ಕಿಚ್ಚ ಸುದೀಪ್ (Kiccha Sudep) ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಬಾಕ್ಸ್ ಆಫೀಸ್ ನಲ್ಲಿ (Box Office) ಮೋಡಿ ಮಾಡುತ್ತಿದೆ. ಕಿಚ್ಚನ ಅಭಿನಯ ಹಾಗೂ ಕಥೆಗೆ ಜನ ಮನಸೋತಿದ್ದಾರೆ. ವಿಶ್ವದಾದ್ಯಂತ ಬಿಡುಗಡೆಯಾಗಿರುವ ಈ ಸಿನಿಮಾ ಸ್ಯಾಂಡಲ್ವುಡ್ಗೆ (Sandalwood) ಮತ್ತೊಂದು ಗರಿ ಎನ್ನಬಹುದು. ಬಿಡುಗಡೆಯಾಗಿ ನಾಲ್ಕು ದಿನವಾಗಿದ್ದು, ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಲೆಕ್ಷನ್ ವಿಚಾರಕ್ಕೆ ಬಂದರೆ ಸಹ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದು, ನಾಲ್ನೆ ದಿನದ ಸಿನಿಮಾ ಕಲೆಕ್ಷನ್ ಹೇಗಿದೆ ಎಂಬುದು ಇಲ್ಲಿದೆ.
100 ಕೋಟಿ ಕ್ಲಬ್ ಸೇರಿದ ಸಿನಿಮಾ
ಸದ್ಯ ಸಿನಿಮಾ 100 ಕೋಟಿ ರೂ ಕಲೆಕ್ಷನ್ ಮಾಡುವಂತ ಸಾಗುತ್ತಿದೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ ನಾಲ್ಕನೇ ದಿನದಂದು ಚಿತ್ರ 15 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ವರದಿಗಳ ಪ್ರಕಾರ, ದಕ್ಷಿಣ ಸಿನಿಮಾ ರಂಗದ ಮುಂದಿನ ದೊಡ್ಡ ಚಿತ್ರ ವಿಕ್ರಾಂತ್ ರೋಣ ಎನ್ನಬಹುದು.
ಕಿಚ್ಚ ಸುದೀಪ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೊದಲ ದಿನವೇ 33-35 ಕೋಟಿ ರೂಪಾಯಿಗಳನ್ನು ಗಳಿಸಿದೆ. ನಂತರ ಮೂರು ದಿನಗಳಲ್ಲಿ ಸುಮಾರು 80 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದ್ದು, ನಾಲ್ಕನೇ ಅಂದರೆ ಭಾನುವಾರ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ವಿಶ್ವಾದ್ಯಂತ 100 ಕೋಟಿ ರೂ.ಗಳನ್ನು ದಾಟಿದೆ.
ಅಧಿಕೃತ ಬಾಕ್ಸ್ ಆಫೀಸ್ ವರದಿ ಇನ್ನೂ ಬಂದಿಲ್ಲವಾದರೂ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ವಿಕ್ರಾಂತ್ ರೋಣಾ ಭರ್ಜರಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಈ ವರ್ಷ ಕನ್ನಡದ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಈ ವರ್ಷದ ಆರಂಭದಲ್ಲಿ, ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದಿತ್ತು, ಅಲ್ಲದೇ, ಬಾಕ್ಸ್ ಆಫೀಸ್‌ನಲ್ಲಿ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ವಿಕ್ರಾಂತ್ ರೋಣ ನಟಿ ನೀತಾ ಆಯ್ಕೆಯಾಗಿದ್ದು ಹೀಗಂತೆ, ಈ ಸುಂದರಿ ಬಗ್ಗೆ ನಿಮಗೆಷ್ಟು ಗೊತ್ತು?
ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಸುಮಾರು 325 ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಉಳಿದಂತೆ 325 ಥಿಯೇಟರ್, 65 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ 2500ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲೆ 1200 ಶೋ ನೀಡಲಾಗಿದೆ.
ಕಿಚ್ಚನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ
ಸ್ಯಾಂಡಲ್ವುಡ್ನ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಾಗೂ ಕೆಜಿಎಫ್ 2 ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿದ್ದವು. ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾ. ಅಲ್ಲದೇ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಸಹ 150 ಕೋಟಿ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ತೆಲುಗಿನಲ್ಲಿ ಬ್ಯುಸಿ ಇದ್ದಾರೆ ನವ್ಯಾ ರಾವ್, ಕನ್ನಡಕ್ಕೆ ಯಾವಾಗ ಬರ್ತೀರಾ ಎಂದ ಫ್ಯಾನ್ಸ್
ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗಿರುವುದರಿಂದ ಜನರ ನಿರೀಕ್ಷೆ ಹೆಚ್ಚಿತ್ತು. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ