  ಬೆಳಿಗ್ಗೆ 8:45ಕ್ಕೆ ಮೊದಲ ಶೋ ಆರಂಭವಾಗಿದ್ದು ಸಂಗಮ್ ಥಿಯೇಟರ್  ಮೊದಲ ಶೋ ನೋಡಲು ಅಭಿಮಾನಿಗಳು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ, ಸುದೀಪ್ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.


ಗಲ್ಫ್​ ದೇಶಗಳಲ್ಲಿ ಈಗಾಗಲೇ ಸಿನಿಮಾ ಬಿಡುಗಡೆ ಆಗಿ ಭರ್ಜರಿ ರೆಸ್ಪಾನ್ಸ್​ ಪಡೆಯುತ್ತಿದ್ದು, ಕರ್ನಾಟಕದಲ್ಲಿ ಸಹ ವಿಕ್ರಾಂತ್ ರೋಣ ಅಬ್ಬರ ಶುರುವಾಗಿದೆ.  ಮೊದಲ ದಿನ 350 ಸಿಂಗಲ್ ಸ್ಕ್ರೀನ್​, 70 ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ರಾಜ್ಯದಲ್ಲಿ ಮೊದಲ ದಿನವೇ ಬರೋಬ್ಬರಿ 2500 ಶೋ ನಡೆಯುತ್ತಿದ್ದು, 1000 ಸ್ಕ್ರೀನ್​  ನಲ್ಲಿ 3ಡಿ ಹಾಗೂ 1500 ಸ್ಕ್ರೀನ್​ನಲ್ಲಿ 2ಡಿ ವರ್ಷನ್ ಬಿಡುಗಡೆ ಆಗಿದೆ.


ಅಲ್ಲದೇ, ಬೆಂಗಳೂರಲ್ಲಿ ಬೆಳಗ್ಗೆ 5.30 ರಿಂದಲೇ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಇಡೀ ದೇಶದಲ್ಲೇ ಫಸ್ಟ್ ಶೋ ಬೆಂಗಳೂರಿನ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿದೆ.  ವೀರೇಶ್ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿದ್ದು,  ವೀರೇಶ್ ಚಿತ್ರಮಂದಿರದ 12 ಶೋಗಳು ಸಂಪೂರ್ಣ ಹೌಸ್ ಫುಲ್ ಆಗಿದೆ.


ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ, ವಿರೇಶ್​ ಚಿತ್ರಮಂದಿರದವರೆಗೆ ಮೆರವಣಿಗೆ


ವಿಕ್ರಾಂತ್ ರೋಣ ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡಿದ್ದು, ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ, ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ, ಅಭಿಮಾನಿಗಳು ಸಹ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಟ್ರೈಲರ್ ನೋಡಿದ್ದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು